ಬೆಂಗಳೂರು : ಜಿಂದಾಲ್‌ಗೆ ಭೂಮಿ ನೀಡುವಮೈತ್ರಿ ಸರ್ಕಾರದ ನಿರ್ಧಾರ, ಬರ ನಿರ್ವಹಣೆ ವೈಫಲ್ಯ, ರೈತರ ಸಾಲಮನ್ನಾ ವಿಫಲ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜ್ಯ ಬಿಜೆಪಿ 2 ದಿನಗಳ ಕಾಲದ ಅಹೋರಾತ್ರಿ ಧರಣಿ ಯನ್ನು ಆರಂಭಿಸಿದೆ.
ಶುಕ್ರವಾರ ಬೆಳಗ್ಗೆ ನಗರದ ಆನಂದ್ ರಾವ್ ಸರ್ಕಲ್‌ನಲ್ಲಿರುವ ಗಾಂಧಿ ಪ್ರತಿಮೆ ಬಳಿ ಧರಣಿ ಆರಂಭಿಸಲಾಗಿದೆ. ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಧರಣಿ ಪ್ರಾರಂಭಿಸಲಾಗಿದೆ.
ಧರಣಿಯಲ್ಲಿ ಬಿಜೆಪಿಯ 105 ಶಾಸಕರು , 25 ಸಂಸದರು ಮತ್ತುಪ್ರಮುಖ ಮುಖಂಡರು ಪಾಲ್ಗೊಳ್ಳುತ್ತಿದ್ದಾರೆ. ಪ್ರತಿಭಟನೆಯ ನೇತೃತ್ವವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಹಿಸಿದ್ದಾರೆ.
ಬಿಜೆಪಿ ನಾಯಕರಾದ ಆರ್.ಅಶೋಕ್, ಕೆ.ಎಸ್.ಈಶ್ವರಪ್ಪ, ಕೋಟಾ ಶ್ರೀನಿವಾಸಪೂಜಾರಿ,ಸಿ.ಟಿ.ರವಿ , ಅರವಿಂದ ಲಿಂಬಾವಳಿ ಸೇರಿದಂತೆ ಶಾಸಕರು ಭಾಗಿಯಾಗಿದ್ದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.
ಪ್ರತಿಭಟನೆ ಮುಗಿದ ಬಳಿಕ ಜೂನ್ 16 ರಂದು ಗೃಹ ಕಚೇರಿಗೆ ಕೃಷ್ಣಾಗೆ ಮುತ್ತಿಗೆ ಹಾಕಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.