Advertisement

Vande Bharath New Train: ಕರ್ನಾಟಕದ 9ನೇ ವಂದೇ ಭಾರತ್‌ಗೆ ಸೆ.16ರಂದು ಪ್ರಧಾನಿ ಚಾಲನೆ

06:25 PM Sep 15, 2024 | Team Udayavani |

ಹೊಸದಿಲ್ಲಿ: ಪುಣೆ-ಹುಬ್ಬಳಿ ವಂದೇ ಭಾರತ್‌ ಸೇರಿ 5 ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ (ಸೆ.16) ಚಾಲನೆ ನೀಡಲಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ ಸಂಚರಿಸಲಿರುವ ವಂದೇ ಭಾರತ್‌ ರೈಲುಗಳ ಸಂಖ್ಯೆ 9ಕ್ಕೆ ಏರಿಕೆಯಾಗಲಿದೆ.

Advertisement

ಇದೇ ವೇಳೆ ಪ್ರಧಾನಿ ಮೋದಿಯವರು ರವಿವಾರದಿಂದ ಮಂಗಳವಾರದವರೆಗೆ ಗುಜರಾತ್‌, ಝಾರ್ಖಂಡ್‌, ಒಡಿಶಾಗಳಿಗೆ ಭೇಟಿ ನೀಡಿ 12,560 ಕೋಟಿ ರೂ. ಮೌಲ್ಯದ ವಿವಿಧ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಸೆ.15ರಂದು ಮೋದಿ ಝಾರ್ಖಂಡ್‌ಗೆ ಭೇಟಿ ನೀಡಿದ್ದಾರೆ. ಅಲ್ಲಿ ಅವರು 5 ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳಿಗೆ ಹಸುರು ನಿಶಾನೆ ತೋರಿಸಲಿದ್ದಾರೆ. ಬಳಿಕ ಅವರು ಗುಜರಾತ್‌ಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಪ್ರಧಾನಿ ಮೋದಿ ಅವರು ವಂದೇ ಭಾರತ್‌ ಮೆಟ್ರೋಗೆ ಚಾಲನೆ ನೀಡಲಿದ್ದಾರೆ. ಸೆ.16ರಂದು ಗಾಂಧಿನಗರದಲ್ಲಿ ನಂತರ ನವೀಕರಿಸಬ­ಹು­ದಾದ ಇಂಧನ ಹೂಡಿಕೆದಾರರ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ.

ವಂದೇಭಾರತ್‌ಗೆ ಕಲ್ಲು: ಐವರ ಬಂಧನ
ಪ್ರಧಾನಿ ರವಿವಾರ ಚಾಲನೆ ನೀಡಬೇಕಿದ್ದ ದುರ್ಗ-ವಿಶಾಖಪಟ್ಟಣಂ ವಂದೇ ಭಾರತ್‌ ರೈಲಿಗೆ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ರೈಲಿನ ಪ್ರಯೋಗಿಕ ಸಂಚಾರದ ವೇಳೆ ಘಟನೆ ನಡೆದಿದ್ದು, ಈ ಸಂಬಂಧಿಸಿದಂತೆ ಛತ್ತೀಸ್‌ಗಢದ ಮಹಸುಮುಂದ್‌ನಲ್ಲಿ 5 ಮಂದಿಯನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.