ಬೆಂಗಳೂರು : ಹಿಜಾಬ್ ವಿವಾದಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಅಲ್ಪಸಂಖ್ಯಾತ ನಾಯಕರು ಬಿಜೆಪಿ ಹಾಗೂ ರಾಜ್ಯ ಸರಕಾರದ ವಿರುದ್ಧ ಧ್ವನಿ ಎತ್ತಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ವಿಧಾನಸಭೆ ಉಪನಾಯಕ ಯು.ಟಿ.ಖಾದರ್, ಶಾಸಕ ಜಮೀರ್ ಅಹ್ಮದ್, ಜಿ.ಎ.ಬಾವಾ, ಇದಕ್ಕೆ ಧಾರ್ಮಿಕ ಲೇಪ ಹಚ್ಚುವುದು ಬೇಡ ಎಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ನಾಯಕ ಜಿ.ಎ.ಬಾವಾ ಮಾತನಾಡಿ, ಮಕ್ಕಳಿಗೆ ಯೂನಿಫಾರ್ಮ್ ಇರಬೇಕು. ನಾನು ಉಡುಪಿಗೆ ಭೇಟಿ ಕೊಟ್ಟಿದ್ದು ಅಲ್ಲಿನ ಜನಪ್ರತಿನಿಧಿಗಳ ಜೊತೆ ಮಾತನಾಡಿದ್ದೆ. ಹಿಜಾಬ್ ವಿಷಯ ಸ್ಕಾರ್ಫ್ ಇದ್ದಂತೆ. ಬೇಕಾದಾಗ ತಲೆಗೆ ಹಾಕ್ತಾರೆ,ಬೇಡವಾದಾಗ ಬಿಡ್ತಾರೆ. ಇದು ಈಗ ಹಾಕ್ತಿರೋದಲ್ಲ,ಮೊದಲಿನಿಂದಲೂ ಇದೆ.ಬಿಜೆಪಿ ನಾಯಕರು ಮೊದಲಿನಿಂದ ಇದ್ದದ್ದನ್ನ ಒಪ್ಪಿದ್ದಾರೆ. ನಾರ್ತ್ ಇಂಡಿಯಾದಲ್ಲಿ ಎಲ್ಲ ರೂ ಸೆರಗು ತಲೆಗೆ ಹಾಕ್ತಾರೆ.ನಮ್ಮಲ್ಲಿ ಬಟ್ಟೆ ಹಾಕಿಕೊಂಡು ಕೂದಲು ಮುಚ್ಚಿಕೊಳ್ತಾರೆ. ಇದು ನಮ್ನ ಧರ್ಮದ ಫಂಡಮೆಂಟಲ್ ರೈಟ್ಸ್. ನಮ್ಮ ಹಕ್ಕಿಗೆ ವಿರುದ್ಧವಾಗಿ ನಡೆದುಕೊಳ್ಳಲಾಗ್ತಿದೆ.ಇದಕ್ಕೆ ಕುಮ್ಮಕ್ಕು ಕೊಡುವ ಕೆಲಸ ಮಾಡ್ತಿದ್ದಾರೆ ಎಂದರು.
ಮಾಜಿ ಸಚಿವ ಜಮೀರ್ ಅಹ್ಮದ್ ಮಾತನಾಡಿ, ಇಜಾಬ್ ಫಂಡಮೆಂಟಲ್ ರೈಟ್ಸ್. ಬಹಳ ವರ್ಷಗಳಿಂದಲೂ ಇದೆ.ಯಾರು ಬೇಕು ಹಾಕ್ತಾರೆ ,ಬೇಡ ಅಂದವರು ಬಿಡ್ತಾರೆ.ಸರ್ಕಾರ ಇದರ ಬಗ್ಗೆ ತೀರ್ಮಾನ ಮಾಡಬೇಕಿತ್ತು. ಕುಂದಾಪುರ ಕಾಲೇಜಿನಲ್ಲಿ ಮಕ್ಕಳನ್ನ ಒಳಬಿಡಲ್ಲ. ಅಲ್ಲಿನ ಪ್ರಿನ್ಸಿಪಾಲರೇ ಒಳಬಿಡುವುದಿಲ್ಲ.ಇದು ನಮಗೆ ತುಂಬಾ ನೋವು ತಂದಿದೆ ಎಂದರು.
