ಶಿಡ್ಲಘಟ್ಟ: ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಖಂಡಿಸಿ ಸದನಕಲಾಪ ವ್ಯರ್ಥ ಮಾಡಿದ ಕಾಂಗ್ರೆಸ್ ಪಕ್ಷದಧೋರಣೆಯನ್ನು ವಿರೊಧೀ ಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಶಿಡ್ಲಘಟ್ಟ ಬಸ್ ನಿಲ್ದಾಣದಿಂದ ತಾಲೂಕು ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದಬಿಜೆಪಿ ಕಾರ್ಯಕರ್ತರು ತಹಶೀಲ್ದಾರ್ ಗ್ರೇಡ್ -2 ಮಂಜು ನಾಥ್ ಅವರಿಗೆ ಮನವಿಪತ್ರ ಸಲ್ಲಿಸಿದರು. ಮಾಜಿ ಶಾಸಕ ಎಂ. ರಾಜಣ್ಣ ಮಾತನಾಡಿ ಶಿವಮೊಗ್ಗದಲ್ಲಿ ಹಿಂದೂ ಸಂಘಟನೆಯಕಾರ್ಯಕರ್ತ ಹರ್ಷ ಅವರ ಕೊಲೆ ಪಾತಕರನ್ನು ಆದಷ್ಟು ಬೇಗ ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಕೊಲೆಯಲ್ಲಿ ಯಾವುದೇ ಸಂಘಟನೆ, ದುಷ್ಟ ಶಕ್ತಿಗಳ ಕೈವಾ ಡವಿ ದ್ದರೂ ಅದನ್ನು ಬೇ ಧಸಿ ಅವರನ್ನು ಮಟ್ಟ ಹಾಕುವ ಕೆಲಸ ಸರಕಾರದಿಂದ ಆಗಬೇಕಿದೆ ಎಂದು ಒತ್ತಾಯಿಸಿದರು.
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಂದ್ರಗೌಡ ಮಾತನಾಡಿ, ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳು ಕಾಂಗ್ರೆಸ್‌ನ ಕೂಸುಗಳು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಈ ಸಂಘಟನೆಗಳ ಮೇಲಿದ್ದ ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನುಹಿಂಪಡೆದಿದ್ದರು. ಈ ಸಂಘಟನೆಗಳನ್ನು ಶಾಶ್ವತವಾಗಿ ಬ್ಯಾನ್ ಮಾಡಬೇಕೆಂದರು.
ಅಲ್ಪಸಂಖ್ಯಾತರ ಓಲೈಕೆ ಮಾಡಿ ಮತಬ್ಯಾಂಕ್‌ಗಾಗಿ ಹಿಂದೂ ವಿರೋ ಹೇಳಿಕೆ ನೀಡುತ್ತಿರುವ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ರಾಜ್ಯಪಾಲರಿಗೆರವಾನಿಸುವಂತೆ ತಹಶೀಲ್ದಾರ್ ಅವರಿಗೆ ಮನವಿಯನ್ನು ಸಲ್ಲಿಸಿದರು.
ಜಿಲ್ಲಾ ಬಿಜೆಪಿ ವಕ್ತಾರ ರಮೇಶ್ ಬಾಯಿರಿ, ನಗರಾಭಿವೃದ್ಧಿ ಯೋಜನಾ ಪ್ರಾ ಕಾರದ ಅಧ್ಯಕ್ಷಬಿ.ಸಿ.ನಂದೀಶ್, ನಗರಸಭೆ ಸದಸ್ಯ ರಾಘವೇಂದ್ರ,ಜಗದೀಶ್,ಓಬಿಸಿ ಮೋರ್ಚಾದಆಂಜಿನೇಯಗೌಡ, ಕನಕಪ್ರಸಾದ್,ಚಿಕ್ಕದಾಸರಹಳ್ಳಿ ದೇವರಾಜ್, ರಮೇಶ್,ಸುಜಾತಮ್ಮ, ಮಂಜುಳಮ್ಮ, ರಜನಿಕಾಂತ್, ನಟರಾಜ್, ನರೇಶ್ ಇತರರಿದ್ದರು.