Advertisement

ಇನ್ನೊಂದು ವಾರದಲ್ಲಿ ಮಂಡ್ಯದಲ್ಲಿ ಬಿಜೆಪಿ ಮ್ಯಾಜಿಕ್!: ಗೋ ಮಧುಸೂಧನ್

02:49 PM May 20, 2022 | Team Udayavani |

ಮೈಸೂರು : ಇನ್ನೊಂದು ವಾರದಲ್ಲಿ ಮಂಡ್ಯದಲ್ಲಿ ಭಾರಿ ರಾಜಕೀಯ ಬೆಳವಣಿಗೆಯಾಗಲಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಗೋ.ಮಧುಸೂಧನ್ ಹೇಳಿಕೆ ನೀಡಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಧುಸೂಧನ್ ಅಚ್ಚರಿ ಹೇಳಿಕೆ ನೀಡಿದ್ದು, ದಕ್ಷಿಣ ಪಧವಿಧರರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಗೆ ಉತ್ತಮ ವಾತಾವರಣ ಇದೆ. ಹಾಸನ, ಮಂಡ್ಯದಲ್ಲೂ ಬಿಜೆಪಿ ಪರ ಒಲವಿದೆ. ಮಂಡ್ಯದಲ್ಲಿ ಈ ಬಾರಿ ಬಿಜೆಪಿಗೆ ಉತ್ತಮವಾಗಿಯೇ ವಾತಾವರಣವಿದೆ.
ಮುಂದಿನ ಒಂದು ವಾರದೊಳಗೆ ಮಂಡ್ಯದಲ್ಲಿ ಬಾರಿ ಬೆಳವಣಿಗೆ ಆಗಲಿದೆ ಕಾದು ನೋಡಿರಿ ಎಂದರು.

ಇದನ್ನೂ ಓದಿ : ಜೆಡಿಎಸ್ ತೊರೆದು ಬಿಜೆಪಿ ಸೇರುವ ಅನಿರ್ವಾಯತೆ ನನಗಿರಲಿಲ್ಲ: ಹೊರಟ್ಟಿ

ಈ ಬಾರಿ ಚುನಾವಣಾ ಟಿಕೆಟ್ ರೇಸ್ ನಲ್ಲಿದ್ದವನು.ಆದರೆ ರವಿಶಂಕರ್ ಅವರಿಗೆ ಟಿಕೆಟ್ ಘೋಷಣೆ ಆದ ಬಳಿಕ ನಾನೇ ಅವರಿಗೆ ಶುಭಕೋರಿದ್ದೇನೆ. ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ, ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next