Advertisement
ಜಿಲ್ಲೆಯಾದ್ಯಂತ 8,000ಕ್ಕೂ ಅಧಿಕ ಬಿಜೆಪಿ ಹಾಗೂ ಕೇಸರಿ ಬಣ್ಣದ ಧ್ವಜ, ಬಂಟಿಂಗ್ಸ್‌ಗಳನ್ನು ಅಳವಡಿಸಲಾಗಿದೆ. ಆದಿ ಉಡುಪಿ ಹೆಲಿಪ್ಯಾಡ್‌ನಿಂದ ಕಾರ್ಯಕ್ರಮ ನಡೆಯುವ ಎಂಜಿಎಂ ಕ್ರೀಡಾಂಗಣದ ವರೆಗೆ 2ರಿಂದ 3 ಸಾವಿರ ಧ್ವಜ, ಬಂಟಿಂಗ್ಸ್ ಅಳವಡಿಸಲಾಗಿದೆ.
ರಸ್ತೆಯ ಎರಡೂ ಬದಿ ಶುಭಕೋರುವ ಫಲಕಗಳು ಹಾಗೂ ಎಂಜಿಎಂ ಕ್ರೀಡಾಂಗಣ ಪ್ರವೇಶದ ಬಳಿ, ಕಲ್ಸಂಕ, ಮೈದಾನದ ಬಳಿ ಹಾಗೂ ಸಗ್ರಿ ದೇವಸ್ಥಾನ ರಸ್ತೆಯ ಬಳಿ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿದೆ. 12 ಸಾವಿರ ಮಂದಿಗೆ ವ್ಯವಸ್ಥೆ
ವೇದಿಕೆಯಲ್ಲಿ 38 ಮಂದಿ ಗಣ್ಯರು ಹಾಗೂ ಕೆಳಭಾಗದಲ್ಲಿ 12 ಸಾವಿರ ಮಂದಿ ಕಾರ್ಯಕರ್ತರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಮೊದಲ ಬಾರಿಗೆ ಜರ್ಮನ್ ಟೆಂಟ್ ಪೆಂಡಾಲ್‌ನಲ್ಲಿ ರಾಜಕೀಯ ಕಾರ್ಯಕ್ರಮವನ್ನು ಉಡುಪಿಯಲ್ಲಿ ಮಾಡಲಾಗುತ್ತಿದ್ದು, 60×40 ಸುತ್ತಳತೆಯ ವೇದಿಕೆ ನಿರ್ಮಿಸಲಾಗಿದೆ. 180×300 ಸುತ್ತಳತೆಯಲ್ಲಿ ಸಭಾಂಗಣ ರಚಿಸಲಾಗಿದೆ.
Related Articles
ಬೆಳಗ್ಗೆ 9.30ಕ್ಕೆ ಜಗದೀಶ್ ಪುತ್ತೂರು ಅವರ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಭಾಗವಹಿಸುವವರಿಗೆಲ್ಲ ಉಪಾಹಾರ ಹಾಗೂ ಊಟದ ವ್ಯವಸ್ಥೆ ಇದೆ. ಉಡುಪಿ ವಿಧಾನ ಸಭಾ ಕ್ಷೇತ್ರದಿಂದ 47, ಕುಂದಾಪುರದಿಂದ 48, ಕಾರ್ಕಳದಿಂದ 43 ಹಾಗೂ ಕಾಪುವಿನಿಂದ 39 ಬಸ್ ವ್ಯವಸ್ಥೆ ಮಾಡಲಾಗಿದೆ. ಬೈಂದೂರು ಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯುವ ಕಾರಣ ಕೆಲವು ನಾಯಕರು ಮಾತ್ರ ಉಡುಪಿಗೆ ಆಗಮಿಸಲಿದ್ದಾರೆ.
Advertisement
ಬೂತ್ ಅಧ್ಯಕ್ಷರೊಂದಿಗೆ ಸಂವಾದರಾಷ್ಟ್ರಾಧ್ಯಕ್ಷರು ಜಿಲ್ಲೆಯ 1,111 ಬೂತ್‌ಗಳ ಅಧ್ಯಕ್ಷರೊಂದಿಗೆ ಸಂವಾದ ನಡೆಸಲಿದ್ದಾರೆ. 1968ರಿಂದ ಜನಸಂಘ ಕಾಲದ ಬಿಜೆಪಿ ನಾಯಕರು ವಿಶೇಷ ಅತಿಥಿಗಳಾಗಿ ಭಾಗವಹಿಸುತ್ತಿರುವುದು ಮತ್ತೂಂದು ವೈಶಿಷ್ಟé. ಕಾರ್ಯಕ್ರಮವನ್ನು ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತ ಮಾಡುವ ಉದ್ದೇಶದಿಂದ ಲೋಟ, ಹೂಜಿಯಲ್ಲಿ ನೀರು ನೀಡಲಾಗುವುದು ಎಂದು ಜಿಲ್ಲಾ ವಕ್ತಾರ ಕೆ. ರಾಘವೇಂದ್ರ ಕಿಣಿ ತಿಳಿಸಿದ್ದಾರೆ. ಅಂಬಲಪಾಡಿ, ಕಡೆಕಾರು, ತೆಂಕ ನಿಡಿಯೂರು, ಪಡುಕೆರೆ, ಬಡಾನಿಡಿ ಯೂರು ಸಹಿತ ಉಡುಪಿ ವಿಧಾನ ಸಭಾ ಕ್ಷೇತ್ರದ ವಿವಿಧ ಕಡೆ ಶಾಸಕ ಕೆ. ರಘುಪತಿ ಭಟ್ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ್ದಾರೆ. ಪರಿಶೀಲನೆ
ಮುನ್ನೆಚ್ಚರಿಕೆ ಕ್ರಮವಾಗಿ ಸಿಆರ್‌ಪಿಎಫ್, ಶ್ವಾನದಳ, ಇಂಟೆಲಿಜೆನ್ಸ್ ಸಿಬಂದಿ ರವಿವಾರ ಕ್ರೀಡಾಂಗಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದರು. ವಾಹನ ನಿಲುಗಡೆ ವ್ಯವಸ್ಥೆ
ಕುಂದಾಪುರ ಮತ್ತು ಬ್ರಹ್ಮಾವರದ ಕಡೆಯಿಂದ ಬರುವ ಬಸ್‌ಗಳು ಬೀಡಿನ ಗುಡ್ಡೆ ಮೈದಾನದಲ್ಲಿ, ಕಾರ್ಕಳ ಮತ್ತು ಕಾಪುವಿನಿಂದ ಬರುವ ಬಸ್‌ಗಳು ಮಣಿಪಾಲ ಪ.ಪೂ. ಕಾಲೇಜಿನ ಮೈದಾನದಲ್ಲಿ, ಉಡುಪಿ ನಗರದಿಂದ ಬರುವ ಬಸ್‌ಗಳು ಮುಖ್ಯ ರಸ್ತೆಯ ಬದಿಯಲ್ಲಿ ನಿಲುಗಡೆ ಮಾಡಬೇಕು. ವಿಐಪಿ ವಾಹನಗಳಿಗೆ ಎಂಜಿಎಂ ಮೈದಾನದ ಹಿಂಭಾಗ ಇರುವ ಎಸ್.ಆರ್.ಎಸ್. ಸ್ಥಳದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಪಾರ್ಕಿಂಗ್ ವ್ಯವಸ್ಥೆಯ ಉಸ್ತುವಾರಿ ದಿನಕರ್ ಪೂಜಾರಿ ಕುಂಜಿಬೆಟ್ಟು ತಿಳಿಸಿದ್ದಾರೆ.