Advertisement
ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಅಧಿಕಾರಕ್ಕೆ ಬಂದ 24ಗಂಟೆಗಳಲ್ಲಿ ರೈತರ ಎಲ್ಲ ಸಾಲಮನ್ನಾ ಮಾಡುವುದಾಗಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದರು.ಅದರಂತೆ ರೈತರ ಸಾಲಮನ್ನಾ ಮಾಡಲೇ ಬೇಕು. ಇಲ್ಲವಾದರೆ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ತಿಳಿಸಿದರು.
ಸಮುದಾಯದ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊರಟಿದ್ದಾರೆ. ಹೀಗಾಗಿ, ಸಾಲಮನ್ನಾ ವಿಚಾರದಲ್ಲಿ
ಮುಖ್ಯಮಂತ್ರಿಗಳ ವರ್ತನೆ ಖಂಡಿಸಿ ಸೋಮವಾರ ರಾಜ್ಯಾದ್ಯಂತ ಬಂದ್ ನಡೆಸಲಿದ್ದೇವೆ. ರೈತ ಸಮೂಹ
ಸ್ವಯಂ ಪ್ರೇರಿತವಾಗಿ ನಮ್ಮೊಂದಿಗೆ ಸೇರಿಕೊಳ್ಳಲಿದ್ದು, ಬಂದ್‌ಗೆ ಬೆಂಬಲ ನೀಡಲಿದ್ದಾರೆ ಎಂದರು. ಸಂಘಟನೆಗಳ ಬೆಂಬಲ ಇಲ್ಲ: ರಾಜ್ಯ ಬಂದ್ ಆಚರಣೆಗೆ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು,
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಹೋಟೆಲ್ ಮಾಲೀಕರ ಸಂಘ, ಆಟೋ ಚಾಲಕರ ಸಂಘ, ಟ್ಯಾಕ್ಸಿ
ಚಾಲಕರ ಸಂಘಟನೆಗಳು, ಎಐಟಿಯುಸಿ ಬೆಂಬಲಿಸುತ್ತಿಲ್ಲ. ರೈತರ ಬೇಡಿಕೆಗಳಿಗೆ ಬೆಂಬಲವಿದೆ. ಆದರೆ,ಬಂದ್ ಕುರಿತು ಯಾರೂ ನಮ್ಮೊಂದಿಗೆ ಚರ್ಚಿಸಿಲ್ಲ.
Related Articles
Advertisement
ಈ ಕುರಿತು “ಉದಯವಾಣಿ’ಯೊಂದಿಗೆ ಮಾತನಾಡಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್, ರೈತರ ಸಾಲಮನ್ನಾ ಬೇಡಿಕೆಗೆ ನಮ್ಮ ಬೆಂಬಲ ಯಾವತ್ತೂ ಇದೆ. ರೈತರ ಹೋರಾಟಕ್ಕೂ ಬೆಂಬಲವಿದೆ. ಆದರೆ, ಸೋಮವಾರ ನಡೆಯಲಿರುವ ಬಂದ್ ಆಚರಣೆಯಲ್ಲಿ ಪಾಲ್ಗೊಳ್ಳುವಂತೆ ನಮಗೆ ಯಾರೂ ಹೇಳಿಲ್ಲ. ಹೀಗಾಗಿ ತಟಸ್ಥವಾಗಿರುತ್ತೇವೆ ಎಂದಿದ್ದಾರೆ.
ಸೂಕ್ತ ಬಂದೋಬಸ್ತ್ಗೆ ಆದೇಶಬಂದ್ ಹಿನ್ನೆಲೆಯಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು, ಆಯಾ ವಲಯದ ಉನ್ನತ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಯಾವುದೇ ಅಹಿಕತರ ಘಟನೆಗಳು ಜರುಗದಂತೆ ಕಟ್ಟುನಿಟ್ಟಿನ ಕಾನೂನು ಸುವ್ಯವಸ್ಥೆ ಪಾಲಿಸುವಂತೆ ರಾಜ್ಯದ ನಾಲ್ಕು ವಲಯಗಳ ಐಜಿಪಿ, ಪೊಲೀಸ್ ಆಯುಕ್ತರು, ಜಿಲ್ಲಾ ಎಸ್ಪಿಗಳಿಗೆ ತಾಕೀತು ಮಾಡಿದ್ದಾರೆ. ಈ ಮಧ್ಯೆ “ಬಂದ್’ ಆಚರಣೆ ಸಂವಿಧಾನಬಾಹಿರ ಎಂದು ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಬಂದ್ ಆಚರಿಸಲು ಮುಂದಾಗುವವರಿಗೆ ಮನದಟ್ಟು ಮಾಡಿ. ಜತೆಗೆ, ಸೂಕ್ತ ಭದ್ರತೆ ಕೈಗೊಂಡು ಕಾನೂನು ಉಲ್ಲಂ ಸುವವರ ವಿರುದಟಛಿ ಕ್ರಮ ಕೈಗೊಳ್ಳಿ ಎಂದು ಡಿಸಿಪಿಗಳು ಸೇರಿದಂತೆ ಅಧೀನ ಅಧಿಕಾರಿಗಳಿಗೆ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಆದೇಶಿಸಿದ್ದಾರೆ. ರೈತರ ಸಾಲಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಸದ್ಯದಲ್ಲೇ ಸಿಎಂ ಭೇಟಿ ಮಾಡಿ ಚರ್ಚಿಸಲಾಗುವುದು.ಬಳಿಕ, ಅವರ ನಿಲುವು ಖಚಿತಪಡಿಸಿಕೊಂಡು ಹೋರಾಟದ ಬಗ್ಗೆ ತೀರ್ಮಾನಿಸಲಾಗುವುದು.ಸೋಮವಾರ ನಡೆಸಲಿರುವ ಬಂದ್ ಬಗ್ಗೆ ನಮ್ಮ ಜತೆ ಯಾರೂ ಚರ್ಚಿಸಿಲ್ಲ.ಹೀಗಾಗಿ, ನಾವು ಪಾಲ್ಗೊಳ್ಳುವುದಿಲ್ಲ.
– ಕುರುಬೂರು ಶಾಂತಕುಮಾರ್,
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