Advertisement
ನಗರ ಹೊರವಲಯದ ಮಾದಾವರದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್-ಜೆಡಿಎಸ್ ಜಂಟಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರ ಸೂಚನೆ ಮೇರೆಗೆ ಜಂಟಿ ಸಮಾವೇಶ ಆಯೋಜನೆ ಮಾಡಲಾಗಿದೆ. ಏಪ್ರಿಲ್-ಮೇನಲ್ಲಿಲೋಕ ಸಭೆ ಚುನಾವಣೆ ನಡೆಯುತ್ತಿದೆ. ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲು ಪ್ರಯತ್ನ ನಡೆಸಿದ್ದಾರೆ. ಆದರೆ, ಜಾತ್ಯಾತೀತ ಶಕ್ತಿಗಳು ಒಂದಾಗಿ ದೇಶಕ್ಕೆ ಸ್ಪಷ್ಟಸಂದೇಶ ರವಾನೆ ಮಾಡಬೇಕು ಎಂದರು.
ಚುಕ್ಕಾಣಿ ಹಿಡಿಯಬೇಕು ಎಂದರು. ರಾಜ್ಯದಲ್ಲಿ ಮೇ ತಿಂಗಳಲ್ಲಿ ಮೈತ್ರಿ ಸರ್ಕಾರ ಜಾರಿಗೆ ಬಂದಿದೆ. ಎರಡೂ ಪಕ್ಷಗಳು ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಹಾಕಿಕೊಂಡು, ಬಡವರು, ದಲಿತರ ಪರ ಜನಪರ ಯೋಜನೆಗಳನ್ನು ಕೊಡಲಾಗುತ್ತಿದೆ. ರಾಜ್ಯದ
28 ಕ್ಷೇತ್ರಗಳನ್ನು ಒಟ್ಟಾಗಿ ಗೆಲ್ಲಬೇಕು. ಹಿಂದೆ ಏನೇ ಹೋರಾಟ ಮಾಡಿದ್ದರೂ ಬಿಜೆಪಿ ಸೋಲಿಸಲು ನಮ್ಮ ಭಿನ್ನಾಭಿಪ್ರಾಯ ಮರೆತು ಪ್ರಯತ್ನ ಮಾಡಬೇಕು ಎಂದರು. ಈಗ ರಾಜ್ಯಾಂಗಕ್ಕೆ ರಕ್ಷಣೆ ಇಲ್ಲ. ನಮ್ಮ ದೇಶದ ಜನರು ಬುದಿಟಛಿವಂತರು.
Related Articles
ಎಂದು ಹೇಳುತ್ತಾರೆ. ನಾವು ಸಂವಿಧಾನ ಉಳಿಸಬೇಕಿದೆ. ಪ್ರಧಾನಿ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ದೂರಿದರು.ಮೋದಿ ಬಡವರ ಚೌಕಿದಾರ ಆಗಲಿಲ್ಲ. ಶ್ರೀಮಂತರ ಚೌಕಿದಾರ ಆಗಿದ್ದಾ ರೆ. ರೈತರು ಸಾಲ ಮನ್ನಾ ಮಾಡಿ ಎಂದು ಕೇಳಿದ್ದರು. ನಾನೂ ಮುಖ್ಯಮಂತ್ರಿಯಾಗಿದ್ದಾಗ ನಿಯೋಗ ತೆಗೆದುಕೊಂಡು ಹೋಗಿ ಕೇಳಿದರೆ ಜಪ್ಪಯ್ಯ ಅಂದ್ರೂ ಮೋದಿ ಕೇಳಲಿಲ್ಲ. ನಾವು ಮೈತ್ರಿ ಪಕ್ಷಗಳು ರೈತರ ಸಾಲ ಮನ್ನಾ ಮಾಡಿದ್ದೇವೆ ಎಂದು ಹೇಳಿದರು.
Advertisement
ಮೈತ್ರಿ ಪಕ್ಷಗಳ ಭಿನ್ನಾಭಿಪ್ರಾಯವನ್ನೇ ದೊಡ್ಡದು ಮಾಡಬೇಡಿ: ಸಿಎಂ ಎಚ್‌ಡಿಕೆ
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ರಾಜ್ಯದ ಮೈತ್ರಿಪಕ್ಷಗಳ ಕಾರ್ಯಕರ್ತರ ನಡುವೆ ಮೂರು ಕ್ಷೇತ್ರಗಳಲ್ಲಿನ ಭಿನ್ನಾಭಿಪ್ರಾಯ
ದೊಡ್ಡದು ಮಾಡದೇ 28 ಕ್ಷೇತ್ರಗಳ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಎರಡೂ ಪಕ್ಷಗಳ ಕಾರ್ಯಕರ್ತರಿಗೆ ಮನವಿ ಮಾಡಿದರು. ಮೈತ್ರಿ ಸರ್ಕಾರ ರಾಜ್ಯದಲ್ಲಿ 44 ಲಕ್ಷ ರೈತರಲ್ಲಿ ಈಗಾಗಲೇ 15 ಲಕ್ಷ ರೈತರ ಸಾಲ ಮನ್ನಾ ಮಾಡಿದೆ. ಮುಂದಿನ ದಿನಗಳಲ್ಲಿ ರೈತರ ಸಮಸ್ಯೆಗಳನ್ನು ನಿವಾರಿಸಲು ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ತಮಿಳುನಾಡು ರೈತರು ದೆಹಲಿಯಲ್ಲಿ ಅರೆಬೆತ್ತಲೆ ಸೇವೆ ಮಾಡಿದರೂ ಪ್ರಧಾನಿ ಅವರನ್ನು ಮಾತನಾಡಿಸಲಿಲ್ಲ. ಈಗ ಕಿಸಾನ್ ಸಮ್ಮಾನ ಯೋಜನೆಗೆ 10 ಲಕ್ಷ ರೈತರ ಪಟ್ಟಿ ಕೊಟ್ಟಿದ್ದೇವೆ. ಆದರೆ, ಕೇವಲ 17 ಕುಟುಂಬಗಳಿಗೆ ಮಾತ್ರ ಹಣ ಹಾಕಿದ್ದಾರೆ. ಯುಪಿಎ ಅವಧಿಯಲ್ಲಿ ಬ್ಯಾಂಕ್‌ಗಳು ಹಾಳಾಗಿವೆ ಎಂದು ಹೇಳಿದ್ದ ಪ್ರಧಾನಿ
ಈಗ 4.5 ಬಿಲಿಯನ್ ಕೋಟಿ ಸಾಲ ಪಡೆದುಕೊಂಡಿದ್ದಾರೆ ಎಂದು
ಆರೋಪಿಸಿದರು. ಮಹದಾಯಿ ನೀರು ನೀರು ಹಂಚಿಕೆ ಮಾಡಿ
ನ್ಯಾಯಮಂಡಳಿ ಆದೇಶ ಹೊರಡಿಸಿದೆ. ಆದರೆ, ಕೇಂದ್ರ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸದೆ ಇರುವುದರಿಂದ ಮಹದಾಯಿ ಯೋಜನೆ ಕೈಗೆತ್ತಿಕೊಳ್ಳಲು ಆಗುತ್ತಿಲ್ಲ. ಕೃಷ್ಣಾ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಕೈಗೆತ್ತಿಕೊಳ್ಳಲು ಮುಂದಾದರೆ, ಕೇಂದ್ರ ಸರ್ಕಾರ ಸಹಕಾರ ಕೊಡುತ್ತಿಲ್ಲ ಎಂದು ದೂರಿದರು. ಉತ್ತರ ಕರ್ನಾಟಕದಲ್ಲಿ 8 ಲಕ್ಷ ನರೇಗಾ ಯೋಜನೆ ಮೂಲಕ ಉದ್ಯೋಗ ಸೃಷ್ಟಿ ಮಾಡಿದ್ದೇವೆ. ಬೀದಿ ವ್ಯಾಪಾರಿಗಳಿಗೆ ಬಡವರ ಬಂಧು ಯೋಜನೆ ಜಾರಿಗೆ ತಂದಿದ್ದೇವೆ. ಬೆಂಗಳೂರಿನ ಅಭಿವೃದ್ಧಿಗೆ ಒಂದು ಲಕ್ಷ ಕೋಟಿ ಯೋಜನೆ ರೂಪಿಸಿದ್ದೇವೆ ಎಂದರು. ಭ್ರಷಾಚಾರದ ಬಗ್ಗೆ ಮಾತನಾಡುವ ಮೋದಿ ಪಕ್ಷಕ್ಕೆ ಕಾರ್ಪೋರೇಟ್ ಸಂಸ್ಥೆಗಳು ದೇಣಿಗೆ ನೀಡಿವೆ. ಆ ಹಣವನ್ನು ಮಾಧ್ಯಮಗಳಿಗೆ ನೀಡಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ.
