Advertisement

ರಮೇಶ್‌ಕುಮಾರ್‌ ವಿರುದ್ಧ ಬಿಜೆಪಿ ಆಕ್ರೋಶ

07:21 AM Nov 17, 2017 | Team Udayavani |

ವಿಧಾನ ಪರಿಷತ್ತು: ಖಾಸಗಿ ವೈದ್ಯಕೀಯ ಸಂಸ್ಥೆಗಳ ಮೇಲೆ ಸರ್ಕಾರದ ನಿಯಂತ್ರಣ ಹೊಂದುವ ವಿಧೇಯಕ ವಿರೋಧಿಸಿ ವೈದ್ಯರು ನಡೆಸುತ್ತಿರುವ ಮುಷ್ಕರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ಬಿಜೆಪಿ ಆರೋಗ್ಯ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ರನ್ನು ಗುರಿಯಾಗಿಸಿದ್ದು, ಗುರುವಾರವೂ ಅವರ ವಿರುದ್ಧ ವಾಗ್ಧಾಳಿ ಮುಂದುವರಿಸಿದೆ.

Advertisement

“ವೈದ್ಯರ ಮುಷ್ಕರದ ಬಗ್ಗೆ ಕೇಳಿದಾಗ, ನನ್ನನ್ನು ಕೇಳಬೇಡಿ, ನನಗೆ ಸಂಬಂಧವಿಲ್ಲ, ನಮ್ಮ ನಾಯಕರನ್ನು ಕೇಳಿ ಎಂದು ಹೇಳುತ್ತಿರುವ ಆರೋಗ್ಯ ಸಚಿವ ರಮೇಶ್‌ಕುಮಾರ್‌ ರಾಜೀನಾಮೆ ಕೊಟ್ಟು ಹೊರನಡೆಯಲಿ ಎಂದು ಪ್ರತಿಪಕ್ಷ ನಾಯಕ ಈಶ್ವರಪ್ಪ ಹೇಳಿದರು. ಅಲ್ಲದೇ, ಮತ್ತೆ ರಮೇಶ್‌ ಕುಮಾರ್‌ ವಿರುದ್ಧ ಕೊಲೆಗಡುಕ ಪದ ಬಳಸಿದರು. ಇದರಿಂದ ಸದನದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ
ಸದಸ್ಯರ ನಡುವೆ ವಾಗ್ವಾದ ನಡೆದು ಕೋಲಾಹಲದ ವಾತಾವರಣ ನಿರ್ಮಾಣವಾಯಿತು.

