ನವಿ ಮುಂಬಯಿ: ಬಿಜೆಪಿ ಕೇದ್ರ ಸರಕಾರದ 3 ವರ್ಷದ ಅವಧಿಯ ಆಡಳಿತದಲ್ಲಿ ಮಾಡಿದ ನರೇಂದ್ರ ಮೋದಿ ಅವರ ಕಾರ್ಯವೈಖರಿ ಜನ ಸಮೀಕ್ಷೆಯಲ್ಲಿ ಸುಮಾರು ಶೇ. 60 ರಷ್ಟು ತೃಪ್ತಿಕರವಾಗಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಬಿಜೆಪಿ ನವಿ ಮುಂಬಯಿ ತುಳು-ಕನ್ನಡ ಘಟಕದ ಜಿಲ್ಲಾಧ್ಯಕ್ಷರಾದ ಹರೀಶ್ ಪೂಜಾರಿ ಅವರು ನುಡಿದರು.
ನೆರೂಲ್ ರಾಜೀವ್ ಗಾಂಧಿ ಮೇಲ್ಸೇತುವೆ ಹತ್ತಿರ ತಮ್ಮ ನೂತನ ಜನ ಸಂಪರ್ಕ ಕಾರ್ಯಾಲಯವನ್ನು ಇತ್ತೀಚೆಗೆ ಉದ್ಘಾಟಿಸಿ ನೆರೆದ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಮೋದಿ ಅವರ ಆಡಳಿತವನ್ನು ಇಲೆಕ್ಟ್ರೋನಿಕ್ ಮಾಧ್ಯಮದವರು ತೋರಿಸಿ ಜನ ಸಾಮಾನ್ಯರ ಅಭಿಪ್ರಾಯವನ್ನು ವಿವರಿಸಿ ಹೇಳಿದ್ದಾರೆ. ಕೇಂದ್ರ ಸರಕಾರದ ಎಲ್ಲಾ ಆರ್ಥಿಕ, ಸಾಮಾಜಿಕ ನೀತಿ ಹಾಗೂ ಯೋಜನೆಗಳು ದೇಶದ ವರ್ಚಸ್ಸನ್ನೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಿರುವುದು ಮಾತ್ರವಲ್ಲದೇ, ಭಾರತೀಯರ ಜೀವನ ಮಟ್ಟವೂ ಸುಧಾರಿಸಿದೆ ಎಂದು ನುಡಿದರು.
ಘಟಕದ ಪ್ರಧಾನ ಕಾರ್ಯದರ್ಶಿ ಗಣೇಶ್ ಶೇರಿಗಾರ್ ಮಾತನಾಡಿ, ನಮ್ಮ ಘಟಕವು ಈಗಾಗಲೇ ಸಾಮಾಜಿಕ ಬದ್ಧತೆಯ ಕಾರ್ಯವನ್ನು ಆರಂಭಿಸಿದೆ. ಅಲ್ಲದೆ ಇದೇ ಜೂನ್ 25 ರಂದು ನೆರೂಲ್ ದೇವಾಡಿಗ ಭವನದಲ್ಲಿ ಉಚಿತ ವೈದ್ಯಕೀಯ ಶಿಬಿರದ ಏರ್ಪಾಡು ಮಾಡಿದೆ. ನವಿಮುಂಬಯಿಯ ಜಿಲ್ಲಾ ಎಲ್ಲಾ ತುಳು ಕನ್ನಡಿಗರು ಅದರ ಸದುಪಯೋಗ ಪಡೆಯ ಬೇಕು ಎಂದರು.
ಈ ಸಂದರ್ಭದಲ್ಲಿ ಘಟಕದ ಉಪಾಧ್ಯಕ್ಷರುಗಳಾದ ರಮೇಶ್ ಸಾಲ್ಯಾನ್ ಬಜಗೋಳಿ, ರಾಜೇಶ್ ಗೌಡ, ರಾಜರಾಮ ಆಚಾರ್ಯ, ಬೋಳ ರವಿ ಪೂಜಾರಿ, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಸನಿಲ್, ಗಣೇಶ್ ಶೇರಿಗಾರ್ ಬ್ರಹ್ಮಾವರ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ ದೇವಾಡಿಗ, ಪೂಜಾ ಬಂಗೇರ, ಸುರೇಂದ್ರ ಶೆಟ್ಟಿ, ದಯಾನಂದ್ ದೇವಾಡಿಗ, ಸುರೇಶ್
ದೇವಾಡಿಗ, ಅಶೋಕ್ ಶೆಟ್ಟಿ, ದಿನೇಶ್ ಬಂಗೇರ, ತಾರಾನಾಥ ಸುವರ್ಣ, ಪುಷ್ಪಾರಾಜ್ ಶೆಟ್ಟಿ, ಶೇಖರ್, ದಿರೋಶ ಪೂಜಾರಿ, ಪ್ರಸಾದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.