ಕೋಲ್ಕತಾ: ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ಪಶ್ಚಿಮಬಂಗಾಳದ ಜಾರ್ ಗ್ರಾಮ್ ನ ಬಿಜೆಪಿ ಸಂಸದ ಕುನಾರ್ ಹೆಂಬ್ರಾಮ್ ಶನಿವಾರ (ಮಾರ್ಚ್ 09) ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ಘೋಷಿಸಿದ್ದಾರೆ.
ಇದನ್ನೂ ಓದಿ:ಜಿಲ್ಲಾಡಳಿತದ ಯಡವಟ್ಟು; ಬ್ಯಾನರ್ ಗಳಲ್ಲಿ ಶಾಸಕ ರೆಡ್ಡಿ ಮಾಯ; ಅಭಿಮಾನಿಗಳಿಂದ ಆಕ್ರೋಶ
ಎರಡು ಸಾಲುಗಳ ರಾಜೀನಾಮೆ ಪತ್ರದಲ್ಲಿ, “ ನಾನು ಪಕ್ಷದಿಂದ ಅಂತರ ಕಾಯ್ದುಕೊಳ್ಳಲು ಬಯಸಿದ್ದು, ಇದು ವೈಯಕ್ತಿಕ ಕಾರಣದ ನಿರ್ಧಾರವಾಗಿದೆ” ಬಿಜೆಪಿ ಜಿಲಾಧ್ಯಕ್ಷರಿಗೆ ಕಳುಹಿಸಿರುವ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ವರದಿ ತಿಳಿಸಿದೆ.
ಕೆಲವು ದಿನಗಳ ಹಿಂದೆ ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ಹೆಂಬ್ರಾಮ್ ಪತ್ರದಲ್ಲಿ ತಿಳಿಸಿರುವುದಾಗಿ ಬಿಜೆಪಿ ರಾಜ್ಯ ವಕ್ತಾರ ಸಮೀಕ್ ಭಟ್ಟಾಚಾರ್ಯ ಮಾಹಿತಿ ನೀಡಿದ್ದಾರೆ.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಟಿಎಂಸಿ ಸಂಸದ ಸಂತನು ಸೇನ್, ಚುನಾವಣೆಯಲ್ಲಿ ಬಿಜೆಪಿ ತನ್ನ ಸ್ಥಾನವನ್ನು ಕಳೆದುಕೊಳ್ಳಲಿದೆ ಎಂಬುದು ಕುನಾರ್ ಗೆ ತಿಳಿದಿದ್ದು, ಹೀಗಾಗಿ ಪಕ್ಷ ತೊರೆಯಲು ನಿರ್ಧರಿಸಿದ್ದಾರೆಂದು ತಿಳಿಸಿದ್ದಾರೆ.