ಬೇಡಿಕೆ ಇಡಲಾಗಿದೆ. ಈ ಕುರಿತು ಎಸ್ಪಿ, ಡಿಎಸ್‌ಪಿಗೆ ಶಾಸಕರು ದೂರು ನೀಡಿದ್ದು, ಪೊಲೀಸರು ತನಿಖೆ ಶುರು
ಮಾಡಿದ್ದಾರೆ. ಜೂ.6ರಂದು ಸಂಜೆ ಮುನವಳ್ಳಿ ನಿವಾಸಕ್ಕೆ ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ವಾಚ್‌ಮನ್
ಕೈಯಲ್ಲಿ ಪತ್ರವೊಂದನ್ನಿತ್ತು ತೆರಳಿದ್ದಾರೆ.
Advertisement
“2014-2018ರ ಚುನಾವಣೆವರೆಗೂ ನಮ್ಮ ಕರೆನ್ಸಿ ಬಳಸಿ ಸರ್ಪೋಟ್ ಮಾಡುತ್ತಾ ಸಹಕರಿಸಿದ್ದೀರಿ. ತುಂಬಾ ಥ್ಯಾಂಕ್ಸ್. ನೀವು 9-5-2018 ರಂದು 500 ರೂ. ಮುಖಬೆಲೆಯ ಒಂದು ಕೋಟಿ ರೂ. ಹಣ ತೆಗೆದುಕೊಂಡಿದ್ದೀರಿ. ಅದರಲ್ಲಿ ನಮಗೆ 50 ಲಕ್ಷ ನೀಡುತ್ತಿಲ್ಲ. ಫೋನ್ ಮಾಡಿದರೂ ರಿಸೀವ್ ಮಾಡದೇ ವಂಚಿಸುತ್ತಿದ್ದೀರಿ. ನಿಮಗೆ ಇನ್ನೂ 3-4 ದಿನದಲ್ಲಿ 10 ಲಕ್ಷ ರೂ. ಕರೆನ್ಸಿ ವಿಆರ್‌ಎಲ್ ಮೂಲಕ ಕಳಿಸುತ್ತೇವೆ. ಆ ಮೇಲೆ ನಮ್ಮ ಹುಡುಗರು ಬರ್ತಾರೆ. ಆಮೇಲೆ ನಿಮ್ಮಿಷ್ಟ’ ಎಂದು ಪತ್ರದಲ್ಲಿ ಬರೆಯಲಾಗಿದೆ. ಅಲ್ಲದೆ, ಜೂ.7ರಂದು ಮುನವಳ್ಳಿಗೆ ಕರೆ ಮಾಡಿ ನಮಗೆ
50 ಲಕ್ಷ ಹಣ ಕೊಡುವುದು ಬಾಕಿಯಿದೆ. ಕೊಡಬೇಕು ಎಂದು ಬೆದರಿಕೆ ಹಾಕಿದ್ದಾರೆ.