Advertisement

ದೇಶ, ಹಿಂದುತ್ವ ರಕ್ಷಣೆಗಾಗಿ BJP ಅಗತ್ಯ: MLA ಸಿದ್ದು ಸವದಿ

06:38 PM Apr 06, 2023 | Team Udayavani |

ರಬಕವಿ-ಬನಹಟ್ಟಿ: ದೇಶದ ನೆರೆ ಹೊರೆ ರಾಷ್ಟ್ರಗಳು ದೇಶವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆಸುತ್ತಿವೆ. ಆದ್ದರಿಂದ ಸುಭದ್ರವಾದ, ದೇಶ ಮತ್ತು ಹಿಂದುತ್ವ ರಕ್ಷಣೆಗಾಗಿ ಭಾರತೀಯ ಜನತಾ ಪಕ್ಷ ಅಗತ್ಯವಾಗಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

Advertisement

ಗುರುವಾರ ಬನಹಟ್ಟಿಯ ತೇರದಾಳ ಮತಕ್ಷೇತ್ರದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾರತ ಮಾತೆ, ಪಂಡಿತ ದೀನದಯಾಳ ಶರ್ಮಾ ಮತ್ತು ಶಾಮಪ್ರಸಾದ ಮುಖರ್ಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಪಕ್ಷದ ಕಾರ್ಯಕರ್ತರು ಪಕ್ಷದ ಮಹಾನ್ ನಾಯಕರಾದ ಪಂಡಿತ ದೀನದಯಾಳ ಶರ್ಮಾ, ಶಾಮಪ್ರಸಾದ ಮುಖರ್ಜಿ,ಅಟಲಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಆದ್ವಾಣಿ ಸೇರಿದಂತೆ ಅನೇಕ ಮುಖಂಡರ ಪಕ್ಷ ನಿಷ್ಠೆಯನ್ನು ತಮ್ಮಲ್ಲಿ ಅಳವಡಿಕೊಳ್ಳಬೇಕು. ಪಕ್ಷದ ಸೇವೆಯೊಂದಿಗೆ ದೇಶದ ಸೇವೆಗೆ ಮುಂದಾಗಬೇಕು ಎಂದು ಶಾಸಕ ಸವದಿ ತಿಳಿಸಿದರು.

1980 ರ ಏಪ್ರಿಲ್6 ರಂದು ಉದಯವಾದ ಬಿಜೆಪಿ ಪ್ರಪಂಚದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನೊಳಗೊಂಡ ಪಕ್ಷವಾಗಿ ದೇಶದಲ್ಲಿಯೇ ಅತಿ ಹೆಚ್ಚು ಶಾಸಕರನ್ನೊಳಗೊಂಡ ಪಕ್ಷವಾಗಿ ಬೆಳೆದು ಶಿಸ್ತು ಹಾಗೂ ಪ್ರಾಮಾಣಿಕತೆಗೆ ಹೆಸರಾದ ಪಕ್ಷವಾಗಿದೆ. ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಪಕ್ಷ ಮುನ್ನಡೆಯುತ್ತಿದ್ದು, ಪಕ್ಷದಲ್ಲಿ ಎಲ್ಲರೂ ಸಮಾನರೇ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದವರಿಗೆ ಉನ್ನತ ಸ್ಥಾನ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ನಮ್ಮ ಪಕ್ಷದಲ್ಲಿ ಹಲವಾರು ಉದಾಹರಣೆಗಳಿವೆ. ತತ್ವ-ಸಿದ್ದಾಂತಗಳನ್ನು ಹೊಂದಿರುವ ಬಿಜೆಪಿ ಇಂದು ವಿಶ್ವದಲ್ಲಿಯೇ ಅತಿಹೆಚ್ಚು ಸಂಖ್ಯೆಯ ಸದಸ್ಯರು ಹೊಂದಿರುವ ಪಕ್ಷವಾಗಿದೆ. ಪಕ್ಷದ ಸಂಸ್ಥಾಪನಾ ದಿನವಾದ ಇಂದು ಪಕ್ಷದ ಇತಿಹಾಸ ಕುರಿತು ಅವಲೋಕನ ಮಾಡಿಕೊಳ್ಳಬೇಕಾದ ದಿನವಾಗಿದೆ ಎಂದು ಸವದಿ ಹೇಳಿದರು.

ಬಿಜೆಪಿ ಮುಖಂಡ ಶ್ರೀಶೈಲ ಬೀಳಗಿ ಮಾತನಾಡಿ, ಬಿಜೆಪಿ ಪಕ್ಷ ವಿಶ್ವದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಹೊಂದಿದ ಪಕ್ಷವಾಗಿದ್ದು, ಅಂಥ ಮಹಾನ್ ಪಕ್ಷದ ಸದಸ್ಯರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

Advertisement

ಧರೆಪ್ಪ ಉಳ್ಳಾಗಡ್ಡಿ, ಸುರೇಶ ಅಕ್ಕಿವಾಟ, ಸಿದ್ರಾಮ ಸವದತ್ತಿ, ವಿಸ್ತಾರಕರಾದ ಪ್ರಶಾಂತ, ಅಶೋಕ ರಾವಳ, ಬಾಬಾಗೌಡ ಪಾಟೀಲ, ಶಿವಾನಂದ ಬುದ್ನಿ, ಶ್ರೀನಿವಾಸ ಹಳ್ಯಾಳ, ಶಿವಾನಂದ ಕಾಗಿ, ಶಂಕರಗುರು ಶೀಲವಂತ, ಶಂಕರ ಅಂಗಡಿ, ಚಿದಾನಂದ ಹೊರಟ್ಟಿ, ರವಿ ಕೊರ್ತಿ, ಭೀಮಸಿ ಪಾಟೀಲ, ಆನಂದ ಕಂಪು, ಪರಶುರಾಮ ಕಾಖಂಡಕಿ, ಈಶ್ವರ ಯಳಸಂಗ, ಸುರೇಶ ಅಕ್ಕಿವಾಟ, ವಿಜಯ ಕಲಾಲ, ಪ್ರವೀಣ ಧಬಾಡಿ, ಸವಿತಾ ಹೊಸೂರ, ರವಿ ಕರಲಟ್ಟಿ, ಅರುಣ ಬುದ್ನಿ, ಶ್ರೀಶೈಲ ಆಲಗೂರ, ವೀರೇಶ ಕುಂಚನೂರ, ಶಶಿಕಲಾ ಸಾರವಾಡ, ಭೀಮಶಿ ಹಂದಿಗುಂದ, ದುರ್ಗವ್ವ ಹರಿಜನ, ಸದಾಶಿವ ಪರೀಟ, ಶ್ರೀಶೈಲ ಅವಕ್ಕನವರ, ಶಂಕರ ಹುನ್ನೂರ, ಜಯಪ್ರಕಾಶ ಸೊಲ್ಲಾಪುರ, ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next