Advertisement

ಗುಜರಾತ್‌ನಲ್ಲಿ ನಮಗೆ ಸೋಲಾಗಲಿದೆ: ಬಿಜೆಪಿ ಸಂಸದ !

10:08 AM Dec 17, 2017 | |

ಮುಂಬಯಿ: ಗುಜರಾತ್‌ ವಿಧಾನಸಭಾ ಚುನಾವಣಾ ಫ‌ಲಿತಾಂಶವನ್ನು ದೇಶವೇ ಎದುರುನೋಡುತ್ತಿರುವ ವೇಳೆ ಬಿಜೆಪಿ ರಾಜ್ಯಸಭಾ ಸದಸ್ಯ ಸಂಜಯ್‌ ಕಾಕಡೆ ಅವರು ‘ನಮ್ಮ ಪಕ್ಷ ಸೋಲು ಅನುಭವಿಸಲಿದೆ’ ಎಂದು ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. 

Advertisement

ಸಂಜಯ್‌ ಕಾಕಡೆ ಪ್ರಕಾರ ‘ಆಡಳಿತ ವಿರೋಧಿ ಅಲೆ ಕೆಲಸ ಮಾಡಲಿದ್ದು, ಪಕ್ಷ ಸೋಲುತ್ತದೆ. ಮಾತ್ರವಲ್ಲದೆ ಮುಸ್ಲಿಮರು ನಮ್ಮ ಸರ್ಕಾರದ ವಿರುದ್ಧ ಅಸಮಧಾನ ಹೊಂದಿದ್ದು ಪರಿಣಾಮ ಬೀರಲಿದೆ’ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. 

‘ನರೇಂದ್ರ ಮೋದಿ ಅವರು ಪ್ರಧಾನಿಯಾದಾಗಿನಿಂದ ಗುಜರಾತ್‌ ಸಮಸ್ಯೆಗಳ ಬಗ್ಗೆ ಗಮನವನ್ನೇ ಹರಿಸಲಿಲ್ಲ. ಬಿಜೆಪಿ ಸರಿಯಾಗಿ ಚುನಾವಣಾ ಪ್ರಚಾರವನ್ನೂ ಮಾಡಲಿಲ್ಲ, ಹೀಗಾಗಿ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ’ ಎಂದೂ ಕಾಕಡೆ ಹೇಳಿದ್ದಾರೆ. 

ಚುನಾವಣೋತ್ತರ ಸಮೀಕ್ಷೆಗಳ ಪೈಕಿ 6 ಪ್ರಮುಖ ಸಮೀಕ್ಷೆಗಳಲ್ಲಿ ಬಿಜೆಪಿ ಗೆಲುವು ಸಾಧಿಸುವುದಾಗಿ  ಹೇಳಲಾಗಿದೆ. 

ಕಾಕಡೆ ಮೊದಲು ಪಕ್ಷೇತರರಾಗಿ ರಾಜ್ಯಸಭೆಗೆ ಆಯ್ಕೆಯಾಗಿ ಬಳಿಕ ಬಿಜೆಪಿ ಸೇರ್ಪಡೆಯಾಗಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next