ಪಶ್ಚಿಮ ಬಂಗಾಳ : ಚುನಾವಣಾ ಆಯೋಗದಿಂದ ಉಪ ಚುನಾವಾಣೆಯ ದಿನಾಂಕ ಘೋಷಣೆಯಾದ ಬೆನ್ನಿಗೆ ಭಾರತೀಯ ಜನತಾ ಪಕ್ಷದ ಶಾಸಕ ಸೌಮೆನ್ ರಾಯ್, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ತೃಣ ಮೂಲ ಕಾಂಗ್ರೆಸ್ ನ ನಾಯಕ, ಪಾರ್ಥ ಚಟರ್ಜಿ, ಕಲಿಯಗಂಜ್ ಬಿಜೆಪಿ ಶಾಸಕ ರಾಯ್, ಈ ಹಿಂದೆಯೂ ತೃಣ ಮೂಲದ ಕಾಂಗ್ರೆಸ್ ನ ಸದಸ್ಯರಾಗಿದ್ದರು. ಮತ್ತೆ ಈಗ ತೃಣಮೂಲಕ್ಕೆ ಸೇರ್ಪಡೆಯಾಗುತ್ತಿದ್ದಾರ ಎಂದಿದ್ದಲ್ಲದೇ, “ಅವರು ಬಂಗಾಳದ ಸಂಸ್ಕೃತಿ ಮತ್ತು ಪರಂಪರೆಯನ್ನು ಹಾಗೆಯೇ ಉಳಿಸಿಕೊಳ್ಳಲು ಬಯಸುತ್ತಾರೆ ಎಂದು ಬಿಜೆಪಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ : ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ಸಂಖ್ಯೆ ಇಳಿಕೆ: ಬಿಜೆಪಿ ಶಾಸಕ ಸೌಮೆನ್ TMCಗೆ ಸೇರ್ಪಡೆ
ಶಾಸಕ ಸೌಮೆನ್ ರಾಯ್ ಟಿಎಂಸಿಗೆ ಸೇರಿರುವುದರಿಂದ, ರಾಜ್ಯ ವಿಧಾನ ಸಭೆಯಲ್ಲಿ ಬಿಜೆಪಿಯ ಸಂಖ್ಯೆ 71 ಕ್ಕೆ ಇಳಿದಿದೆ. ಇನ್ನು, ಕಳೆದ ನಾಲ್ಕು ವಾರಗಳಲ್ಲಿ, ನಾಲ್ಕು ಬಿಜೆಪಿ ಶಾಸಕರು ಟಿಎಂಸಿಗೆ ಸೇರ್ಪಡೆಗೊಂಡಿದ್ದಾರೆ.
ಇನ್ನು, ಚುನಾವಣಾ ಆಯೋಗವು (ಇಸಿ) ಶನಿವಾರ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಖಾಲಿ ಇರುವ ಮೂರು ಸ್ಥಾನಗಳಾದ ಸಮ್ಸರ್ ಗಂಜ್, ಜಂಗೀಪುರ ಮತ್ತು ಭವಾನಿಪುರಗಳಿಗೆ ಉಪಚುನಾವಣೆ ಸೆಪ್ಟೆಂಬರ್ 30 ರಂದು ನಡೆಸಲಾಗುವುದು ಎಂದು ಘೋಷಿಸಿದ್ದು, ಅಕ್ಟೋಬರ್ 3 ರಂದು ಮತ ಎಣಿಕೆ ನಡೆಯಲಿದೆ ಎಂದು ಮಾಹಿತಿ ನೀಡಿತ್ತು.
ಇದನ್ನೂ ಓದಿ : ಮುಖ್ಯಮಂತ್ರಿ ಬದಲಾದರೂ ಅವರ ಧೋರಣೇ ಬದಲಾಗಿಲ್ಲ : ರಾಜೇಂದ್ರ ಕೇರಕರ್