Advertisement

Lok Sabha Poll:ಮುಜಾಫರ್‌ ಪುರ್‌ ಬಿಜೆಪಿ ಸಂಸದ ನಿಶಾದ್‌ ರಾಜೀನಾಮೆ, ಕಾಂಗ್ರೆಸ್‌ ಸೇರ್ಪಡೆ

05:11 PM Apr 02, 2024 | Team Udayavani |

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆ ಸನ್ನಿಹಿತವಾಗಿರುವ ನಡುವೆಯೇ ಬಿಹಾರದ ಮುಜಾಫರ್‌ ಪುರ್‌ ಕ್ಷೇತ್ರದ ಸಂಸದ ಅಜಯ್‌ ನಿಶಾದ್‌ ಮಂಗಳವಾರ (ಏ.02) ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಪಕ್ಷದ ಎಲ್ಲಾ ಸ್ಥಾನಗಳಿಗೂ ರಾಜೀನಾಮೆ ನೀಡಿದ್ದು, ಬಿಜೆಪಿಗೆ ದೊಡ್ಡ ಹಿನ್ನಡೆಯಾದಂತಾಗಿದೆ.

Advertisement

ಇದನ್ನೂ ಓದಿ:Ram Navami: ಎರಡು ಐಪಿಎಲ್ ಪಂದ್ಯಗಳ ದಿನಾಂಕ ಬದಲಾವಣೆ ಮಾಡಿದ ಬಿಸಿಸಿಐ

2024ರ ಲೋಕಸಭಾ ಚುನಾವಣೆಯಲ್ಲಿ ನಿಶಾದ್‌ ಅವರಿಗೆ ಬಿಜೆಪಿ ಟಿಕೆಟ್‌ ನಿರಾಕರಿಸಿದ್ದು, ಅಸಮಾಧಾನಕ್ಕೆ ಕಾರಣವಾಗಿತ್ತು. ಬಿಜೆಪಿಯ ನಡವಳಿಕೆಯಿಂದ ಆಘಾತವಾಗಿದ್ದು, ಪಕ್ಷದ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡಿರುವುದಾಗಿ ನಿಶಾದ್‌ ಪಕ್ಷದ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ರಾಜೀನಾಮೆ ನೀಡಿದ ಅಜಯ್‌ ನಿಶಾದ್‌ ಇಂದು ದೆಹಲಿಯಲ್ಲಿ ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು. “ನಾನು ಕೆಲವರ ಅಹಂಕಾರವನ್ನು ಮುರಿಯಬೇಕಾಗಿದೆ. ಈ ಮೂಲಕ ನಾನು ನನ್ನ ಗೌರವವನ್ನು ಮರಳಿ ಪಡೆಯಬೇಕಾಗಿದೆ ಎಂದು ನಿಶಾದ್‌ ಹೇಳಿದರು.

ಸಾಯುವ ಕೊನೆಯ ಹಂತದಲ್ಲಿಯೂ ನಿನ್ನ ಕೊನೆಯ ಆಸೆ ಏನು ಅಂತ ಕೇಳುತ್ತಾರೆ. ಆದರೆ ಬಿಜೆಪಿ ನನ್ನ ಒಂದು ಮಾತು ಕೇಳದೇ ನನಗೆ ಟಿಕೆಟ್‌ ನಿರಾಕರಿಸಿದೆ. ನನಗೆ ಟಿಕೆಟ್‌ ಇಲ್ಲ ಎಂಬ ವಿಷಯ ಪತ್ರಿಕೆಯಲ್ಲಿ ಓದಿದ ನಂತರವೇ ತಿಳಿಯಿತು ಎಂದು ನಿಶಾದ್‌ ಅಸಮಾಧಾನ ಹೊರಹಾಕಿದ್ದಾರೆ.

Advertisement

2014ರಿಂದ ಮುಜಾಫರ್‌ ಪುರ್‌ ಲೋಕಸಭಾ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಅಜಯ್‌ ನಿಶಾದ್‌ ಸತತವಾಗಿ ಗೆಲುವು ಸಾಧಿಸಿದ್ದರು. 2014ರಲ್ಲಿ ನಿಶಾದ್‌ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ ನ ಅಖಿಲೇಶ್‌ ಪ್ರಸಾದ್‌ ಸಿಂಗ್‌ ಅವರನ್ನು 2ಲಕ್ಷ ಮತಗಳಿಂದ ಪರಾಭವಗೊಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next