Advertisement

ಬಿಜೆಪಿ ನಾಯಕರಿಗೆ ಅಹಂ ಹೆಚ್ಚಿದೆ: ಶೆಟ್ಟರ

08:31 AM May 01, 2023 | Team Udayavani |

ಹುಬ್ಬಳ್ಳಿ: ಜನರ ಸಹಕಾರ ಇದ್ದರೆ ಅಭಿವೃದ್ಧಿ, ಸಾಧನೆ ಮಾಡಲು ಸಾಧ್ಯ. ನಾನು-ನನ್ನಿಂದಲೇ ಎಲ್ಲ ಎಂಬ ಅಹಂಭಾವದಿಂದ ಯಾವ ಘನ ಕಾರ್ಯ ಸಾಧಿಸಲು ಸಾಧ್ಯವಿಲ್ಲ. ಆದರೆ, ಇತ್ತೀಚೆಗೆ ಬಿಜೆಪಿ ಕೆಲ ನಾಯಕರಲ್ಲಿ ಅಹಂಭಾವ ಮಿತಿ ಮೀರಿದೆ ಎಂದು ಮಾಜಿ ಮುಖ್ಯಮಂತ್ರಿ, ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಗದೀಶ ಶೆಟ್ಟರ ಹೇಳಿದರು.

Advertisement

ತೋಳನಕೆರೆಯಲ್ಲಿ ರವಿವಾರ ವಾಯುವಿಹಾರಿಗಳನ್ನು ಭೇಟಿ ಮಾಡಿ ಮತಯಾಚನೆ ಮಾಡಿ ಮಾತನಾಡಿದ ಅವರು, ಹಾಳು ಬಿದ್ದಿದ್ದ ತೋಳನಕೆರೆಯನ್ನು ಸುಂದರ ವಿಹಾರಧಾಮ ಮಾಡಲು ನಿಮ್ಮೆಲ್ಲರ ಸಹಕಾರದಿಂದ ಸಾಧ್ಯವಾಯಿತು. ಅದನ್ನು ನಾನೆಂದು ಮರೆಯುವುದಿಲ್ಲ. ಯಾವುದೇ ಅಭಿವೃದ್ಧಿ ಕಾರ್ಯಗಳಿರಲಿ, ಸಾಧನೆಯೇ ಇರಲಿ ಜನರ ಸಹಕಾರ ಇಲ್ಲವಾದರೆ ಏನನ್ನು ಮಾಡಲು ಸಾಧ್ಯವಿಲ್ಲ. ಆದರೆ, ಬಿಜೆಪಿಯ ಕೆಲ ನಾಯಕರಿಗೆ ಎಲ್ಲವೂ ನನ್ನಿಂದಲೇ ