Advertisement
ಶನಿವಾರ ಮಧ್ಯಾಹ್ನ 12 ಗಂಟೆಗೆ ನಗರಕ್ಕೆ ಆಗಮಿಸಿದ ಅವರು, ಸಹಸ್ರಾರು ಬೆಂಬಲಿಗರ ಜಯಘೋಷದ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನಗರದ ಚಿಂತಾಮಣಿ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆಯಲ್ಲಿ ಆಗಮಸಿ ನಾಮಪತ್ರ ಸಲ್ಲಿಸಿದರು. ಮರವಣಿಗೆಯಲ್ಲಿ ನಂಜನಗೂಡು ವಿಧಾನ ಸಭಾ ಕ್ಷೇತ್ರದ ಕಾರ್ಯಾಲಯಕ್ಕೆ ಆಗಮಿಸಿ ಮಾವ ಶ್ರೀನಿವಾಸ್ ಪ್ರಸಾದ್ ಆಗಮನಕ್ಕಾಗಿ 20 ನಿಮಿಷ ಕಾದಿದ್ದರು.
Related Articles
Advertisement
ಅಳಿಯನನ್ನು ಆಶೀರ್ವದಿಸಿದ ಮಾವ: ಅಳಿಯ ಹರ್ಷವರ್ಧನ ನಾಮಪತ್ರ ಸಲ್ಲಿಸುವ ವೇಳೆ ಚುನಾವಣಾ ಕಾರ್ಯಾಲಯದ ಹೊರಾವರಣಕ್ಕೆ ಆಗಮಿಸಿದ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಅಲ್ಲಿಯೇ ಅಳಿಯನನ್ನು ಆಶಿರ್ವದಿಸಿ ಮೈಸೂರಿನ ಕೃಷ್ಣರಾಜನಗರದ ಅಭ್ಯರ್ಥಿ ರಾಮದಾಸರ ನಾಮಪತ್ರ ಸಲ್ಲಿಕೆಗಾಗಿ ತರಾತುರಿಯಲ್ಲಿ ತೆರಳಿದರು.
ನಾಮಪತ್ರ ಸಲ್ಲಿಸಿ ಹೊರಬಂದ ಹರ್ಷವರ್ಧನ ಮಾತನಾಡಿ, ಜೀವನದಲ್ಲಿ ಇದೇ ಪ್ರಥಮ ಬಾರಿಗೆ ಚುನಾವಣಾ ಆಖಾಡಕ್ಕಿಳಿಯುತ್ತಿದ್ದೇನೆ. ಇದು ನನ್ನ ಸೌಭಾಗ್ಯ. ಮಾವ ಶ್ರೀನಿವಾಸ್ ಪ್ರಸಾದ್ ಈ ಕ್ಷೇತ್ರದ ಪ್ರತಿನಿಧಿಯಾಗಿ ಕೈ ಗೊಂಡ ಅಭಿವೃದ್ಧಿ, ಪ್ರಧಾನಿ ಮೋದಿಯವರ ಜನಪ್ರಿಯ ರಾಜಕಾರಣ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಯಡಯೂರಪ್ಪ ಸರ್ಕಾರದ ಸಾಧನೆಗಳು ನನ್ನ ಗೆಲುವಿಗೆ ಸಹಕಾರಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.