Advertisement
ಭಾನುವಾರ ಶಿರಸಿಯಲ್ಲಿ ನಡೆದ ಬೃಹತ್ ರ್‍ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ‘500 ವರ್ಷಗಳ ಕನಸು ನಿಮ್ಮ ಮತದ ಶಕ್ತಿಯಿಂದ ಸಾಧ್ಯವಾಯಿತು. ರಾಮ ಮಂದಿರ ಪುಣ್ಯ, ಪವಿತ್ರ ಕಾರ್ಯ. ಪುಣ್ಯದ ಹಕ್ಕುದಾರ ಯಾರು? ಮತ ನೀಡಿ ಶಕ್ತಿಯುತ ಸರ್ಕಾರ ನೀಡಿದ ನೀವೇ ಪುಣ್ಯವಂತರು’ಎಂದರು.
Related Articles
Advertisement
‘ನಮ್ಮ ಸರಕಾರ ದೇಶದ್ರೋಹಿ ಕೃತ್ಯ ಮಾಡುತ್ತಿದ್ದ ಪಿಎಫ್ ಐ ಸಂಘಟನೆಯನ್ನು ನಿಷೇಧ ಮಾಡಿತು. ಕಾಂಗ್ರೆಸ್ ಆ ಸಂಘಟನೆಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಕಾಂಗ್ರೆಸ್ ಗೆ ಮತ ನೀಡಿದರೆ ದೇಶ ದ್ರೋಹಿಗಳ ಸಂಖ್ಯೆ ಹೆಚ್ಚುತ್ತದೆ’ ಎಂದು ವಿಪಕ್ಷಗಳ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿದರು.
‘ಹಿಂದೆ ನಮ್ಮ ದೇಶಕ್ಕೆ ಉಗ್ರರು ನುಸುಳಿ ಜನರ ಹತ್ಯೆಗೈಯುತ್ತಿದ್ದರು. ನಾವು ಸರ್ಜಿಕಲ್ ಸ್ಟ್ರೈಕ್ ಮಾಡಿಸಿದೆವು. ಈಗ ಕಾಲ ಬದಲಾಗಿದ್ದುದೇಶದೊಳಗೆ ನುಗ್ಗಿ ಹೊಡೆಯುತ್ತೇವೆ’ ಎಂದರು.
‘ಕಾಂಗ್ರೆಸ್ ಭಾರತದ ಸಂಸ್ಕೃತಿಗೆ ನಷ್ಟ ಉಂಟುಮಾಡಿದೆ . ನಿಜವಾದ ಇತಿಹಾಸವನ್ನು ತಿರುಚಿದೆ. ಛತ್ರಪತಿ ಶಿವಾಜಿ ಮಹಾರಾಜ್, ರಾಣಾ ಪ್ರತಾಪ್ ರಂತಹ ವೀರರ ಕಥೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸದಂತೆ ಷಡ್ಯಂತ್ರ ಕಾಂಗ್ರೆಸ್ ಮಾಡಿತ್ತು’ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಬಿಸಿಲಿನಲ್ಲೂ ನಿಂತು ಸಾವಿರಾರು ಮಂದಿ ಭಾಷಣ ಕೇಳುತ್ತಿದ್ದರು. ಅವರ ಕ್ಷಮೆ ಯಾಚಿಸಿದ ಪ್ರಧಾನಿ ಮೋದಿ, ‘ನಾನು ನಿಮ್ಮ ಈ ಶ್ರಮವನ್ನೂ ಎಂದಿಗೂ ವ್ಯರ್ಥವಾಗಲು ಬಿಡುವುದಿಲ್ಲ’ ಎಂದರು.
ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಉತ್ತರಕನ್ನಡದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ದಾಖಲೆ ಮತಗಳಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.
ಪ್ರಧಾನಿ ಮೋದಿ ಅವರಿಗೆ ಗ್ರಾಮೀಣ, ಜಾನಪದ ಸಾಂಸ್ಕೃತಿಕ ಕಲೆ ಬೇಡರ ವೇಷದ ಕಿರೀಟ, ಮಲೆನಾಡು-ಉತ್ತರ ಕನ್ನಡದ ಪ್ರಮುಖ ಬೆಳೆಗಳಾದ ಅಡಿಕೆ, ಕಾಳುಮೆಣಸು ಮತ್ತು ಏಲಕ್ಕಿಯಿಂದ ಮಾಡಿದಂತಹ ವಿಶಿಷ್ಟ ಹಾರ, ಗ್ರಾಮದೇವತೆಯಾದ ಶ್ರೀ ಮಾರಿಕಾಂಬಾ ದೇವಿಯ ಪ್ರತಿಮೆ ನೀಡಿ ಸನ್ಮಾನಿಸಲಾಯಿತು.