ತಿ.ನರಸೀಪುರ: ಬಿಜೆಪಿ ಪಕ್ಷ 2000 ಇಸವಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ದಲಿತ ನಾಯಕ ಬಂಗಾರ ಲಕ್ಷ್ಮಣನಿಗೆ ನೀಡಿತ್ತು. ಆದರೆ ದಲಿತರ ಮತ ಪಡೆದು 70 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಈಗ ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ನೀಡಿದೆ ಎಂಬುದನ್ನು ಮರೆಯಬಾರದು ಎಂದು ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಸಿ.ಎಂ. ಮಹದೇವಯ್ಯ ವಾಗ್ಧಾಳಿ ನಡೆಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ವರುಣಾ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಎಸ್.ಸಿ. ಮೋರ್ಚಾದ ಕೆಲವು ಮುಖಂಡರು ಬಿಜೆಪಿಯಲ್ಲಿ ದಲಿತರಿಗೆ ಅನ್ಯಾಯವಾಗುತ್ತಿದೆ ಎಂದು ಮಾತನಾಡಿದ್ದಾರೆ. ದೇಶದ ನೆಲದಲ್ಲಿ 70 ವರ್ಷ ರಾಜಕೀಯ ಇತಿಹಾಸವುಳ್ಳ ಕಾಂಗ್ರೆಸ್ ಪಕ್ಷ ಇತ್ತೀಚಿಗೆ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆಯರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿದೆ ಎಂದರು.
ಇಲ್ಲ ಸಲ್ಲದ ಆರೋಪ ಮಾಡಬಾರದು: ಕೆಲವು ಸ್ವಾರ್ಥ ಮುಖಂಡರು ಪಕ್ಷದ ಫಲಾನುಭವಿಗಳಾ ಗಿದ್ದರು ಸಹ ಕಾಂಗ್ರೆಸ್ ಪಕ್ಷದ ಆಮಿಷಕ್ಕೆ ಒಳಗಾಗಿ ಪಕ್ಷದ ಬಗ್ಗೆ ಕೆಟ್ಟದಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಬಿಜೆಪಿ ಪಕ್ಷದಲ್ಲಿ ದಲಿತರಿಗೆ ಉನ್ನತ ಸ್ಥಾನಮಾನಗಳಿಲ್ಲ ಕೋರ್ ಕಮಿಟಿಯಲ್ಲಿ ಅವಕಾಶ ಇಲ್ಲ. ದಲಿತ ಮುಖಂಡರು ಮನೆ ಮನೆಗೆ ಬಾವುಟ ಕಟ್ಟುವುದಕ್ಕೆ ಮಾತ್ರ ಸೀಮಿತವಾಗಿಟ್ಟಿದ್ದಾರೆ ಎಂದು ಮಾತನಾಡಿದ್ದಾರೆ. ಹಾಗಾದರೆ ಇವರು ಯಾವ ಪಕ್ಷದಿಂದ ತಾಪಂ ಸದಸ್ಯರಾದರು, ಯಾವ ಪಕ್ಷದಿಂದ ತಿ.ನರಸೀಪುರ ಪುರಸಭೆಗೆ ನಾಮ ನಿರ್ದೇಶಿತ ಸದಸ್ಯರಾದರು, ಯಾವ ಪಕ್ಷದಿಂದ ತಾಪಂ ಕೆಡಿಪಿಗೆ ಸದಸ್ಯರಾದರು ಎಂಬುದನ್ನು ಮೊದಲು ಹೇಳಿ ನಂತರ ಪಕ್ಷದ ಸಾಮಾಜಿಕ ನ್ಯಾಯವನ್ನು ಪ್ರಶ್ನೆಮಾಡಲಿ ಎಂದು ಕಿಡಿಕಾರಿದರು.
