Advertisement

ರಾಹುಲ್ ಗಾಂಧಿ ಸೆಂಟ್ರಲ್ ವಿಸ್ಟಾಯಂತಹ ಕಾಮಗಾರಿ ಅನಗತ್ಯ ಎನ್ನುವುದು ಹಾಸ್ಯಾಸ್ಪದ: ಬಿಜೆಪಿ

01:54 PM Jun 05, 2021 | Team Udayavani |

ಬೆಂಗಳೂರು: ದೇಶದಲ್ಲಿ ಕೋವಿಡ್ ಸಂಕಷ್ಟವಿದ್ದರೂ ಇಟಲಿಯಲ್ಲಿ ಕೋವಿಡ್ ಲಸಿಕೆ ನೀಡಲು ಆರಂಭಿಸಿದ ದಿನದಂದೇ ಕಾಂಗ್ರೆಸ್ ಯುವರಾಜ‌ ರಾಹುಲ್ ಗಾಂಧಿ ಇಟಲಿ ದೇಶಕ್ಕೆ ಪ್ರಯಾಣ ಬೆಳೆಸಿದ್ದರು. ಇಂತಹ ವ್ಯಕ್ತಿಗಳು ಇಂದು, ದೇಶ ಸಂಕಷ್ಟದಲ್ಲಿರುವಾಗ ಸೆಂಟ್ರಲ್ ವಿಸ್ಟಾದಂತಹ ಕಾಮಗಾರಿಗಳು ಅನಗತ್ಯ ಎನ್ನುವುದು ಹಾಸ್ಯಾಸ್ಪದ ಎಂದು ಕರ್ನಾಟಕ ಬಿಜೆಪಿ ಟೀಕೆ ಮಾಡಿದೆ.

Advertisement

ಟ್ವಟ್ಟರ್ ನಲ್ಲಿ ಕಾಂಗ್ರೆಸ್ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ. ಪ್ರಧಾನಿ ಮೋದಿ ಸರ್ಕಾರ ‌ರೂಪಿಸುತ್ತಿರುವ ಸೆಂಟ್ರಲ್‌ ವಿಸ್ಟಾ ಯೋಜನೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಮಾಡುತ್ತಿರುವುದೇನು? ತನ್ನದೇ ಆಡಳಿತವಿರುವ ರಾಜ್ಯಗಳಲ್ಲಿ ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಯೋಜನೆಗಳ ಬಗ್ಗೆ ಕಾಂಗ್ರೆಸ್ ಮಾತನಾಡುತ್ತಿಲ್ಲವೇಕೆ ಎಂದು ಪ್ರಶ್ನಿಸಿದೆ.

ರಾಜಸ್ಥಾನದಲ್ಲಿ 266 ಕೋಟಿ ವೆಚ್ಚದಲ್ಲಿ ಶಾಸಕರ ಭವನ, ಮಹಾರಾಷ್ಟ್ರದಲ್ಲಿ 900 ಕೋಟಿ ವೆಚ್ಚದಲ್ಲಿ ಶಾಸಕರ ವಸತಿ ನಿರ್ಮಾಣ ಮಾಡಲಾಗುತ್ತಿದೆ. ಆದರೆ, ದೇಶದ ಪ್ರಜಾಪ್ರಭುತ್ವದ ಸಂಕೇತವಾಗಲಿರುವ ನೂತನ ಸಂಸತ್‌ ಭವನಕ್ಕೆ ಮಾತ್ರ ಕಾಂಗ್ರೆಸ್‌ ವಿರೋಧ ಎಂದು ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ:ಕೋವಿಡ್ ಸಂಕಷ್ಟದಲ್ಲೂ ಲೋಕೋಪಯೋಗಿ ಇಲಾಖೆ ಶೇ.99 ರಷ್ಟು ಸಾಧನೆ : ಕಾರಜೋಳ

ಕಾಂಗ್ರೆಸ್‌ ಇಂದು ಏನನ್ನು ತಪ್ಪು ಎಂದು ಬಿಂಬಿಸುತ್ತಿದೆಯೋ ಆ ತಪ್ಪುಗಳನ್ನು ನೆಹರೂ ಕಾಲದಿಂದಲೂ ಮಾಡುತ್ತಲೇ ಬಂದಿದೆ. ನೆಹರೂ ಸ್ಮಾರಕ – 52 ಎಕರೆ, ಇಂದಿರಾ ಸ್ಮಾರಕ – 45 ಎಕರೆ, ರಾಜೀವ್‌ ಸಮಾಧಿ – 15 ಎಕರೆಯಿದೆ. ಆದರೆ, ಇದಕ್ಕಿಂತ ಕಡಿಮೆ ಜಾಗ ವಿನಿಯೋಗವಾಗಲಿರುವ ಸೆಂಟ್ರಲ್‌ ವಿಸ್ಟಾ ಯೋಜನೆಗೆ ಕಾಂಗ್ರೆಸ್ ವಿರೋಧವೇಕೆ ಎಂದಿದೆ.

Advertisement

ಅಧಿಕಾರದಲ್ಲಿದ್ದಾಗ ‍‍& ಅಧಿಕಾರದಲ್ಲಿಲ್ಲದಿದ್ದಾಗ ಕಾಂಗ್ರೆಸ್ ಚಾಚೂ ತಪ್ಪದೆ ಮಾಡುವ ಒಂದೇ ಒಂದು ಕೆಲಸವೆಂದರೆ ದೇಶದ ಹಿತಾಸಕ್ತಿಯ ವಿರುದ್ಧ ಕಾರ್ಯಾಚರಿಸುವುದು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಡ್ಡಿಪಡಿಸಿದ್ದ ಕಾಂಗ್ರೆಸ್‌ ಈಗ ನೂತನ ಸಂಸತ್‌ ಭವನಕ್ಕೆ ವಿರೋಧಿಸುತ್ತಿದೆ. ಟೂಲ್‌ ಕಿಟ್‌ ಕಾಂಗ್ರೆಸ್ ಎಂದು ಬಿಜೆಪಿ ಟೀಕಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next