Advertisement

ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

10:09 AM Aug 03, 2017 | |

ವಿಜಯಪುರ: ರಾಜ್ಯದ 1,500 ಕರೆಗಳನ್ನು ಡಿ-ನೋಟಿಫಿಕೇಶನ್‌ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಕೂಡಲೇ ಇಂಥ ನಿರ್ಧಾರದಿಂದ ಹಿಂದೆ ಸರಿಯಬೇಕು. ಜಿಲ್ಲೆಯ ಎಲ್ಲ ಕೆರೆಗಳನ್ನು ಪುನರುಜ್ಜೀವನ ಮಾಡಿ ನೀರು ತುಂಬಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ಬುಧವಾರ ನಗರದಲ್ಲಿ ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಕೆರೆ ಉಳಿಸಿ, ಕರೆಗಳಿಗೆ ನೀರು ತುಂಬಿಸಿ ಎಂದು ಮನವಿ ಸಲ್ಲಿಸಿದರು. ರೈತ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷ ಶಂಕರಗೌಡ ಪಾಟೀಲ ಮಾಡನಾಡಿ, ಕಳೆದ 4 ವರ್ಷದಲ್ಲಿ ವಿಜಯಪುರ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಭೀಕರ ಬರ ಆವರಿಸಿದೆ. ಅಂತರ್ಜಲ ಸಂಪೂರ್ಣ ಬತ್ತಿ ಕೆರೆಗಳೆಲ್ಲ ಬತ್ತಿ ಬರಿದಾಗಿವೆ. ನೀರಿಲ್ಲದೇ ಜನ-ಜಾನುವಾರುಗಳ, ಪಶು-ಪಕ್ಷಿಗಳು ನೀರಿಗಾಗಿ ಹಾಹಾಕರಿಸಬಹುದು. ಜಿಲ್ಲೆಯ ಜಲಾಶಯದ ಅಚ್ಚುಕಟ್ಟು, ಕಂದಾಯ ವ್ಯಾಪ್ತಿ, ಪಂಚಾಯತ್‌,
ಸಣ್ಣ ನೀರಾವರಿ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ಆ. 30ರೊಳಗೆ ತುಂಬಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ರಾಜ್ಯದ 1,500 ಕೆರೆಗಳನ್ನು ರಾಜ್ಯ ಸರಕಾರ ಡಿ ನೋಟಿಫೈ ಮಾಡುವ ಮೂಲಕ ಭೂ ಅಕ್ರಮಕ್ಕೆ ಕೈ ಹಾಕಿರುವ ಗುಮಾನಿ ಇದೆ. ಸರಕಾರ ಕ್ರಮದಿಂದ ತಕ್ಷಣ ಹಿಂದೆ ಸರಿಯಬೇಕು. ಕೆರೆಗಳ ಕಬಳಿಕೆ ಪರಿಣಾಮ ರಾಜ್ಯದಲ್ಲಿ ಅಂತರ್ಜಲ ಹಿಂದಿಗಿಂತ ಅಧಿಕ ಪ್ರಮಾಣದಲ್ಲಿ ಕುಸಿಯಲು ಕಾರಣವಾಗಿದೆ. ಕೃಷಿ ಬೆಳೆಯ ಮಾತಿರಲಿ ತೋಟಗಾರಿಕೆ ಬೆಳೆಗಳೂ ನಾಶವಾಗಿದೆ. ಇಂತಹ ಸ್ಥಿತಿಯಲ್ಲಿ ಅಂತರ್ಜಲ ಹೆಚ್ಚಳಕ್ಕಾಗಿ ಕೆರೆ ತುಂಬಿಸುವ ಯೋಜನೆ ಅನುಷ್ಠಾನಕ್ಕೆ ಬದಲಾಗಿ ಕೆರೆಗಳನ್ನೇ ಮಾರಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ಖಂಡನಾರ್ಹ ಎಂದು ಕಿಡಿಕಾರಿದರು.

ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಿಲ ಜಮಾದಾರ, ಜಿಲ್ಲಾಧ್ಯಕ್ಷ ವಿಠಲ ಕಟಕದೊಂಡ, ರಾಜ್ಯ ಕಾರ್ಯಕಾರಿಣಿ ಸದಸ್ಯ ಚಂದ್ರಶೇಖರ ಕವಟಗಿ ಮಾತನಾಡಿದರು. ಸುರೇಶ ಬಿರಾದರ, ಶ್ರೀಶೈಲಗೌಡ ಬಿರಾದರ, ರಾಮು ಹೊಸಪೇಟ, ರವಿಕಾಂತ ಬಗಲಿ, ಬಸವರಾಜ ಬೈಚಬಾಳ, ವಿವೇಕ್‌ ಡಬ್ಬಿ, ಸಂಗರಾಜ ದೇಸಾಯಿ, ಗೋಪಾಲ ಕಾರಜೋಳ, ಪ್ರಭು ದೇಸಾಯಿ, ನಾಗೇಂದ್ರ ಮಾಯವಂಶಿ, ರಾಮು ಜಾಧವ, ಮಂಜುನಾಥ ವಂದಾಲ, ಅಪ್ಪುಗೌಡ ಪಾಟೀಲ (ಡೋಣೂರ), ಸಿದ್ದಪ್ಪ ಅವಟಿ, ರಾಜು ಶಾಹಪೇಟ, ಹನುಮಂತ ಬಿರಾದರ, ರಾಜುಗೌಡ ಪಾಟೀಲ (ಮಹಲ್‌), ರವಿ ಬಿಸನಾಳ, ಪದ್ಮಾವತಿ ಗುಡಿ, ರೇಖಾ ಪಾಟೀಲ, ಗೀತಾ ಕುಗನೂರ, ಪ್ರಕಾಶ ಅಕ್ಕಲಕೋಟ, ಬಸವರಾಜ ಹೂಗಾರ, ರಾಮಸಿಂಗ್‌ ಕನ್ನೊಳ್ಳಿ, ವಿಕ್ರಮ ಗಾಯಕವಾಡ, ಭರತ ಕೊಳಿ, ಅಲ್ತಾಫ್‌ ಇಟಗಿ, ಗೋಪಾಲ ಘಟಕಾಂಬಳೆ, ಕೃಷ್ಣಾ ಗುನ್ಹಾಳಕರ, ಮಳುಗೌಡ ಪಾಟೀಲ, ಶ್ರೀಕಾಂತ ರಾಥೋಡ, ಪಾಪು ಕಿತ್ತಳಿ, ಜಿ.ಬಿ. ಬಂಕೂರ, ರಾಜು ಜಾಧವ, ಪ್ರಕಾಶ ಚವ್ಹಾಣ, ಸಿದ್ದು ಬುಳ್ಳಾ , ರಾಜು ಜಾಧವ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