ಹಿಂದೂ ಮಕ್ಕಳು ಕೇಸರಿಶಾಲು ಹಾಕಿ ಬಂದ್ರು. ಮಕ್ಕಳಲ್ಲಿ ಜಾತಿಯ ವಿಷ ಬೀಜ ಬಿತ್ತುತ್ತಿದ್ದಾರೆ. ಮಕ್ಕಳಿಗೆ ಶಿಕ್ಷಣ ಕಲಿಯೋಕೆ ಬಿಡಿ. ಇಜಾಬ್ ಸ್ವಾತಂತ್ರ್ಯ ಪೂರ್ವದಿಂದಲೂ ಹಾಕ್ತಿದ್ದಾರೆ. ಆದರೆ ಕೇಸರಿ ಶಾಲು ಮೊನ್ನೆ ಹಾಕಿರೋದು ಎಂದರು.
ಇದನ್ನೂ ಓದಿ : ವಾಕ್ ಸ್ವಾತಂತ್ರ್ಯ ಎಂದರೆ ಬೇರೆ ದೇಶಕ್ಕೆ ಜಿಂದಾಬಾದ್ ಹೇಳುವುದಲ್ಲ: ಸ್ಪೀಕರ್ ಕಾಗೇರಿ
ಮಾಜಿ ಸಚಿವ ಯು.ಟಿ.ಖಾದರ್ ಮಾತನಾಡಿ, ಇಜಾಬ್ ಸಂಘರ್ಷ ಅಂತ ಯಾವುದೂ ಇಲ್ಲ. ಉಡುಪಿಯಲ್ಲಿ ಬೇಕೆಂದು ಕೆಲವರು ಕೇಳ್ತಾರೆ.ಈಗಾಗಲೇ ಇದು ಕೋರ್ಟ್ ನಲ್ಲಿದೆ. ಕೋರ್ಟ್ ಇದರ ತೀರ್ಪು ಕೊಡುತ್ತದೆ.ಬಂಡಾರ್ಕರ್ಸ್ ಕಾಲೇಜು ಉತ್ತಮ ಕಾಲೇಜು.ಹಿಂದಿನಿಂದಲೂ ಅಲ್ಲಿ ಸ್ಕಾರ್ಫ್ ಕಟ್ಟುವುದು ಇದೆ.ಕೂದಲು ಮುಚ್ಚಿಕೊಳ್ಳುವ ಬಟ್ಟೆಯಷ್ಟೇ. ಶಿರವಸ್ತ್ರವನ್ನ ಎಲ್ಲ ವರ್ಗದವರು ಹಾಕ್ತಾರೆ. ಸಂವಿಧಾನ ಬದ್ಧವಾಗಿ ಮಕ್ಕಳುಕೇಳಿದ್ದಾರೆ. ಬೇರೆ ಕಾಲೇಜಿನಲ್ಲಿ ಇರೋದನ್ನ ಯಾಕೆ ರದ್ಧುಮಾಡಬೇಕು.ಕರಾವಳಿಯ ನೂರಾರು ಕಾಲೇಜಿನಲ್ಲಿದೆ. ಕರಾವಳಿಯಲ್ಲಿ ಸಹೋದರ ಪ್ರೀತಿಯಿದೆ.ಇದಕ್ಕೆಧರ್ಮಗಳನ್ನ ಮುಂದೆ ತರುವುದು ಬೇಡ.ಸದನದಲ್ಲಿ ನಾವು ಇದನ್ನ ಪ್ರಸ್ತಾಪಿಸುತ್ತೇವೆ. ಸರ್ಕಾರದ ಇದರ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.