Advertisement

Karnataka election: ಬಂಡಾಯ ಶಮನಕ್ಕೆ ಕುಂದಾನಗರಿಗೆ ಬಂದ ಬಿ.ಎಲ್. ಸಂತೋಷ್

01:23 PM Apr 19, 2023 | Team Udayavani |

ಬೆಳಗಾವಿ: ಜಿಲ್ಲೆಯಲ್ಲಿರುವ ಬಿಜೆಪಿ ಬಂಡಾಯ ಶಮನಕ್ಕೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಬುಧವಾರ  ಬೆಳಗಾವಿಗೆ ಆಗಮಿಸಿದ್ದು, ಅತೃಪ್ತ ನಾಯಕರ ಸಭೆ ನಡೆಸಲಿದ್ದಾರೆ.

Advertisement

ಗಾಂಧಿ ನಗರದಲ್ಲಿರುವ ಸಂಕಮ ಹೊಟೇಲ್ ಗೆ ಆಗಮಿಸಿದ ಬಿ.ಎಲ್. ಸಂತೋಷ್ ಅವರು ಟಿಕೆಟ್ ವಂಚಿತರನ್ನು ಕರೆಯಿಸಿ ಸಭೆ ನಡೆಸಲಿದ್ದಾರೆ. ಜಿಲ್ಲೆಯಲ್ಲಿ ಭುಗಿಲೆದ್ದ ಬಂಡಾಯ ಶಮನಗೊಳಿಸಲಿದ್ದಾರೆ.

ಕೆಲಹೊತ್ತಿನಲ್ಲೇ ಬೆಳಗಾವಿ ಜಿಲ್ಲಾ ನಾಯಕರ ಜೊತೆ ಬಿ‌.ಎಲ್. ಸಂತೋಷ್ ಹೈವೋಲ್ಟೇಜ್ ಸಭೆ‌ ನಡೆಸಲಿದ್ದಾರೆ. ಬೆಳಗಾವಿ ನಗರ, ಬೆಳಗಾವಿ ಗ್ರಾಮೀಣ, ಚಿಕ್ಕೋಡಿ ಸಂಘಟನಾತ್ಮಕ ಜಿಲ್ಲೆಗಳ ಪದಾಧಿಕಾರಿಗಳ ಸಭೆ ನಡೆಯಲಿದ್ದು, ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್, ಶಾಸಕ ಅನಿಲ್ ಬೆನಕೆ ಸೇರಿ ಹಲವರು ಉಪಸ್ಥಿತರಿದ್ದಾರೆ.

ಟಿಕೆಟ್ ಹಂಚಿಕೆ ಬಳಿಕ ಬೆಳಗಾವಿಯ 8 ಕ್ಷೇತ್ರಗಳಲ್ಲಿ ಭುಗಿಲೆದ್ದಿದ್ದ ಬಂಡಾಯಈ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ವರಿಷ್ಠರುಬಂಡಾಯ ಶಮನಗೊಳಿಸಿದ್ದರು.

ಇದನ್ನೂ ಓದಿ:ಸಿಎಂ ಬೊಮ್ಮಾಯಿ ಭರ್ಜರಿ ರೋಡ್ ಶೋ ; ಜೆ.ಪಿ.ನಡ್ಡಾ, ನಟ ಸುದೀಪ್ ಸಾಥ್ 

Advertisement

ಬೆಳಗಾವಿ ಉತ್ತರ, ಬೆಳಗಾವಿ ಗ್ರಾಮೀಣ, ಖಾನಾಪುರ, ಸವದತ್ತಿಯಲ್ಲಿ ಬಂಡಾಯ ಶಮ‌ನವಾಗಿದ್ದು, ಟಿಕೆಟ್ ಸಿಗದಿದ್ದಕ್ಕೆ ಅಥಣಿ, ಯಮಕನಮರಡಿಯಲ್ಲಿ ಟಿಕೆಟ್ ವಂಚಿತರು ಪಕ್ಷ ತೊರೆದಿದ್ದಾರೆ.‌

ರಾಮದುರ್ಗ, ಬೈಲಹೊಂಗಲ ಕ್ಷೇತ್ರದಲ್ಲಿ ಬಂಡಾಯ ಶಮನವಾಗದ್ದಕ್ಕೆ ಸಂತೋಷ್ ಸಭೆ ನಡೆಸಲಿದ್ದಾರೆ. ಈಗಾಗಲೇ ಬಿಜೆಪಿ ತೊರೆದು ಅಥಣಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಲಕ್ಷ್ಮಣ್ ಸವದಿ ಹಾಗೂ ಯಮಕನಮರಡಿ ಟಿಕೆಟ್ ವಂಚಿತ ಮಾರುತಿ ಅಷ್ಟಗಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಬೆಳಗಾವಿ ಉತ್ತರ ಕ್ಷೇತ್ರದ ಟಿಕೆಟ್ ವಂಚಿತ ಶಾಸಕ ಅನಿಲ್ ಬೆನಕೆ ಮನವೊಲಿಕೆ ಯಶಸ್ವಿಯಾಗಿದ್ದು,  ಇತ್ತ ಬೈಲಹೊಂಗಲ ಕ್ಷೇತ್ರದಲ್ಲಿ ಪಕ್ಷೇತರರಾಗಿ ಮಾಜಿ ಶಾಸಕ ಡಾ. ವಿ.ಐ.ಪಾಟೀಲ ಕಣಕ್ಕಿಳಿದಿದ್ದಾರೆ. ರಾಮದುರ್ಗ ಪಕ್ಷೇತರ ಅಭ್ಯರ್ಥಿಯಾಗಿ ಶಾಸಕ ಮಹಾದೇವಪ್ಪ ಯಾದವಾಡ ನಾಮಪತ್ರ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next