Advertisement

ಬಿಜೆಪಿ ನಾಯಕರ ಭರ್ಜರಿ ಮತಬೇಟ

02:38 PM Apr 09, 2019 | pallavi |
ಗದಗ: ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರವಾಗಿ ನಗರದ ವಿವಿಧೆಡೆ ಬಿಜೆಪಿ ನಾಯಕರು ಭರ್ಜರಿ ಮತಬೇಟೆ ನಡೆಸಿದರು.
ನಗರಸಭೆ ವಾರ್ಡ್‌ ನಂ. 19 ಹಾಗೂ 25ರ ವ್ಯಾಪ್ತಿ ವೀರನಾರಾಯಣ ದೇವಸ್ಥಾನದಿಂದ ಆರಂಭಿಸಿ ಖಾನತೋಟ ಸೇರಿದಂತೆ ಸುತ್ತಲಿನ ಬಡಾವಣೆಗಳಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಮಾಳಶೆಟ್ಟಿ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಿದರು.
ಈ ವೇಳೆ ಮಾತನಾಡಿದ ಮೋಹನ ಮಾಳಶೆಟ್ಟಿ, ಕಳೆದ 60 ವರ್ಷಗಳಲ್ಲಿ ಆಗದ ಅಭಿವೃದ್ಧಿ ಮೋದಿ ಸರಕಾರದಲ್ಲಿ ಸಾಕಾರಗೊಂಡಿದೆ. ಆಧಾರ್‌ ಸೀಡಿಂಗ್‌, ನೋಟ್‌ ಬ್ಯಾನ್‌, ಜಿಎಸ್‌ಟಿ ಕಾಯ್ದೆಗಳಿಂದ ತೆರಿಗೆ ವಂಚನೆ ಮತ್ತು ಸೋರಿಕೆ ಶೇ. 100ರಷ್ಟು ನಿವಾರಣೆಯಾಗಿದೆ. ದೇಶದ ಆದಾಯ ದುಪ್ಪಟ್ಟಾಗಿದ್ದು, ರಾಷ್ಟ್ರೀಯ ಹೆದ್ದಾರಿಗಳು, ರೈಲ್ವೆ ಯೋಜನೆಗಳು ಸೇರಿದಂತೆ ಬಡವರ ಅನುಕೂಲಕ್ಕಾಗಿ ಹತ್ತು ಹಲವು ಯೋಜನೆಗಳು ಜಾರಿಗೊಳಿಸಲಾಗಿದೆ.
ವಿದೇಶಾಂಗ ನೀತಿಯಲ್ಲೂ ಭಾರತ ಇಟ್ಟಿರುವ ಹೆಜ್ಜೆಗಳು ಜಗತ್ತಿನ ಗಮನ ಸೆಳೆದಿದ್ದು, ಪ್ರಬಲ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಘೋಷಿಸಿದ್ದ ಸಬ್‌ ಕಾ ಸಾತ್‌ ಸಬ್‌ ಕಾ ವಿಕಾಸ್‌ ಅಕ್ಷರಶಃ ಅನುಷ್ಠಾನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರನ್ನು ಮತ್ತೂಮ್ಮೆ ದೇಶದ ಪ್ರಧಾನಿಯನ್ನಾಗಿಸುವ ಮೂಲಕ ದೇಶದ ಅಭಿವೃದ್ಧಿಯ ಕನಸು ಸಾಕಾರಗೊಳಿಸಬೇಕು ಎಂದು ಮತದಾರರಿಗೆ ಮನವಿ ಮಾಡಿದರು.
ಇದೇ ವೇಳೆ ಕೆ.ಸಿ. ರಾಣಿ ರೋಡ್‌, ಟ್ಯಾಗೂರ ರೋಡ್‌ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ ನಗರಸಭೆ ಮಾಜಿ ಸದಸ್ಯೆ ಜಯಶ್ರೀ ಭೈರವಾಡೆ, ಹಿಂದಿನ ಯುಪಿಎ ಸಕಾರದ ವೈಫಲ್ಯಗಳನ್ನು ಟೀಕಿಸಿ, ಮೋದಿ ಸರಕಾರದ ಕಾರ್ಯಕ್ರಮಗಳನ್ನು ಗುಣಗಾನ ಮಾಡಿದರು. ಈ ಬಾರಿ ಮತ್ತೆ ಮೋದಿ ಸರಕಾರದ ರಚನೆಗಾಗಿ ಹಾವೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಕೋರಿದರು.
ನಗರಸಭೆ ಮಾಜಿ ಸದಸ್ಯರಾದ ವಿನಾಯಕ ಮಾನ್ವಿ, ಅನಿಲ್‌ ಅಬ್ಬಿಗೇರಿ, ಬಿಜೆಪಿ ಶಹರ ಅಧ್ಯಕ್ಷ ಜಗನ್ನಾಥಸಾ ಭಾಂಡಗೆ, ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಅಶ್ವಿ‌ನಿ ಜಗತಾಪ ಸೇರಿದಂತೆ ಬಡಾವಣೆ ಪ್ರಮುಖರು ಇದ್ದರು.
Advertisement

Udayavani is now on Telegram. Click here to join our channel and stay updated with the latest news.

Next