ಕೋಲ್ಕತ್ತಾ: ಗುರುವಾರ ದೇಶದಾದ್ಯಂತ ಹನುಮ ಜಯಂತಿ ನಡೆದಿದ್ದು, ರಾಮ ನವಮಿ ಸಮಯದಲ್ಲಿ ನಡೆದ ಹಿಂಸಾಚಾರದ ಕಾರಣದಿಂದ ಪಶ್ಚಿಮ ಬಂಗಾಲದಲ್ಲಿ ಪೊಲೀಸ್ ಭದ್ರತೆಯಲ್ಲಿ ಹನುಮಂತನ ಪೂಜಿಸಲಾಗಿದೆ. ಆದರೆ ಇದರ ನಡುವೆ ಹೂಗ್ಲಿಯಲ್ಲಿ ಸ್ಥಳೀಯ ಸಂಸದೆಗೆ ಹನುಮ ಜಯಂತಿ ಆಚರಣೆಯಲ್ಲಿ ಭಾಗವಹಿಸಲು ಪೊಲೀಸರು ಅವಕಾಶ ನೀಡದ ಘಟನೆ ನಡೆದಿದೆ.
ಗುರುವಾರ ಹೂಗ್ಲಿಯಲ್ಲಿ ನಡೆದ ಹನುಮಾನ್ ಜಯಂತಿ ಶೋಭಾಯಾತ್ರೆಯಲ್ಲಿ ಭಾಗವಹಿಸದಂತೆ ಪೊಲೀಸರು ತಡೆದಿದ್ದಾರೆ ಎಂದು ಬಿಜೆಪಿ ಸಂಸದೆ ಲಾಕೆತ್ ಮುಖರ್ಜಿ ಆರೋಪಿಸಿದ್ದಾರೆ.
“ನನಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವಂತೆ ನಾನು ಅವರಿಗೆ ಹೇಳಿದೆ ಆದರೆ ಅವರು (ಪೊಲೀಸರು) ನಾನು ಹೊರಗಿನವನು ಎಂದು ಹೇಳಿದರು. ನಾನು ಹೊರಗಿನವನಲ್ಲ, ಇಲ್ಲಿಯ ಸಂಸದೆ. ನಾನು ಹೂಗ್ಲಿಯನ್ನು ಪ್ರತಿನಿಧಿಸುತ್ತೇನೆ. ನಾನು ಹೇಗೆ ಹೊರಗಿನವಳಾಗುತ್ತೇನೆ? ನಾನು ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ. ನಾನು ರಾಜ್ಯಪಾಲರೊಂದಿಗೆ ಮಾತನಾಡಿದ್ದೇನೆ” ಎಂದು ಚಟರ್ಜಿ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಹೂಗ್ಲಿ ಸಂಸದೀಯ ಕ್ಷೇತ್ರದ ಸಂಸದೆ ಚಟರ್ಜಿ ಅವರನ್ನು ಜಿಲ್ಲೆಯ ಬೊರೊಪಾರಾ ಮೋರ್ ನಲ್ಲಿ ತಡೆಹಿಡಿಯಲಾಯಿತು.
ಇದನ್ನೂ ಓದಿ:Narendra Modi: ಲೋಕಸಭಾ ಚುನಾವಣೆಗೆ ಕಹಳೆಯೂದಿದ ಮೋದಿ
ಸೋಮವಾರ ಸಂಜೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಲ್ಲು ತೂರಾಟ ವರದಿಯಾದ ನಂತರ, ರಿಶ್ರಾ ರೈಲು ನಿಲ್ದಾಣಕ್ಕೆ ಮತ್ತು ಅಲ್ಲಿಂದ ಹೊರಡುವ ಎಲ್ಲಾ ಸ್ಥಳೀಯ ಮತ್ತು ಮೇಲ್ ಎಕ್ಸ್‌ಪ್ರೆಸ್ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಯಿತು.