Advertisement
ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರತಿ ಬೂತ್‌ನಿಂದ ಮೂರು ಬೈಕ್‌ಗಳಲ್ಲಿ ರಾಜ್ಯದಲ್ಲಿರುವ ಸುಮಾರು 55 ಸಾವಿರ ಬೂತ್‌ಗಳಿಂದ 3.3 ಲಕ್ಷ ಮಂದಿ ಆಗಮಿಸಲಿದ್ದಾರೆ. ನಗರದ ಅರಮನೆ ಮೈದಾನದದಲ್ಲಿ ಮಂಗಳವಾರ ಬಿಜೆಪಿ ಚುನಾವಣಾ ಉಸ್ತುವಾರಿಗಳ ಕರ್ನಾಟಕ ದಕ್ಷಿಣ ಭಾಗದ ಕಾರ್ಯಾಗಾರ ಉದ್ಘಾಟಿಸಿದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ .ಯಡಿಯೂರಪ್ಪ ಈ ವಿಷಯ ತಿಳಿಸಿದರು.
ರಾಜ್ಯೋತ್ಸವವನ್ನೂ ಆಚರಿಸಲಿದ್ದಾರೆ ಎಂದು ಹೇಳಿದರು. ನ.1ರಿಂದ ಆರಂಭವಾಗುವ ರಥಯಾತ್ರೆ 2018ರ ಜ.15ರವರೆಗೆ ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳನ್ನು ತಲುಪಲಿದೆ.
Related Articles
ಲಾಗುವುದು. ರಥಯಾತ್ರೆ ತೆರಳುವ ವೇಳೆ ಕೆಲವು ಜಿಲ್ಲೆಗಳಲ್ಲಿ ನವಶಕ್ತಿ ಸಮಾವೇಶ ನಡೆಸಲಾಗುತ್ತದೆ. ಈ ಸಮಾವೇಶಕ್ಕೆ ಪ್ರತಿ ಬೂತ್‌ನಿಂದ 9 ಮಂದಿ ಪಾಲ್ಗೊಳ್ಳಲಿದ್ದಾರೆ ಎಂದರು.
Advertisement
ಪಕ್ಷ ಸಂಘಟನೆ ದೃಷ್ಟಿಯಿಂದ ಬೂತ್ ಮಟ್ಟದಲ್ಲಿ ಕಾರ್ಯಾಗಾರ ನಡೆಸಬೇಕಿದೆ. ಪಕ್ಷ ಅಧಿಕಾರಕ್ಕೆ ಬರಬೇಕಾದರೆ ತಳಮಟ್ಟದಲ್ಲಿಉತ್ತಮ ಕೆಲಸ ಆಗಬೇಕು. ಆ ನಿಟ್ಟಿನಲ್ಲಿ ಬೂತ್ ಮಟ್ಟದ ಕಾರ್ಯಕರ್ತರನ್ನು ಹುರಿದುಂಬಿಸುವಕೆಲಸವನ್ನು ಉಸ್ತುವಾರಿಗಳು
ನೋಡಿಕೊಳ್ಳಬೇಕು. ಕಾರ್ಯಕರ್ತರು ಚುನಾವಣೆಗೆ ಆರು ತಿಂಗಳು ಸಮಯವನ್ನು ಕಡ್ಡಾಯವಾಗಿ ನೀಡಬೇಕು ಎಂದು ಸಲಹೆ ಮಾಡಿದರು. ಬಿಜೆಪಿಯೇ ಅಭ್ಯರ್ಥಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿ ಯಾಗಲು ಬಡಿದಾಡುವುದು ಬೇಡ. ಅಲ್ಲಿ ಬಿಜೆಪಿಯೇ ಅಭ್ಯರ್ಥಿಯಾಗಲಿದ್ದು, ಕಣಕ್ಕಿಳಿ ಯುವವರು ನೆಪಮಾತ್ರ ಇರುತ್ತಾರೆ. ಸಮೀಕ್ಷೆಗಳ ಬಳಿಕ ಅವರನ್ನು ಆಯ್ಕೆ ಮಾಡಲಾಗುವುದು. ಅಭ್ಯರ್ಥಿ ಯಾಗುವವರು ಸ್ಥಳೀಯ ಜ್ವಲಂತ ಸಮಸ್ಯೆಗಳನ್ನು ತಿಳಿದು ಅದಕ್ಕೆ ಪರಿಹಾರ ರೂಪಿಸುವ ಸಾಮರ್ಥ್ಯ ಹೊಂದಿರುವವರಾಗಬೇಕು ಎಂದು ತಿಳಿಸಿದರು. ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್, ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸಂಸದರಾದ ಪ್ರಹ್ಲಾದ
ಜೋಶಿ, ಶೋಭಾ ಕರಂದ್ಲಾಜೆ, ನಳಿನ್‌ಕುಮಾರ್ ಕಟೀಲ್, ಶಾಸಕ ಸಿ.ಟಿ.ರವಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮತ್ತಿತರರು ಇದ್ದರು. ಭದ್ರತೆಗೆ ಬೆದರಿಕೆ ಬೆಂಗಳೂರು: “ಮುಸ್ಲಿಂ ಸಮುದಾಯದಲ್ಲಿ ಅಲ್ಪಸಂಖ್ಯೆಯಲ್ಲಿರುವ ಮೂಲಭೂತವಾದಿಗಳನ್ನು ಬೆಂಬಲಿಸುವ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರವು, ದೇಶ ಮತ್ತು ರಾಜ್ಯದ ಭದ್ರತೆಗೆ ಬೆದರಿಕೆಯೊಡ್ಡುತ್ತಿದೆ’ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮುರುಳಿಧರ ರಾವ್ ಆರೋಪಿಸಿದರು. ರಾಜ್ಯದಲ್ಲಿ ರಾಜಕೀಯ ಹತ್ಯೆಗಳು ದಿನನಿತ್ಯದ ಕೃತ್ಯಗಳಾಗಿವೆ. ಆದರೆ, ಈ ಸರ್ಕಾರ ಅದನ್ನು ತಡೆಗಟ್ಟಲು ಮತ್ತು ಆರೋಪಿಗಳನ್ನು ಬಂಧಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಬಿಜೆಪಿಯೂ ರಾಜಕೀಯ ಹತ್ಯೆಯ ಬಲಿಪಶುವಾಗಿದೆ. ಕಾಂಗ್ರೆಸ್ ಸರ್ಕಾರದ ಮತೀಯವಾದಿಗಳು ಮತ್ತು ತೀವ್ರವಾದಿಗಳನ್ನು ಬೆಂಬಲಿಸುವ ನೀತಿ ದೇಶದ ಭದ್ರತೆಗೆ ಅಪಾಯ ತಂದೊಡ್ಡುವುದರ ಜತೆಗೆ ಶಾಂತಿ ಹದಗೆಡಲೂ ಕಾರಣವಾಗುತ್ತದೆ ಎಂದರು.