ಮಾತುಕತೆಗೆ ಕರೆಯಿರಿ: ಪರಿಷತ್‌ನಲ್ಲಿ ವೈದ್ಯರ ಮುಷ್ಕರದ ಬಗ್ಗೆ ಪ್ರಸ್ತಾಪಿಸಿದ ಈಶ್ವರಪ್ಪ, “ವೈದ್ಯರು ಮತ್ತು ಸರ್ಕಾರಕ್ಕೆ ಸ್ವಪ್ರತಿಷ್ಠೆಗಿಂತ ಜನರ ಪ್ರಾಣ ರಕ್ಷಣೆ ಮುಖ್ಯ. ವೈದ್ಯರನ್ನು ಮಾತುಕತೆಗೆ ಕರೆಯಿರಿ. ಒಂದು ವೇಳೆ ಅವರು ಮಾತುಕತೆಗೆ
ಬಾರದೆ ತಮ್ಮ ಹಠ ಮುಂದುವರಿಸಿದರೆ ನಾವು ವೈದ್ಯರನ್ನು ಬೆಂಬಲಿಸುವುದಿಲ್ಲ’ ಎಂದರು. ಅಲ್ಲದೇ, “25 ಜನರ ಸಾವಿಗೆ ಕಾರಣವಾದ ಸರ್ಕಾರ ಮತ್ತು ಆರೋಗ್ಯ ಸಚಿವರು ಕೊಲೆ ಗಡಕರು’ ಎಂದು ಆಕ್ರೋಶ ವ್ಯಕ್ತಪಡಿಸಿದರು. “ವೈದ್ಯರ ಧರಣಿಗೆ ಪ್ರಚೋದನೆ ನೀಡಿದ ನೀವು (ಬಿಜೆಪಿ) ಕೊಲೆಗಡುಕ’ ಎಂದು ಸಿಎಂ ತಿರುಗೇಟು ನೀಡಿದರು. ಈಶ್ವರಪ್ಪನವರು ಬಳಸಿದ ಕೊಲೆ 
ಗಡುಕ ಪದಕ್ಕೆ ಕಾಂಗ್ರೆಸ್‌ನ ಎಲ್ಲ ಸಚಿವರು, ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ ಎರಡೂ ಕಡೆಯ ಸದಸ್ಯರ ನಡುವೆ ಮಾತಿನ ಚಕಮಕಿ ಮುಂದುವರಿಯಿತು. ಮಾತು ಮುಂದುವರಿಸಿದ ಸಿದ್ದರಾಮಯ್ಯ, “ವೈದ್ಯರ ನಿಯೋಗ ನನ್ನೊಂದಿಗೆ ಚರ್ಚಿಸಿದ ಸಂದರ್ಭದಲ್ಲಿ ಮುಷ್ಕರ ಹಿಂದೆಗೆದು  ಕೊಳ್ಳುವ ಭಾವನೆ ವ್ಯಕ್ತವಾಗಿತ್ತು. ಆದರೆ, ನೀವು (ಬಿಜೆಪಿ) ಹೋಗಿ ಧರಣಿ ಮುಂದುವರಿಸಲು ಪ್ರಚೋದನೆ ನೀಡಿದ್ದರಿಂದ ವೈದ್ಯರು ಮುಷ್ಕರ ಮುಂದುವರಿಸಿ ಜನ ಸಾಯುವಂತಾಗಿದೆ. ನಿಜವಾದ ಕೊಲೆಗಡುಕರು ನೀವು’ ಎಂದು ಬಿಜೆಪಿ
ಸದಸ್ಯರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. 

“ವಿಧೇಯಕದಲ್ಲಿ ಶಿಕ್ಷೆ, ಜೈಲು ಎಂಬ ಅಂಶಗಳಿವೆ ಎಂಬ ಊಹಾಪೋಹಗಳಿಗೆ ಅವಕಾಶ ಬೇಡ. ವಿಧೇಯಕದಲ್ಲಿ 2- 3 ಸೆಕ್ಷನ್‌ಗಳಿಗೆ ವೈದ್ಯರು ಆಕ್ಷೇಪ ತೋರಿದ್ದಾರೆ. ವಿಧೇಯಕ ಮಂಡ ನೆಗೆ ಮೊದಲು ಖಾಸಗಿ ವೈದ್ಯರ ಸಂಘದ ಪ್ರತಿನಿಧಿಗಳನ್ನು ಕರೆದು ಚರ್ಚಿಸಲಾಗುವುದು’ ಎಂದರು. 

xನನ್ನ ಕೊನೆ ಉಸಿರು ಇರುವವರೆಗೂ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಇರುತ್ತೇನೆ. ನನ್ನ ಅವರ ಸ್ನೇಹ 40 ವರ್ಷಗಳದ್ದು. ಅವರ ಕಷ್ಟ ಕಾಲದಲ್ಲಿ ಅವರೊಂದಿಗೆ ಹೆಚ್ಚು ಇದ್ದವನು ನಾನು. ನನ್ನ-ಅವರ ನಡುವೆ ಭಿನ್ನಾಭಿಪ್ರಾಯದ ಯತ್ನಕ್ಕೆ ಮುಂದಾಗಬೇಡಿ. ನನ್ನ ಸೈದ್ಧಾಂತಿಕ ಆಲೋಚನೆಗೆ ಮುಖ್ಯಮಂತ್ರಿಗಳು ಎಂದೂ ತಡೆಯೊಡ್ಡಿಲ್ಲ. ನನ್ನ ಮತ್ತು ಮುಖ್ಯಮಂತ್ರಿಯವರ ನಡುವೆ ಹೊಂದಾಣಿಕೆ ಇಲ್ಲ ಎಂಬುದು ಬೇಜವಾಬ್ದಾರಿತನದ ಹೇಳಿಕೆ.
ಕೆ.ಆರ್‌.ರಮೇಶ್‌ಕುಮಾರ್‌, ಆರೋಗ್ಯ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next