Advertisement

ಉದ್ಘಾಟನೆಗೆ ಶಾಸಕರೇ ಬರಬೇಕಂತೆ; ಕಾಫಿನಾಡಲ್ಲಿ ರಸ್ತೆಗೆ ಬೀಗ ಹಾಕಿದ ಬಿಜೆಪಿ ಸದಸ್ಯರು!

12:19 PM May 17, 2022 | Team Udayavani |

ಚಿಕ್ಕಮಗಳೂರು: 3.20 ಕೋಟಿ ರೂ ವೆಚ್ಚದಲ್ಲಿ ನಡೆದ ರಸ್ತೆ ಕಾಮಗಾರಿ ಮುಗಿದು 25 ದಿನವಾಗದರೂ ಜನರಿಗೆ ಉಪಯೋಗವಾಗುತ್ತಿಲ್ಲ. ಕಾರಣ ರಸ್ತೆ ಉದ್ಘಾಟನೆಯಾಗಿಲ್ಲ. ಶಾಸಕರು ಬಂದು ರಸ್ತೆ ಉದ್ಘಾಟನೆ ಮಾಡಬೇಕೆಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದ ಪರಿಣಾಮ ಜನರು ಪರದಾಡುವಂತಾಗಿದೆ.

Advertisement

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಮಾವಿನ ಹೊಲ, ಮಣ್ಣಿನ ಪಾಲ್ ಗ್ರಾಮದ ಬಳಿ ಇಂತಹ ಪ್ರಸಂಗ ನಡೆದಿದೆ. ಉದ್ಘಾಟನೆಗೆ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿಯೇ ಬರಬೇಕೆಂದು ರಸ್ತೆಗೆ ಬೀಗ ಹಾಕಿದ್ದಾರೆ.

ಇದನ್ನೂ ಓದಿ:ಕಾರಿಂಜೇಶ್ವರ ದೇವಸ್ಥಾನದ ಬಳಿ ಬೃಹತ್ ಬಂಡೆಕಲ್ಲು ಕುಸಿತ

ರಸ್ತೆಗೆ ಅಡ್ಡಲಾಗಿ ತಂತಿ ಬೇಲಿ ಹಾಕಿಸಿದ ಬಿಜೆಪಿ ಸದಸ್ಯರು ರಸ್ತೆ ಮೇಲೆ ಪೊಲೀಸ್ ಇಲಾಖೆ ಬ್ಯಾರಿಕೇಡ್ ಜೋಡಿಸಿ ಬೀಗ ಹಾಕಿದ್ದಾರೆ. ಜೆಸಿಬಿ ತರಿಸಿ ರಸ್ತೆ ಮೇಲೆ ಬೃಹತ್ ಕಲ್ಲು ಇರಿಸಲಾಗಿದೆ.

Advertisement

ನಕ್ಸಲ್ ಪೀಡಿತ ಪ್ರದೇಶಗಳಾದ ಮಾವಿನಹೊಲ, ಮಣ್ಣಿನಪಾಲ್ ಗ್ರಾಮದಲ್ಲಿ ರಸ್ತೆಗೆ ಬೀಗ ಹಾಕಿಸಿದ್ದರಿಂದ ಓಡಾಡಲು ಜನಸಾಮಾನ್ಯರ ಪರದಾಟ ಪಡುವಂತಾಗಿದೆ. ಶಾಸಕರು ಬೇಗನೇ ರಸ್ತೆ ಉದ್ಘಾಟನೆ ಮಾಡಬೇಕು ಅಥವಾ ಅಡ್ಡವಿರಿಸಿದ ವಸ್ತುಗಳನ್ನು ತೆರವು ಮಾಡಿ ಸಂಚಾರಕ್ಕೆ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next