Advertisement
ಹೈದರಾಬಾದ್‌ನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯ ಕಾರಿಣಿಯ ಕೊನೆಯ ದಿನವಾದ ರವಿವಾರ ಪಕ್ಷದ ನಾಯಕರು ಮತ್ತು ಪದಾಧಿಕಾರಿಗಳಿಗೆ ಪ್ರಧಾನಿ ಮೋದಿ ಅವರು ನೀಡಿರುವ ಕರೆಯಿದು.
Related Articles
Advertisement
ಕನ್ಹಯ್ಯಗೆ ಶ್ರದ್ಧಾಂಜಲಿಕಾರ್ಯಕಾರಿಣಿಯ ವೇಳೆ ರಾಜಸ್ಥಾನದ ಉದಯಪುರದಲ್ಲಿ ಧರ್ಮಾಂಧರಿಂದ ಹತ್ಯೆಗೀಡಾದ ಟೈಲರ್ ಕನ್ಹಯ್ಯಲಾಲ್ ಮತ್ತು ಇತ್ತೀಚೆಗೆ ಪಂಜಾಬ್‌ನಲ್ಲಿ ಕೊಲೆಗೀಡಾದ ಗಾಯಕ ಸಿಧು ಮೂಸೆವಾಲಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅವನತಿಯತ್ತ ಸಾಗಿದ ಪಕ್ಷಗಳ ತಪ್ಪಿನಿಂದ ಕಲಿತುಕೊಳ್ಳಿ
ದೇಶವು ಕುಟುಂಬ ರಾಜಕಾರಣ ದಿಂದ ಬೇಸತ್ತಿದೆ. ಅಂಥ ಪಕ್ಷಗಳು ಹೆಚ್ಚು ಕಾಲ ಬದುಕಲಾರವು. ಹಲವು ದಶಕಗಳ ಕಾಲ ಅಧಿಕಾರ ದಲ್ಲಿದ್ದ ಕೆಲವು ಪಕ್ಷಗಳು ಈಗ ಅಸ್ತಿತ್ವಕ್ಕಾಗಿ ಹೋರಾಡುತ್ತಿವೆ. ಅವನತಿಯತ್ತ ಸಾಗುತ್ತಿರುವ ಪಕ್ಷಗಳನ್ನು ನಾವು ನೋಡುತ್ತಿದ್ದೇವೆ. ನಾವು ಆ ಪಕ್ಷಗಳನ್ನು ಅಪಹಾಸ್ಯ ಮಾಡಬಾರದು. ಬದಲಾಗಿ ಅವರು ಮಾಡಿದ ತಪ್ಪುಗಳಿಂದ ಪಾಠ ಕಲಿತು, ಅಂತಹ ತಪ್ಪು ನಮ್ಮಿಂದ ಆಗದಂತೆ ನೋಡಿಕೊಳ್ಳಬೇಕು ಎಂದು ಯಾವುದೇ ಪಕ್ಷದ ಹೆಸರು ಎತ್ತದೆಯೇ ಪ್ರಧಾನಿ ಮೋದಿ ಬಿಜೆಪಿ ನಾಯಕರಿಗೆ ಕಿವಿಮಾತು ಹೇಳಿದ್ದಾರೆ. ಭಾಗ್ಯನಗರ ಎಂದ ಮೋದಿ
ಹೈದರಾಬಾದನ್ನು ಪ್ರಧಾನಿ ತಮ್ಮ ಭಾಷಣದಲ್ಲಿ “ಭಾಗ್ಯನಗರ’ ಎಂದು ಕರೆದು ಅಚ್ಚರಿ ಮೂಡಿಸಿದ್ದಾರೆ. ಇದು ನಿಜವಾಗಿಯೂ ಭಾಗ್ಯನಗರ. ಇಲ್ಲಿಂದ ನಮಗೆಲ್ಲರಿಗೂ ಭಾಗ್ಯವಿದೆ. ಸರ್ದಾರ್ ಪಟೇಲ್ ಅವರು “ಏಕ ಭಾರತ’ ಎಂದು ಪರಿಕಲ್ಪನೆಯನ್ನು ನೀಡಿದ್ದು ಇದೇ ನೆಲದಿಂದ. ಜೆ.