Advertisement
ತಮ್ಮ ಫಾರ್ಮಹೌಸ್ ನಲ್ಲಿ ಜ.28ರ ಭಾನುವಾರ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಹೋಗಿದ್ದ ಜಗದೀಶ ಶೆಟ್ಟರ್ ಬಿಜೆಪಿಗೆ ಮರಳಿ ಬಂದಿದ್ದಾರೆ. ಇವರಂತೆಯೇ ಕಾಂಗ್ರೆಸ್ ನಲ್ಲಿರುವ ಲಕ್ಷ್ಮಣ ಸವದಿ ಸೇರಿ ಹಲವರು ಬಿಜೆಪಿಗೆ ಮರಳಲಿದ್ದಾರೆ. ಆ ಪಕ್ಷವನ್ನು ನಾವು (ಬಿಜೆಪಿಯವರು), ನೀವು (ಮತದಾರರು) ಮುಳುಗಿಸಬೇಕಾದ ಅಗತ್ಯವಿಲ್ಲ. ಈಗ ಅಲ್ವಸ್ವಲ್ಪ ಉಸಿರಾಡುತ್ತಿದ್ದು, ಕೆಲವೇ ತಿಂಗಳಲ್ಲಿ ಅದೂ ನಿಂತು ಹೋಗುತ್ತದೆ ಎಂದರು.
Related Articles
Advertisement
ಸರ್ಕಾರದಿಂದ ರೈತರಿಗೆ ದ್ರೋಹ:
ಬರ ಪರಿಹಾರ ಕೊಡುವ ವಿಚಾರದಲ್ಲಿ ಸರ್ಕಾರ ರೈತರಿಗೆ ದೊಡ್ಡ ದ್ರೋಹ ಮಾಡುತ್ತಿದೆ. ಸಿದ್ದರಾಮಯ್ಯನವರ ಕಾಂಗ್ರಸ್ ಸರ್ಕಾರ ಮೋದಿಜಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ದುಡ್ಡು ಕೊಟ್ಟಿಲ್ಲ ಎಂದು ಗೂಬೆ ಕೂರಿಸುತ್ತಿದೆ. ಕೇಂದ್ರ ಸರ್ಕಾರವೇ ಎಲ್ಲ ಮಾಡೋದಾದರೆ ನಿಮ್ಮನ್ಯಾಕೆ ಜನ ಆಯ್ಕೆ ಮಾಡಬೇಕು. ಎಲ್ಲರಿಗೂ ಅನ್ನ ಹಾಕುವ ರೈತನಿಗ ಇದುವರೆಗೆ ನಯಾಪೈಸೆ ಪ್ರಯೋಜನ ಒದಗಿಸಿಲ್ಲ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ನೇರವಾಗಿ ರೈತರ ಖಾತೆಗೆ ವಾರ್ಷಿಕ 3 ಕಂತುಗಳಲ್ಲಿ 6000 ರೂ ಬರುತ್ತದೆ. ಇದಕ್ಕೆ ಹಿಂದಿನ ನಮ್ಮ ಸರ್ಕಾರ 4000 ಸೇರಿಸಿ 10 ಸಾವಿರ ಕೊಡುತ್ತಿದ್ದೆವು. ಈ ಸರ್ಕಾರ ಇದನ್ನು ಮುಂದುವರೆಸಿಲ್ಲ ಎಂದರು.
ಡೀಜೈಲ್ ಸಬ್ಸಿಡಿ ಎಕರೆಗೆ 250 ಬಂದ್ ಮಾಡಿದ್ದಾರೆ. ರೈತರ ಮಕ್ಕಳಿಗೆ ಜಾತ್ಯಾತೀತವಾಗಿ 8ನೇ ಕ್ಲಾಸ್ ನವರಿಗೆ 2 ಸಾವಿರ, ಡಿಗ್ರಿಯವರಿಗೆ 11 ಸಾವಿರದವರೆಗೆ ಪ್ರತಿ ವರ್ಷ ಉಚಿತ ಸ್ಕಾಲರ್ ಶಿಪ್ ಯೋಜನೆ ನಿಲ್ಲಿಸಿದ್ದಾರೆ. ನಮ್ಮ ಸರ್ಕಾರದಲ್ಲಿ ಯಾವ್ಯಾವುದನ್ನು ರೈತರಿಗೆ ಕೊಟ್ಟಿದ್ದೆವೂ ಅವೆಲ್ಲವನ್ನೂ ನಿಲ್ಲಿಸಿದ್ದಾರೆ. ಇವತ್ತು ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 6 ಸಾವಿರ ರೂ. ನಗದು ಸೌಲಭ್ಯ ಮಾತ್ರ ಸಿಗುತ್ತಿದೆ. ಕೇಂದ್ರ ಸರ್ಕಾರದ ಫಸಲ್ ಬಿಮಾ ಯೋಜನೆಯಡಿ ಹೆಕ್ಟರ್ ಗೆ 40 ಸಾವಿರ ರೂ. ಪರಿಹಾರ ಸಿಗುತ್ತಿದ್ದು, ಇದನ್ನಾದರೂ ವಿಮಾ ಕಂಪನಿಗಳಿಂದ ಕೊಡಿಸುವ ಕೆಲಸವನ್ನು ಬರ ಪೀಡಿತ ಮತಕ್ಷೇತ್ರಗಳ ಶಾಸಕರು ಮಾಡಬೇಕು ಎಂದರು.