ದಲಿತರಿಗೆ ಅಧಿಕಾರ ಕೊಟ್ಟಿದ್ದೇ ಬಿಜೆಪಿ: ಮೈಸೂರು ಕೃಷ್ಣ ಮೂರ್ತಿಗೆ ಟಿಕೆಟ್ ನೀಡಿ ಗೆಲ್ಲಿಸಿ ತಾಪಂ ಅಧ್ಯಕ್ಷರನ್ನಾಗಿ ಮಾಡಿದ್ದೇ, ಗಣೇಶ್‌ರನ್ನು ತಿ.ನರಸೀ ಪುರ ಪುರಸಭೆಗೆ ನಾಮ ನಿರ್ದೇಶಿತ ಸದಸ್ಯನನ್ನಾಗಿ ಮಾಡಿದೆ. ಮಿಥುನ್‌ರನ್ನು ತಾಪಂ ಕೆಡಿಪಿ ಸದಸ್ಯರನ್ನಾಗಿ ಮಾಡಿದೆ. ಶ್ರೀಧರ್ ದಂಡಿಕೆರೆರನ್ನು ಭೂನ್ಯಾಯ ಮಂಡಳಿ ಸದಸ್ಯರನ್ನಾಗಿ ಮಾಡಿದೆ. ಕಳೆದ ಬಾರಿ ಶಿವಯ್ಯರನ್ನು ಕ್ಷೇತ್ರಾಧ್ಯಕ್ಷರನ್ನಾಗಿ ಮಾಡಿದೆ. ಈಗ ಪ್ರತಿಯೊಂದು ಹಂತದಲ್ಲೂ ದಲಿತರಿಗೆ ನ್ಯಾಯ ಕೊಟ್ಟಿರುವ ಪಕ್ಷ ಬಿಜೆಪಿ ಮಾತ್ರ ಎಂದರು.
ಕೆಲವರು ತಮ್ಮ ವೈಯಕ್ತಿಕ ಕೆಲಸಗಳಾಗಿಲ್ಲ ಎಂದು ಬಿಜೆಪಿ ಪಕ್ಷದ ಮೇಲೆ ಗೂಬೆ ಕೂರಿಸುವ ಯತ್ನ ಮಾಡುತ್ತಿದ್ದಾರೆ. ಇದು ಅವರಿಗೆ ಯಶಸ್ಸು ನೀಡಲ್ಲ. ವರುಣಾ ಕ್ಷೇತ್ರದ ಎಸ್.ಸಿ. ಮೋರ್ಚಾ ಸದಸ್ಯರೆಲ್ಲರೂ ರಾಜೀನಾಮೆ ನೀಡುತ್ತಿದ್ದೇವೆ ಎಂದು ಪಕ್ಷಕ್ಕೆ ಸಂಬಂಧಿಸಿ ದಲ್ಲದವರನ್ನು ಕರೆತಂದು ಫೋಟೋಗೆ ನಿಲ್ಲಿಸಿ ಹೇಳಿಕೆ ನೀಡಿ¨ªಾರೆ. ಇದು ಸುಳ್ಳು ಹಾಗೂ ಕೇವಲ ನಾಲ್ಕರಿಂದ ಐದು ಜನ ಸ್ವಾರ್ಥಿಗಳು ಕಾಂಗ್ರೆಸ್ ಆಮಿಷಕ್ಕೆ ಬಿದ್ದು ರಾಜೀನಾಮೆ ನೀಡಿ ಹೋಗುತ್ತಿದ್ದಾರೆ. ಇವರು ಕೆಲವೇ ದಿನಗಳು ಮಾತ್ರ ಆ ಪಕ್ಷದಲ್ಲಿ ಇರುತ್ತಾರೆ. ಮತ್ತೆ ಇವರಿಗೆ ನಮ್ಮ ಪಕ್ಷದ ಪಾದವೇ ಗತಿ ಎಂದು ವ್ಯಂಗ್ಯವಾಡಿದರು.
ಮಾಜಿ ಕ್ಷೇತ್ರಾಧ್ಯಕ್ಷ ಶಿವಯ್ಯ, ಎಸ್‌ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಎಂ.ನಾಗೇಂದ್ರ, ಕೆಡಿಪಿ ಸದಸ್ಯ ಹಡಜನ ನರಸಿಂಹಮೂರ್ತಿ, ಭೂ. ನ್ಯಾ. ಮಂಡಳಿ ಅಧ್ಯಕ್ಷ ಶ್ರೀಧರ್ ದಂಡಿಕೆರೆ, ರಾಜ್ಯ ಎಸ್.ಸಿ. ಮೋರ್ಚಾ ಕಾರ್ಯಕಾರಿಣಿ ಅಧ್ಯಕ್ಷ ಕಾರ್ಯ ಮಹಾದೇವಯ್ಯ ಇತರರು ಇದ್ದರು.