Advertisement

ಬಿಹಾರ ಚುನಾವಣೆ 2020: ಬಿಜೆಪಿ ಪ್ರಣಾಳಿಕೆ ಬಿಡುಗಡೆ, 19 ಲಕ್ಷ ಉದ್ಯೋಗ, ಕೋವಿಡ್ ಲಸಿಕೆ ಉಚಿತ

04:42 PM Oct 22, 2020 | Nagendra Trasi |

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣಾ ಅಖಾಡ ರಂಗೇರತೊಡಗಿದ್ದು, ಆಡಳಿತಾರೂಢ ಬಿಜೆಪಿ ಗುರುವಾರ(ಅಕ್ಟೋಬರ್ 22, 2020) ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, 19 ಲಕ್ಷ ಉದ್ಯೋಗ ಹಾಗೂ ಕೋವಿಡ್ 19 ಸೋಂಕಿಗೆ ಉಚಿತ ಲಸಿಕೆ ನೀಡುವುದಾಗಿ ಭರವಸೆ ನೀಡಿದೆ.

Advertisement

ಮುಂದಿನ ಐದು ವರ್ಷಗಳವರೆಗೆ ನಿತೀಶ್ ಕುಮಾರ್ ಅವರು ಬಿಹಾರದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಜೆಡಿಯು ಮೈತ್ರಿಯ ಎನ್ ಡಿಎ ಪ್ರಣಾಳಿಕೆಯಲ್ಲಿ ತಿಳಿಸಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು.

ಬಿಜೆಪಿ ಪ್ರಣಾಳಿಕೆಯಲ್ಲಿ ಸಂಶೋಧನಾ ಹಂತದಲ್ಲಿರುವ ಕೋವಿಡ್ 19 ಸೋಂಕಿನ ಲಸಿಕೆಯನ್ನು ರಾಜ್ಯದ ಜನರಿಗೆ ಉಚಿತವಾಗಿ ನೀಡುವುದಾಗಿ ಭರವಸೆ ನೀಡಿದೆ. ಇದು ಚುನಾವಣೆಯಲ್ಲಿ ನಮ್ಮ ಮೊದಲ ಭರವಸೆಯಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದರು.

ಇದನ್ನೂ ಓದಿ:ಭೀಮಾ ನದಿ ಪ್ರವಾಹದಲ್ಲಿ ಪಿಎಸ್ಐಯ ನಕಲಿ ರಕ್ಷಣಾ ಕಾರ್ಯಚರಣೆಯ ವಿಡಿಯೋ ವೈರಲ್ !

ಬಿಜೆಪಿ ಪ್ರಣಾಳಿಕೆಯಲ್ಲಿ ಏನಿದೆ?

Advertisement

*19 ಲಕ್ಷ ಉದ್ಯೋಗಾವಕಾಶ

*ಬಿಹಾರದ ಎಲ್ಲಾ ಜನತೆಗೆ ಕೋವಿಡ್ ಲಸಿಕೆ ಉಚಿತ

*ಮೂರು ಲಕ್ಷ ನೂತನ ಶಿಕ್ಷಕರ ನೇಮಕಾತಿ

*ಬಿಹಾರವನ್ನು ಐಟಿ ಹಬ್ ಮಾಡುವ ಗುರಿ ಹೊಂದಿದ್ದು, 10 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ

*ಒಂದು ಕೋಟಿ ಮಹಿಳೆಯರನ್ನು ಸ್ವಾವಲಂಬಿಯಾಗಿಸಲಾಗುವುದು

*ಆರೋಗ್ಯ ಕ್ಷೇತ್ರದಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಟಿ

*30 ಲಕ್ಷ ಜನರಿಗೆ ಮನೆ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 243 ಕ್ಷೇತ್ರಗಳಿಗೆ 3 ಹಂತಗಳಲ್ಲಿ ಮತದಾನ ನಡೆಯಲಿದೆ. ಆಕ್ಟೋಬರ್ 28ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು, ನವೆಂಬರ್ 3ರಂದು ಮತ್ತು ನವೆಂಬರ್ 7ರಂದು ನಡೆಯಲಿದೆ. ನವೆಂಬರ್ 10ರಂದು ಫಲಿತಾಂಶ ಘೋಷಣೆಯಾಗಲಿದೆ.

ವಿಪಕ್ಷಗಳ ಆಕ್ರೋಶ:

ಬಿಹಾರ ಚುನಾವಣೆಯಲ್ಲಿ ಕೋವಿಡ್ 19 ಸೋಂಕಿನ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಘೋಷಿಸುವ ಮೂಲಕ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್, ಆರ್ ಜೆಡಿ ಆಕ್ರೋಶ ವ್ಯಕ್ತಪಡಿಸಿದೆ. ಕೋವಿಡ್ ಲಸಿಕೆ ದೇಶದ ಜನರಿಗೆ ಹೊರತು, ಬಿಜೆಪಿಯದ್ದಲ್ಲ ಎಂದು ಆರೋಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next