Advertisement

ಚಿಕ್ಕಮಗಳೂರಿನಲ್ಲಿ ‘ಸರ್ವಧರ್ಮ ಸಮನ್ವಯತೆ’ಯ ಪಾಠ ಮಾಡಿದ ಸಿ.ಟಿ ರವಿ

02:42 PM Dec 27, 2021 | Team Udayavani |

ಚಿಕ್ಕಮಗಳೂರು: ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಚಿಕ್ಕಮಗಳೂರಿನಲ್ಲಿ ಇಂದು ಸರ್ವಧರ್ಮ ಸಮನ್ವಯತೆಯ ಪಾಠ ಮಾಡಿದ್ದಾರೆ.

Advertisement

“ಅಲ್ಲಾ, ಈಶ್ವರ, ಜೀಸಸ್ ದೇವರೆಂದು ಒಪ್ಪಿಕೊಂಡರೆ ಜಗತ್ತಿನಲ್ಲಿ ಸಂಘರ್ಷ ಇರುವುದಿಲ್ಲ. ಒಬ್ಬ ಹಿಂದೂವಾಗಿ ಜೀಸಸ್, ಅಲ್ಲಾನನ್ನು ದೇವರು ಎಂದು ಒಪ್ಪಿಕೊಳ್ಳಬಹುದು. ಹಿಂದೂವಾಗಿ ಚರ್ಚ್, ಮಸೀದಿಗೂ ಕೂಡ ಹೋಗಬಹುದು” ಎಂದಿದ್ದಾರೆ.

“ನಮ್ಮಲ್ಲಿ ದೇವನೊಬ್ಬ ನಾಮ ಹಲವು ಎಂಬ ತತ್ವವಿದೆ. ಆದರೆ ಇಸ್ಲಾಂ ಆದ ತಕ್ಷಣ ಮಸೀದಿ ಹೊರತುಪಡಿಸಿ ದೇವಸ್ಥಾನದ ಬಾಗಿಲು ಬಂದ್ ಆಗುತ್ತದೆ. ಇಸ್ಲಾಂ, ಕ್ರಿಶ್ಚಿಯನ್ ಧರ್ಮಗಳಲ್ಲಿ ಉಳಿದ ದೇವರುಗಳ ಅಸ್ತಿತ್ವದ ಬಗ್ಗೆ ನಿರಾಕರಣೆಯಿದೆ. ಈ ವಿಚಾರದಲ್ಲಿ ಎರಡು ಧರ್ಮಗಳು ಆಲೋಚನೆ ಮಾಡಿದರೆ ಉತ್ತಮ” ಎಂದು ಸಿ.ಟಿ.ರವಿ ಹೇಳಿದರು.

ಇದನ್ನೂ ಓದಿ:ಕೃಷ್ಣ ಮಠದಲ್ಲಿ ನೀಡಿದ ಹೇಳಿಕೆಗಳನ್ನು ಹಿಂಪಡೆಯುತ್ತೇನೆ : ತೇಜಸ್ವಿ ಸೂರ್ಯ

ಜಗತ್ತಿನಲ್ಲಿ ಶಾಂತಿ ನೆಲೆಸಲು ಇರುವ ಅಡೆತಡೆಗಳನ್ನು ನಿವಾರಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಎಲ್ಲರೂ ಆಲೋಚನೆ ಮಾಡಿದರೆ ಜಗತ್ತು ಸುಖವಾಗಿರುತ್ತದೆ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ನಾಯಕ ಸಿ.ಟಿ ರವಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next