203 ಕೆರೆ ತುಂಬಲು ಕ್ರಮ: ಪಾಟೀಲ
ವಿಜಯಪುರ:
ವಿಜಯಪುರ ಜಿಲ್ಲೆಯ ಎಲ್ಲ 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಜಲ ಸಂಪನ್ಮೂಲ ಇಲಾಖೆಯಿಂದ 203 ಕೆರೆ ತುಂಬಿಸಲಾಗುತ್ತಿದೆ ಎಂದು ಜಲ ಸಂಪನ್ಮೂಲ ಸಚಿವ ಡಾ| ಎಂ.ಬಿ. ಪಾಟೀಲ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಸವನಬಾಗೇವಾಡಿ,
ಇಂಡಿ, ಸಿಂದಗಿ, ನಾಗಠಾಣ, ಮುದ್ದೇಬಿಹಾಳ,  ವರಹಿಪ್ಪರಗಿ, ಬಬಲೇಶ್ವರ ಹಾಗೂ ವಿಜಯಪುರ ನಗರ ಸೇರಿದಂತೆ ಜಿಲ್ಲೆಯ
ಎಲ್ಲಾ ವಿಧಾನಸಭೆ ಕ್ಷೇತ್ರಗಳ 203 ಕೆರೆಗಳಲ್ಲಿ, ಈಗಾಗಲೇ ವಿವಿಧ ಯೋಜನೆಗಳಲ್ಲಿ 60 ಕೆರೆ ತುಂಬಿಸಲು ಕ್ರಮ ಕೈಗೊಂಡಿದ್ದು, ಸದ್ಯ 33 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪ್ರಗತಿಯಲ್ಲಿವೆ ಎಂದು ವಿವರಿಸಿದ್ದಾರೆ.  ಇದಲ್ಲದೇ ಹೊಸದಾಗಿ ಮಂಜೂರಾತಿ ನೀಡಿದ
ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ 26 ಕೆರೆ, ಇಂಡಿ ವಿಧಾನಸಭಾ ಕ್ಷೇತ್ರ 23 ಕೆರೆ, ಸಿಂದಗಿ ವಿಧಾನಸಭಾ ಕ್ಷೇತ್ರ 11 ಕೆರೆ, ನಾಗಠಾಣ ವಿಧಾನಸಭಾ ಕ್ಷೇತ್ರ 37 ಕೆರೆ, ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ 32 ಕೆರೆ, ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರ 24 ಕೆರೆ, ಬಬಲೇಶ್ವರ ವಿಧಾನಸಭಾ ಕ್ಷೇತ್ರ 48 ಕೆರೆ, ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ 2 ಕೆರೆ ಸೇರಿದಂತೆ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 203 ಕೆರೆ ತುಂಬಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.

Advertisement

ಮತ್ತೂಂದೆಡೆ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರಡಿ ಮುಳವಾಡ, ಚಿಮ್ಮಲಗಿ, ಹೆರಕಲ್‌ ಏತ ನೀರಾವರಿ ಯೋಜನೆ ಹಾಗೂ ಹಂತ-1 ಮತ್ತು 2ರಲ್ಲಿನ ಆಲಮಟ್ಟಿ ಎಡದಂಡೆ ಕಾಲುವೆ ಅಡಿ ಜಿಪಂನ 38 ಕೆರೆ ತುಂಬಿಸಲು ವಿತರಣಾ ಹಾಗೂ ಲ್ಯಾಟರಲ್‌ ಕಾಮಗಾರಿಗಾಗಿ 54.10 ಕೋಟಿ ರೂ. ಟೆಂಡರ್‌ ಕರೆಯಲಾಗಿದೆ ಎಂದಿದ್ದಾರೆ. ವಿಜಯಪುರ ಜಿಲ್ಲೆಯ ತಿಕೋಟಾ ಪ್ಯಾಕೇಜ್‌ನಲ್ಲಿ 11 ಕೆರೆ, ಅಣಚಿ 9 ಕೆರೆ, ಸಂಖ 8 ಕೆರೆ, ಭೂಯ್ನಾರ 8 ಕೆರೆ ಹಾಗೂ ಐತಿಹಾಸಿಕ ಮಮದಾಪುರ, ಬೇಗಂ ತಲಾಬ, ಭೂತನಾಳ ಸೇರಿದಂತೆ ಸಪ್ತ ಕೆರೆಗಳ ತುಂಬಿಸುವ ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next