ಅದ್ಯಪಾಡಿ: ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅದ್ಯಪಾಡಿಯ ಕೊಲೊಟ್ಟು- ಅರ್ಬಿ- ಮಾಟೆಬೈಲು ರಸ್ತೆ ಹದಗೆಟ್ಟಿದ್ದು, ಇದನ್ನು ದುರಸ್ತಿಪಡಿಸುವ ವಿಷಯದಲ್ಲಿ ರಾಜ್ಯ ಸರಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಅದ್ಯಪಾಡಿ ಗ್ರಾಮ ಸಮಿತಿ ಹಾಗೂ ಸ್ಥಳೀಯ ನಾಗರಿಕರಿಂದ ರವಿವಾರ ಅದ್ಯಪಾಡಿಯಲ್ಲಿ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಪಂಚಾಯತ್ ಮಾಜಿ ಸದಸ್ಯ ಹಾಗೂ ಕ್ಷೇತ್ರದ ಬಿಜೆಪಿ ಉಪಾಧ್ಯಕ್ಷ ಶಿವಪ್ಪ ಬಂಗೇರ ಅವರು, ಈ ರಸ್ತೆಯನ್ನು ಸುಮಾರು 7 ವರ್ಷಗಳಿಂದ ದುರ ಸ್ತಿ ಪ ಡಿ ಸ ದ ಕಾರಣ ಗುಂಡಿಗಳು ಬಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ ಎಂದರು.
ರಸ್ತೆಯು ಸುಮಾರು 3 ಕಿ.ಮೀ. ನಷ್ಟು ಸಂಪೂರ್ಣ ಹದಗೆಟ್ಟಿದೆ. ಈ ಪ್ರದೇ ಶ ದಲ್ಲಿ 208 ಮನೆಗಳಿವೆ. ರಸ್ತೆಗೆ ಟೆಂಡರ್ ಆಗಿದೆ ಎಂದು ಕೆಲವು ವರ್ಷಗಳಿಂದ ಹೇಳಲಾಗುತ್ತಿದ್ದರೂ ಇನ್ನೂ ಕಾಮಗಾರಿ ಆರಂಭಿಸದೆ ಜನರನ್ನು ಮೋಸಗೊಳಿಸಲಾಗುತ್ತಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭಿಸದಿದ್ದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.
ಮನವಿ ಸಲ್ಲಿಸಿದ್ದರೂ ಪ್ರಯೋಜನವಿಲ್ಲ
ತಾ.ಪಂ. ಸದಸ್ಯ ವಿಶ್ವನಾಥ ಶೆಟ್ಟಿ ಮಾತನಾಡಿ, ಈಗಾಗಲೇ ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ಶಾಸಕರಿಗೆ ಮನವಿ ನೀಡಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹದಗೆಟ್ಟ ರಸ್ತೆಯಿಂದ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದ್ದರೂ ಜನಪ್ರತಿನಿಧಿಗಳು ಕೈಕಟ್ಟಿ ಕುಳಿತಿದ್ದಾರೆ. ಅವರು ಕೇಂದ್ರ ಸರಕಾರದ ವಿವಿಧ ಯೋಜನೆಗಳ ಚೆಕ್ ವಿತರಣೆಯಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ರೈತ ಮೋರ್ಚಾದ ಅಧ್ಯಕ್ಷ ರೂಪೇಶ್ ಶೆಟ್ಟಿ ಅದ್ಯಪಾಡಿ ಮಾತನಾಡಿ, ಶಾಸಕರ ಅನುದಾನಗಳು ಕೇವಲ ಕಾಂಗ್ರೆಸ್ ಪಂಚಾಯತ್ ಇದ್ದಲ್ಲಿ ಮಾತ್ರ ಬಿಡುಗಡೆಗೊಳ್ಳುತ್ತಿದ್ದು, ಇಡೀ ಕ್ಷೇತ್ರದ ಸಮಾನ ಅಭಿವೃದ್ಧಿಗೆ ಬಳಕೆಯಾಗುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಯುಡಿಯೂರಪ್ಪ ನೇತೃತ್ವದ ಸರಕಾರ ಹಾಗೂ ಶಾಸಕ ಕೃಷ್ಣ ಜೆ. ಪಾಲೆಮಾರ್ ಅಧಿಕಾರದಲ್ಲಿದ್ದಾಗ ಅದ್ಯಪಾಡಿಯ ರಸ್ತೆ ಕೆಲಸಗಳು ನಡೆದಿವೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ಕೇಂದ್ರ ಸರಕಾರದ ಅನುದಾನಗಳು ಬಂದಿದೆಯಾದರೂ ನಮ್ಮ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ ಎಂದು ಹೇಳಿದರು.
ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಅಮರ್ ಶೆಟ್ಟಿ, ಯಾದವ ಕುಲಾಲ್, ಬಿಜೆಪಿ ಯುವ ಮೋರ್ಚಾದ ಶೋಧನ್ ಬಂಗೇರ, ಬಜರಂಗ ದಳ ಜಿಲ್ಲಾ ಸಂಚಾಲಕ ಭುಜಂಗ ಕುಲಾಲ್, ಬಿಜೆಪಿ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.