Advertisement
ಕೃಷಿ ವರ್ಗ, ಹಿಂದುತ್ವದ ಆಧಾರದಲ್ಲಿ ಮತ ಸೆಳೆಯಲು ಬಿಜೆಪಿಯ ಶಕ್ತಿ ಕೇಂದ್ರ ಎನಿಸಿರುವ ಕರಾವಳಿಯಲ್ಲೇ ತಂತ್ರಗಾರಿಕೆ ಹೆಣೆಯುವ ಲೆಕ್ಕಾಚಾರದಿಂದಲೇ ಈ ಭೇಟಿ ನಿಗದಿಪಡಿಸಲಾಗಿದೆ. ಸಹಕಾರ ಮತ್ತು ಅಡಿಕೆ ಬೆಳೆಗಾರರ ಸಮಾವೇಶ ರಾಜಕೀಯ ರಹಿತ ಎಂದು ಬಿಂಬಿಸಲಾಗಿದ್ದರೂ ಅಮಿತ್ ಶಾ ಭೇಟಿ ಬಿಜೆಪಿ ಸಂಘಟನೆಗೆ ಶಕ್ತಿ ತುಂಬುವ ಉದ್ದೇಶವೇ ಎಂದು ಹೇಳಲಾಗುತ್ತಿದೆ.
Related Articles
Advertisement
ಹಿಂದುತ್ವ ಡ್ಯಾಮೇಜ್ ಕಂಟ್ರೋಲ್ ಕರಾವಳಿಯಲ್ಲಿ ಬಿಜೆಪಿ ಗೆಲುವಿನ ಪ್ರಮುಖ ಅಸ್ತ್ರ ಹಿಂದುತ್ವ. ಇತ್ತೀಚೆಗಿನ ಕೆಲವು ವರ್ಷಗಳಿಂದ ಸಂಘ ಪರಿವಾರ ಹಾಗೂ ಬಿಜೆಪಿ ಮಧ್ಯೆ ಸಂಬಂಧ ಹಿಂದಿನಂತಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಸಂಘ ಪರಿವಾರದ ಪ್ರಮುಖ ನಾಯಕರು ಬಿಜೆಪಿ ವಿರುದ್ಧ ಧ್ವನಿ ಎತ್ತುತ್ತಿರುವುದು, ಪ್ರವೀಣ್ ನೆಟ್ಟಾರು ಹತ್ಯೆ ವೇಳೆ ಬಿಜೆಪಿ ಜನಪ್ರತಿನಿಧಿಗಳ ವಿರುದ್ಧ ಹಿಂದೂ ಸಂಘಟನೆ ಕಾರ್ಯಕರ್ತರ ಬಹಿರಂಗ ಆಕ್ರೋಶ, ಸಂಘ ಪರಿವಾರದವರಿಗೆ ಟಿಕೆಟ್ ನೀಡಬೇಕೆಂಬ ಒತ್ತಡ ಹೆಚ್ಚು ತ್ತಿರುವುದು- ಇವೆಲ್ಲ ಬೆಳವಣಿಗೆಗಳಿಗೆ ಪರಿಹಾರ ಹುಡುಕ ಬೇಕಿದೆ. ಕರಾವಳಿಯಲ್ಲಿ ಬಿಜೆಪಿ ತನ್ನ ಸ್ಥಾನಗಳನ್ನು ಕಳೆದು ಕೊಳ್ಳದಂತೆ ಪರಿಸ್ಥಿತಿ ನಿರ್ವಹಿಸುವಲ್ಲಿ ಅಮಿತ್ ಶಾ ಭೇಟಿ ಮಹತ್ವ ಪಡೆದಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಜಾತಿ ಲೆಕ್ಕಾಚಾರ
ಹಿಂದುತ್ವದ ಆಧಾರದಲ್ಲಿಯೇ ಬಿಜೆಪಿಯ ಚುನಾವಣೆ ಲೆಕ್ಕಾಚಾರ ನಡೆಯುತ್ತಿದ್ದ ಕರಾವಳಿಯಲ್ಲಿ ಈ ಬಾರಿ ಜಾತಿ ಅಸ್ತ್ರವೂ ಮುನ್ನೆಲೆಗೆ ಬರುತ್ತಿದೆ. ಪ್ರಬಲ ಸಮುದಾಯಗಳು ಬೇರೆಬೇರೆ ರೂಪದಲ್ಲಿ ಶಕ್ತಿ ಪ್ರದರ್ಶನ ನಡೆಸಿರುವುದೂ ಬಿಜೆಪಿ ಗಮನಿಸಿದೆ. ಜಾತಿ ಬಲ ಆಧಾರಿತವಾಗಿ ಅಭ್ಯರ್ಥಿಗಳ ಆಯ್ಕೆಗೆ ಒತ್ತಡ ಬಂದರೆ ಏನು ಮಾಡಬೇಕೆಂಬ ಲೆಕ್ಕಾಚಾರದಲ್ಲಿ ಬಿಜೆಪಿ ಮುಳುಗಿದೆ. ಇಂತಹ ಸಂದಿಗ್ಧ ಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಅಮಿತ್ ಶಾ ಬಿಜೆಪಿ ನಾಯಕರಿಗೆ ಮಾರ್ಗದರ್ಶನ ನೀಡುವ ಸಾಧ್ಯತೆ ಇದೆ.