Advertisement

ಕಾಂಗ್ರೆಸ್‌ನಿಂದ ನೆಗೆಟಿವ್‌ ರಾಜಕಾರಣ

12:59 PM May 18, 2021 | Team Udayavani |

ಚಾಮರಾಜನಗರ: ದೇಶ ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲೂ ಕಾಂಗ್ರೆಸ್‌ ಪಕ್ಷ ಜನರ ಮಧ್ಯ ಆತಂಕ ಸೃಷ್ಟಿಸುತ್ತಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ‌ ಮಹೇಶ್‌ ಆರೋಪಿಸಿದರು.

Advertisement

ನಗರದಲ್ಲಿ ಸೋಮವಾರ ‌ ಸುದ್ದಿಗೋಷ್ಠಿ ನಡೆಸಿದ ಅವರು, ಕಾಂಗ್ರೆಸ್‌ ವಿಚಾರದಲ್ಲೂ ನೆಗೆಟಿವ್‌ ರಾಜಕಾರಣ ಮಾಡುತ್ತಿದ್ದು, ಪ್ರತಿ ವಿಚಾರದಲ್ಲೂ ನಾಟಕ ಆಡುತ್ತಿದೆ. ಬೇಜಾವಾಬ್ದಾರಿತನ ವರ್ತಿಸುವ ಮೂಲಕ ಜನರ ಮನಸ್ಸಿನಲಿ ಭೀತಿ ಉಂಟು ಮಾಡುತ್ತಿದೆ ಎಂದರು.

ಲಸಿಕೆ ವಿರುದ್ಧ ಕಾಂಗ್ರೆಸ್‌, ಜನರ ಮನಸ್ಸಿನನಲ್ಲಿ ಭೀತಿ ಉಂಟು ಮಾಡಿ ಜನರು ವ್ಯಾಕ್ಸಿನ್‌ ತೆಗೆದುಕೊಳ್ಳದಂತೆ ಹುನ್ನಾರ ‌ ಮಾಡಿತು. ಇಂದೂ ನಮ್ಮ ದೇಶದ ವ್ಯಾಕ್ಸಿನ್‌ ಅನ್ನು ವಿದೇಶಕ್ಕೆ ಕೊಡಬಾರದು ಎಂದು ಹೊಸ ನಾಟಕ ಆರಂಭಿಸಿದ್ದಾರೆ ಎಂದು  ದೂರಿದರು.

ಆಮ್ಲಜನಕ ದುರಂತಕ್ಕೆ ಕಾರಣರಾಗಿರುವ ಅವರು ಎಂತಹ ದೊಡ್ಡ ವ್ಯಕ್ತಿಯಾಗಲಿ ಅವರಿಗೆ ಉಗ್ರವಾದ ಶಿಕ್ಷೆಯಾಗಬೇಕು. ಈ ಘಟನೆಯಿಂದ ಮೃತಪಟ್ಟವರಿಗೆ ಪರಿಹಾರ ಸಿಗಬೇಕು ಎಂದರು.

ಮುಖಂಡ ನಿಜಗುಣರಾಜು ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿ ಮಂಡಲದಲ್ಲೂ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಶವ ಸಂಸ್ಕಾರ ಮಾಡಿದ್ದಾರೆ. ಅಲ್ಲದೆ ಆಯಾಯ ಆಸ್ಪತ್ರೆಗಳಲ್ಲಿ ಅಗತ್ಯವಿರುವವರಿಗೆ ರೋಗಿಗಳ ‌ ಸಂಬಂಧಿಕರಿಗೆ ಆಹಾರ ಪೊಟ್ಟಣ, ಕೋವಿಡ್‌ ಟೆಸ್ಟ್‌ ಸೇರಿದಂತೆ ಇನ್ನಿತರ ಆರೋಗ್ಯ ಸೇವೆಯಲ್ಲಿ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಸೇವಾ ಸಂಸ್ಥೆ ವತಿಯಿಂದ 5 ಸಾವಿರದಿಂದ 10 ಮಾಸ್ಕ್ ತರಿಸಲಾಗುವುದು ಎಂದು ಭರವಸೆ ನೀಡಿದರು..

Advertisement

ಪತ್ರಿಕಾಗೋಷ್ಠಿಯಲ್ಲಿ ನಗರಸಭಾ ಅಧ್ಯಕ್ಷೆ ಆಶಾ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಗಲ ಶಿವಕುಮಾರ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next