ಚಿಕ್ಕಮಗಳೂರು/ಕೊಪ್ಪ: ಅಡಿಕೆ ಬೆಳೆಗಾರರ ಏಳ್ಗೆಗೆ ಬಿಜೆಪಿ ನೀಡಿರುವಷ್ಟು ಕೊಡುಗೆಯನ್ನು ಬೇರೆ ಯಾವ ಪಕ್ಷವೂ ನೀಡಿಲ್ಲ. ಈ ಬಗ್ಗೆ ಯಾರೊಂ ದಿಗೂ ದಾಖಲೆ ಸಹಿತ ಚರ್ಚೆಗೆ ಸಿದ್ಧ. ಅಡಿಕೆ ಮಾನ ಕಳೆದಿದ್ದು ಕಾಂಗ್ರೆಸ್‌ನವರೇ ಹೊರತು ಬಿಜೆಪಿಯಲ್ಲ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದರು.
ಕೊಪ್ಪದಲ್ಲಿ ಸೋಮವಾರ ಆಯೋಜಿ ಸಿದ್ದ “ಅಡಿಕೆ ಬೆಳೆಗಾರರ ಸಮಾವೇಶ’ವನ್ನು ಉದ್ಘಾಟಿಸಿ ಅವರು ಮಾತನಾಡಿ ದರು. ಅಡಿಕೆ ಮಲೆನಾಡಿನ ಅತ್ಯಂತ ಪ್ರಮುಖ ಬೆಳೆ. ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಹಿಂದಿ ನ ಬಿ.ಎಸ್. ಯಡಿಯೂರಪ್ಪ ಅವರ ಸರಕಾರ ಅಡಿಕೆ ಬೆಳೆಗಾರರ ಸಮಸ್ಯೆ ಪರಿಹರಿಸಲು ತನ್ನದೇ ಆದ ಕೊಡುಗೆ ನೀಡಿದೆ ಎಂದರು.
ಅಡಿಕೆ ಬೆಳೆಗಾರರ ಸಮಸ್ಯೆ ಪರಿಹಾರ ಕ್ಕಾಗಿ ಯಡಿಯೂರಪ್ಪ ಅವರು 1983 ರಲ್ಲಿ 63 ಕಿ.ಮೀ. ಪಾದಯಾತ್ರೆ ಮಾಡಿ ಸರಕಾರದ ಗಮನ ಸೆಳೆದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಅಡಿಕೆ ಬೆಳೆ ಗಾರರ ಸಹಿತ ಎಲ್ಲ ರೈತರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ರೈತಪರ ಪ್ರಧಾನಿ ಎನ್ನುವು ದನ್ನು ಸಾಬೀತು ಮಾಡಿದ್ದಾರೆ ಎಂದರು.
ಕೇಂದ್ರ ಸರಕಾರದ ಯೋಜನೆಗಳು ರೈತರ ಬದುಕಿನಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿವೆ. ಫಸಲ್ ವಿಮೆ ಯೋಜನೆಯಡಿ 1 ಲಕ್ಷ 20 ಸಾವಿರ ಕೋಟಿ ರೂ.ಗಳನ್ನು ರೈತರಿಗೆ ನೀಡಲಾಗಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಮೂಲಕ ಕೇಂದ್ರ ಸರಕಾರ ಪ್ರತಿ ರೈತರಿಗೂ ಪ್ರತಿ ವರ್ಷ 6 ಸಾವಿರ ರೂ. ನಂತೆ ಪ್ರತಿ ವರ್ಷ 11.79 ಕೋಟಿ ರೂ. ಸಹಾಯಧನ ರೈತರ ಖಾತೆಗೆ ಜಮೆ ಮಾಡುತ್ತಿದೆ. ಈ ಹಿಂದೆ ಕೃಷಿಗಾಗಿ ಬಜೆಟ್‌ನಲ್ಲಿ 25 ಸಾವಿರ ಕೋಟಿ ರೂ. ಸಿಗುತ್ತಿತ್ತು.
ಆದರೆ ಈಗ ಕೇವಲ ಕೃಷಿ ಕ್ಷೇತ್ರಕ್ಕಾಗಿ 1.32ಲಕ್ಷ ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಕೃಷಿ ಸಿಂಚಾಯಿ ಯೋಜನೆಯಡಿ ನೀರಾವರಿಗೆ 93 ಸಾವಿರ 68 ಕೋಟಿ ರೂ. ಅನುದಾನವನ್ನು ಸರ್ಕಾರ ನೀಡುತ್ತಿದೆ. ಅಲ್ಲದೇ ಅನೇಕ ಬೆಳೆಗಳಿಗೆ ಎಂಎಸ್‌ಪಿ ನಿಗದಿ ಮಾಡಿ ರೈತರ ಹಿತ ಕಾಯಲಾಗುತ್ತಿದೆ. 2014ರಲ್ಲಿ ದೇಶ ಕೃಷಿಗೆ ಸಂಬಂಧಿ ಸಿದ ಕೇವಲ ಎರಡು ಮೆಗಾ ಪಾರ್ಕ್ ಹೊಂದಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ದೇಶಾದ್ಯಂತ 22 ಮೆಗಾಪಾರ್ಕ್‌ಗಳನ್ನು ನಿರ್ಮಿಸಿ ಕೃಷಿಗೆ ಆದ್ಯತೆ ನೀಡಲಾಗಿದೆ ಎಂದರು.
2017ರಲ್ಲಿ 2ಲಕ್ಷ 79 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿತ್ತು. ಈಗ 5 ಲಕ್ಷ 49 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದೆ. 2017ರಲ್ಲಿ ಅಡಕೆ ಬೆಳೆಗೆ ಪ್ರತಿ ಕ್ವಿಂಟಾಲ್‌ಗೆ 19 ಸಾವಿರ ರೂ. ಬೆಲೆ ಇತ್ತು. ಪ್ರಸಕ್ತ 35 45 ಸಾವಿರಕ್ಕೂ ಹೆಚ್ಚು ಬೆಲೆ ಇದೆ ಎಂದ ಅವರು, ಹೊರ ದೇಶಗಳಿಂದ ಆಮದಾಗುತ್ತಿರುವ ಅಡಕೆಯಿಂದ ಇಲ್ಲಿನ ಬೆಳೆಗಾರರಿಗೆ ತೊಂದರೆಯಾಗುತ್ತಿದೆ ಎಂಬ ಭಾವನೆ ಬೆಳೆಗಾರರಲ್ಲಿದೆ. ವಿದೇಶಿ ಅಡಕೆ ಆಮದು ಸುಂಕವನ್ನು ಏರಿಕೆ ಮಾಡಿರುವುದರಿಂದ ಅಡಕೆ ಬೆಲೆಯಲ್ಲಿ ಏರಿಕೆ ಕಾಣುತ್ತಿದೆ. ವಿದೇಶಗಳಿಂದ ಅಡಕೆ ಕಳ್ಳಸಾಗಣೆ ತಡೆಗೂ ಸರ್ಕಾರ ಕಠಿಣ ಕ್ರಮ ವಹಿಸಿರುವುದರಿಂದ ಅಡಕೆ ಬೆಲೆಯಲ್ಲಿ ಚೇತರಿಕೆ ಕಂಡಿದೆ ಎಂದರು.