ಪಿ. ನಡ್ಡಾ ನೇತೃತ್ವದ ಬಿಜೆಪಿಯು ಈಗ ಇದನ್ನು “ಶ್ರೇಷ್ಠ ಭಾರತ’ವನ್ನಾಗಿ ರೂಪಿಸಬೇಕಿದೆ ಎಂದು ಮೋದಿ ಹೇಳಿರುವುದಾಗಿ ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್ ತಿಳಿಸಿ
ದ್ದಾರೆ. “ಹೈದರಾಬಾದ್ ಹೆಸರನ್ನು ಭಾಗ್ಯನಗರವೆಂದು ಬದಲಾಯಿಸಲಾಗು ವುದೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಸಾದ್, “ಇಲ್ಲಿ ನಮ್ಮ ಸರಕಾರ ರಚನೆ ಯಾದ ಬಳಿಕ ಮುಖ್ಯಮಂತ್ರಿ ಆ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದಿದ್ದಾರೆ. ಮೋದಿ ಮಾತಿನ ಝಲಕ್
1 ದೀರ್ಘಕಾಲ ದೇಶ ಆಳಿರುವ ಪಕ್ಷಗಳು ಈಗ ಅಸ್ತಿತ್ವ ಕ್ಕಾಗಿ ಹೋರಾಡುತ್ತಿವೆ. ಅವುಗಳ ತಪ್ಪುಗಳಿಂದ ನಾವು ಪಾಠ ಕಲಿಯಬೇಕು.
2 ನಾವೇನಿದ್ದರೂ ಪಿ2-ಜಿ2 (ಜನ-ಪರ ಮತ್ತು ಆಡಳಿತ-ಪರ) ಮಂತ್ರವನ್ನಷ್ಟೇ ಪಾಲಿಸಬೇಕು.
3 ನಮ್ಮದು ಓಲೈಕೆಯ ರಾಜಕಾರಣವಾಗಿರದೆ ಸಂತೃಪ್ತಿಯ ರಾಜಕಾರಣವಾಗಿರಬೇಕು.
4 ಇತರ ಸಮುದಾಯಗಳ ವಂಚಿತ – ತುಳಿತಕ್ಕೆ ಒಳಗಾದ ವರ್ಗಗಳಿಗಾಗಿ ಕೆಲಸ ಮಾಡಬೇಕು.
5 ಹೈದರಾಬಾದ್ ಎನ್ನುವುದು “ಭಾಗ್ಯನಗರ’. ಈ ನಗರದಿಂದಲೇ ಸರ್ದಾರ್ ಪಟೇಲ್ ಅವರು “ಏಕ ಭಾರತ’ದ ಪರಿಕಲ್ಪನೆಯನ್ನು ಘೋಷಿಸಿದರು. ಬಿಜೆಪಿ ಅದನ್ನೀಗ “ಶ್ರೇಷ್ಠ ಭಾರತ’ವನ್ನಾಗಿ ರೂಪಿಸಬೇಕು. ಮುಂದಿನ 30-40 ವರ್ಷಗಳು ಬಿಜೆಪಿಯ ಯುಗವಾಗಿರಲಿವೆ. ಆಂಧ್ರ, ತಮಿಳುನಾಡು, ಕೇರಳ ಮತ್ತು ಒಡಿಶಾಗಳಲ್ಲೂ ಬಿಜೆಪಿಯೇ ಅಧಿಕಾರಕ್ಕೆ ಏರಲಿದೆ. ಭಾರತವನ್ನು ಬಿಜೆಪಿಯು “ವಿಶ್ವಗುರು’ವನ್ನಾಗಿ ಬದಲಾಯಿಸಲಿದೆ.
– ಅಮಿತ್ ಶಾ, ಕೇಂದ್ರ ಗೃಹ ಸಚಿವ