ಮಾಧ್ಯಮಗಳು ದೇಶ ಮುಖ್ಯ ಎಂಬುದನ್ನು ಮರೆಯಬಾರದು ಎಂದರು. ರಾಹುಲ್‌ಗೆ ಪತ್ರ ನೀಡಿದ ದೇವೇಗೌಡ ಮಾದಾವರದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್-ಜೆಡಿಎಸ್ ಜಂಟಿ ಸಮಾವೇಶದ ವೇದಿಕೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಎಐಸಿಸಿ
ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ
ವೇಣುಗೋಪಾಲ್ ಆಪ್ತವಾಗಿ ಮಾತನಾಡಿದ್ದು ತೀವ್ರ ಕುತೂಹಲಕ್ಕೆ
ಕಾರಣವಾಗಿತ್ತು. ಮಾತುಕತೆ ವೇಳೆ ದೇವೇಗೌಡರು ಪತ್ರವೊಂದನ್ನು
ರಾಹುಲ್ ಗಾಂಧಿಗೆ ನೀಡಿದರು. ಅದನ್ನು ತೆರೆದು ಓದಲು ಮುಂದಾದಾಗ ತಡೆದ ದೇವೇಗೌಡರು, ಆಮೇಲೆ ಓದಿ ಎಂದು ಸನ್ನೆ ಮಾಡಿದರು. ಹೀಗಾಗಿ, ತಮ್ಮ ಹಿಂಬದಿಯಿದ್ದ ಭದ್ರತಾ ಸಿಬ್ಬಂದಿಗೆ ಪತ್ರ ನೀಡಿದ ರಾಹುಲ್ ಗಾಂಧಿ ನಂತರ ಕೊಡುವಂತೆ ಹೇಳಿದರು. ರಾಜ್ಯದ ಕೆಲವೊಂದು ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವೆ
ಅಸಮಾಧಾನ, ಒಳ ಏಟು ಹಾಗು ಆಂತರಿಕ ಬಿಕ್ಕಟ್ಟಿಗೆ ಕಾರಣವಾಗಿರುವ
ವಿಚಾರವನ್ನು ದೇವೇಗೌಡರು ರಾಹುಲ್ ಗಮನಕ್ಕೆ ರಾಜ್ಯ ಉಸ್ತುವಾರಿ
ವೇಣುಗೋಪಾಲ್ ಅವರ ಸಮ್ಮುಖದಲ್ಲಿಯೇ ತಂದಿದ್ದಾರೆ ಎನ್ನಲಾಗಿದೆ. ಆದರೆ, ಜೆಡಿಎಸ್ ಮೂಲಗಳು ಇದನ್ನು ನಿರಾಕರಿಸಿವೆ. ಚೌಕಿದಾರ್ ಚೋರ್ ಹೈ ಎಂದ ಯುವ ಕಾಂಗ್ರೆಸ್
ಯುವ ಕಾಂಗ್ರೆಸ್ ಕಾರ್ಯಕರ್ತರು ವೇದಿಕೆಯಲ್ಲಿ ರಾಹುಲ್ ಗಾಂಧಿ ಸೇರಿ ಯಾವುದೇ ನಾಯಕರು ಮೋದಿ ಹೆಸರು ಹೇಳಿದಾಗ “ಚೌಕಿದಾರ್ ಚೋರ್ ಹೈ’ ಎಂದು ಘೋಷಣೆಗಳನ್ನು ಕೂಗುತ್ತಿದ್ದರು. ರಾಹುಲ್ ಗಾಂಧಿಯವರು ತಮ್ಮ ಭಾಷಣದಲ್ಲಿ ಮೋದಿಯವರು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ಹಾಕುತ್ತೇವೆಂದು ಹೇಳಿದ್ದರು. “ಆಪ್ ಕೋ ಮಿಲಾ ಕ್ಯಾ 15 ಲ್ಯಾಕ್’ ಎಂದು ಪ್ರಶ್ನಿಸಿದಾಗ, ಯುವ ಕಾರ್ಯಕರ್ತರು ನಹೀ ನಹೀ, ಚೌಕಿದಾರ್ ಚೋರ್ ಹೈ ಎಂದು ಕೂಗುತ್ತಲೇ ಇದ್ದರು. ಯುವಕರ ಭವಿಷ್ಯ ರೂಪಿಸುವ ಚುನಾವಣೆ: ಈಶ್ವರ್ ಖಂಡ್ರೆ
ಬೆಂಗಳೂರು: ರಾಷ್ಟ್ರದ ಯುವಕರ ಭವಿಷ್ಯ ರೂಪಿಸುವ ಚುನಾವಣೆ ಇದಾಗಿದೆ. ಜಾತ್ಯತೀತ ಅಭ್ಯರ್ಥಿಗಳನ್ನು ಗೆಲ್ಲಿಸುವುದೇ ನಮ್ಮ ಗುರಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದರು. ಕಾಂಗ್ರೆಸ್-ಜೆಡಿಎಸ್ ಜಂಟಿಯಾಗಿ ಹಮ್ಮಿಕೊಂಡಿದ್ದ ಪರಿವರ್ತನಾ ಸಮಾವೇಶದಲ್ಲಿ ಮಾತನಾಡಿದ ಅವರು, ಜಾತ್ಯತೀತ ಪಕ್ಷಗಳಿಗೆ ಈ ದೇಶದಲ್ಲಿ ಇತಿಹಾಸ ಇದೆ. ಬಿಜೆಪಿ ಜಾತಿ, ಜಾತಿಗಳ ನಡುವೆ ದ್ವೇಷ ಹುಟ್ಟಿಸಿ ಸೇಡಿನ ರಾಜಕಾರಣ ಮಾಡುತ್ತಿದೆ. ರಾಷ್ಟ್ರವನ್ನು 21ನೇ ಶತಮಾನಕ್ಕೆ ತೆಗೆದುಕೊಂಡು ಹೋಗಲು ತಂತ್ರಜ್ಞಾನ ಅಭಿವೃದ್ಧಿ ಪಡೆಸಿರುವ
ಶ್ರೆಯಸ್ಸು ರಾಜೀವ್ ಗಾಂಧಿಗೆ ಸಲ್ಲುತ್ತದೆ. ಇಸ್ರೊ ಸ್ಥಾಪಿಸಿದವರು ರಾಜೀವ್‌ಗಾಂಧಿ, ಬಿಜೆಪಿಯವರು ಸ್ಥಾಪಿಸಿದ್ದಲ್ಲ. ರಾಜ್ಯದಲ್ಲಿ 25 ಸ್ಥಾನ ಗೆಲ್ಲಿಸಿ, ದೇಶದಲ್ಲಿ ಬಿಜೆಪಿಯನ್ನು ಬುಡ ಸಮೇತ ಕಿತ್ತು ಹಾಕುವ ಕೆಲಸ ಮಾಡಬೇಕು ಎಂದರು. ಹಾರಾಡಿದ ಕಾಂಗ್ರೆಸ್-ಜೆಡಿಎಸ್ ಬಾವುಟ: ಕಾಂಗ್ರೆಸ್ -ಜೆಡಿಎಸ್ ಜಂಟಿಯಾಗಿ ಹಮ್ಮಿಕೊಂಡಿದ್ದ ಪರಿವರ್ತನಾ ಸಮಾವೇಶದಲ್ಲಿ ಎರಡೂ ಪಕ್ಷಗಳ ಬಾವುಟಗಳು ಹಾರಾಡಿದವು. ಕಾಂಗ್ರೆಸ್ ಪರವಾದ ಘೋಷಣೆಗಳು ಹೆಚ್ಚಾಗಿ ಕೇಳಿ ಬಂದವು. ಜೆಡಿಎಸ್ ಕಾರ್ಯಕರ್ತರ ಸಂಖ್ಯೆ ಕಡಿಮೆ ಇತ್ತು.