Advertisement
ಚುನಾವಣ ದೃಷ್ಟಿಯಿಂದ ಬಿಜೆಪಿಗೆ ಮೂರು ವಿಷಯಗಳು ಹಿನ್ನಡೆಯಾಗಬಹುದು ಎಂದು ವ್ಯಾಖ್ಯಾನಿಸಲಾಗಿತ್ತು. ಪಂಚಮಸಾಲಿ ಮೀಸಲು ಹೋರಾಟದ ಜತೆಗೆ ಪಕ್ಷದ ರಾಜ್ಯ ನಾಯಕರ ವಿರುದ್ಧವೇ ತಿರುಗಿ ಬಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಒಂದೆಡೆಯಾದರೆ, ಪಕ್ಷದ ವೇದಿಕೆಯಲ್ಲಿ ಸೂಕ್ತ ಮನ್ನಣೆ ಸಿಗುತ್ತಿಲ್ಲ ಎಂದು ಮುನಿಸಿಕೊಂಡ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಬೇಸರ ಇನ್ನೊಂದೆಡೆ. ಇದಲ್ಲದೇ ಸಚಿವ ಶ್ರೀರಾಮುಲು ಅವರ ನಡೆ ಬಿಜೆಪಿಗೆ ತೀವ್ರ ಮುಜು ಗರವನ್ನುಂಟು ಮಾಡಿತ್ತು. ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಇದಕ್ಕೆ ಪರಿಹಾರ ಹುಡುಕುವ ಹೊಣೆ ಹೊತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ ಖುದ್ದು ಅಮಿತ್ ಶಾ ಅವರೇ ಯತ್ನಾಳ್ ಅವರಿಗೆ ಕರೆ ಮಾಡಿ ಪಕ್ಷ ಹಾಗೂ ಯಡಿಯೂರಪ್ಪ ವಿರುದ್ಧ ಮಾತನಾಡಬಾರದು. ಪಂಚಮಸಾಲಿ ಮೀಸಲು ಹೋರಾಟದಲ್ಲೂ ನಿಲುವಿಗೆ ವಿರುದ್ಧವಾಗಿ ನಡೆದುಕೊಳ್ಳಬೇಡಿ ಎಂದು ಖಡಕ್ ಸೂಚನೆ ನೀಡುವ ಜತೆಗೆ ರಾಜ್ಯ ಪ್ರವಾಸದಲ್ಲಿ ಪಾಲ್ಗೊಂಡು ಪಕ್ಷ ಸಂಘಟನೆಯಲ್ಲಿ ಭಾಗಿಯಾಗುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯತ್ನಾಳ್ ಪಕ್ಷ ಹಾಗೂ ಯಡಿಯೂರಪ್ಪ ವಿರುದ್ಧ ಯಾವುದೇ ಹೇಳಿಕೆ ನೀಡದಿರಲು ನಿರ್ಧರಿಸಿದ್ದಾರೆ.
Related Articles
Advertisement
ವಿಜಯೇಂದ್ರಗೆ ಟಿಕೆಟ್ ಭರವಸೆ?ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುವುದು ಹಾಗೂ ತಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುವ ವಿಷಯ ದಲ್ಲಿ ಮಾತ್ರ ಯಡಿಯೂರಪ್ಪ ಅವರು ವರಿಷ್ಠರಿಂದ ಭರವಸೆಯ ನಿರೀಕ್ಷೆಯಲ್ಲಿದ್ದರು. ಅದಕ್ಕೆ ವರಿಷ್ಠರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ವಿಜಯೇಂದ್ರ ಅವರಿಗೆ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಸಿಗುವುದು ಬಹುತೇಕ ಖಚಿತ ಎಂದು ಪಕ್ಷದ ಮೂಲಗಳು ತಿಳಿಸಿವೆ. ಎಲ್ಲದಕ್ಕೂ ಗುರ್‌ಗುಡಲಾಗದು. ಹೀಗಾ ಗಿ ಬಿಎಸ್‌ವೈ ವಿರುದ್ಧ ರಾಜಕೀಯ ಸಂಘ ರ್ಷಕ್ಕೆ ತೆರೆ ಎಳೆದಿದ್ದೇನೆ. ಅವರ ಬಗ್ಗೆ ನನಗೆ ಗೌರವ ವಿದೆ. ಇದು ರಾಜಕೀಯ ಹೊಂದಾಣಿಕೆ ಅಲ್ಲ. ಸಣ್ಣತನದ ವ್ಯಕ್ತಿತ್ವ ಇರುವವರ ಬಗ್ಗೆ ಮಾತನಾಡ ದಂತೆ ವರಿಷ್ಠರು ಹೇಳಿದ್ದನ್ನು ಕೇಳಲೇಬೇಕು.
– ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ಶಾಸಕ