Advertisement
ಈ ಕಾರ್ಯಕಾರಿಣಿ ಸಭೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಸಚಿವರು, ಬಿಜೆಪಿ ಪ್ರಮುಖರು ಈಗಾ ಗಲೇ ಜಿಲ್ಲೆಗೆ ಆಗಮಿಸಿದ್ದಾರೆ. ರಾಜ್ಯದ ವಿವಿಧೆಡೆಗಳಿಂದಲೂ ಬಿಜೆಪಿಯ ಪ್ರಮುಖರು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಸಭೆ ನಡೆಯುವ ಟಿ.ವಿ. ರಮಣ್ ಪೈ ಸಭಾಂಗಣದ ಮುಖ್ಯದ್ವಾರ ಮತ್ತು ವೇದಿಕೆಗೆ ಹೂವಿನ ಶೃಂಗಾರ ಮಾಡ ಲಾಗಿದೆ. ನವ ಭಾರತ ವೃತ್ತ, ಎಂಜಿ ರಸ್ತೆ, ಬಂಟ್ಸ್ ಹಾಸ್ಟೆಲ್ ಸಹಿತ ಪ್ರಮುಖ ರಸ್ತೆಗಳನ್ನು ಪಕ್ಷದ ಧ್ವಜ, ಕಟೌಟ್‌ಗಳಿಂದ ಅಲಂಕರಿಸಲಾಗಿದೆ. ಸಭೆ ನಡೆಯುವ ಸಭಾಂಗಣ ಸಮೀಪದಲ್ಲಿರುವ ನವ ಭಾರತ ವೃತ್ತಕ್ಕೆ ಎಲ್‌ಇಡಿ ಪರದೆಯನ್ನು ಅಳವಡಿಸಲಾಗಿದೆ.
20 ವರ್ಷಗಳ ಬಳಿಕ ನಡೆಯುವ ಕಾರ್ಯಕಾರಿಣಿಯನ್ನು ಆಕರ್ಷಣೀಯ ಗೊಳಿಸುವ ನಿಟ್ಟಿನಲ್ಲಿ ನಗರದ 10 ಕಡೆಗಳಲ್ಲಿ ಕಟ್ಟಡಗಳಿಗೆ ಡೀಮ್ ಲೈಟ್‌ಗಳನ್ನು ಅಳವಡಿಸಲಾಗಿದ್ದು, ರಾತ್ರಿ ವೇಳೆ ಪ್ರಕಾಶ ಮಾನವಾಗಿ ಕಾಣಿಸುತ್ತಿವೆ. ಕೊಟ್ಟಾರ, ಲೇಡಿಹಿಲ್, ನಂತೂರು, ಕೆಪಿಟಿ, ಪಂಪ್‌ವೆಲ್, ಗೋರಿಗುಡ್ಡ, ಕದ್ರಿಕಂಬಳ, ಮೂಲ್ಕಿ ಸುಂದರರಾಮ್ ಶೆಟ್ಟಿ ರಸ್ತೆ, ಪಿವಿಎಸ್ ಸರ್ಕಲ್ ಮುಂತಾದೆಡೆಗಳಲ್ಲಿ ಕಟ್ಟಡಗಳಿಗೆ ಈ ಲೈಟಿಂಗ್ಸ್ ಅಳವಡಿಸಲಾಗಿದೆ. ಫೇಸ್ಬುಕ್‌ನಲ್ಲಿ ನೇರಪ್ರಸಾರ
ಕಾರ್ಯಕಾರಿಣಿ ಸಭೆಯ ಉದ್ಘಾಟನೆ ಯನ್ನು ಬಿಜೆಪಿ ಕರ್ನಾಟಕ, ದ.ಕ. ಜಿಲ್ಲಾ ಬಿಜೆಪಿಯ ಮತ್ತು ನಳಿನ್ ಕುಮಾರ್ ಕಟೀಲು ಅವರ ಫೇಸುºಕ್ ಪೇಜ್‌ನಲ್ಲಿ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಈ ಪೇಜ್‌ಗಳಿಗೆ ಭೇಟಿ ನೀಡಿ ವೀಕ್ಷಿಸಬಹುದು. ಬಿಜೆಪಿಯ ಇತರ ಸುಮಾರು 20 ಫೇಸುºಕ್ ಪೇಜ್‌ಗಳಲ್ಲಿ, 200ಕ್ಕೂ ಹೆಚ್ಚು ವಾಟ್ಸಾಪ್ ಗ್ರೂಪ್‌ಗ್ಳಲ್ಲಿ ಉದ್ಘಾಟನೆ ಸಮಾರಂಭದ ವೀಡಿಯೋ, ಚಿತ್ರಗಳು ಶೇರ್ ಆಗಲಿವೆ.
Related Articles
ಕೇಂದ್ರ, ರಾಜ್ಯದ ನಾಯಕರು ಸಭೆ ಯಲ್ಲಿ ಪಾಲ್ಗೊಳ್ಳುವುದರಿಂದ ಸಭಾಂ ಗಣದ ಸುತ್ತಮುತ್ತ ಹಾಗೂ ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿ ಸಲಾಗಿದೆ.
Advertisement
ಸಿಎಂಗೆ ಕಟೀಲು ದುರ್ಗಾಂಬೆ ಪ್ರತಿಕೃತಿಪೇಜಾವರ ಶ್ರೀಗಳು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾಗ ಶ್ರೀಕೃಷ್ಣನ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದ್ದರು. ಅದೇ ರೀತಿಯಲ್ಲಿ ಈ ಬಾರಿ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ದ.ಕ. ಬಿಜೆಪಿ ವತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡುತ್ತಿರುವುದು ವಿಶೇಷ.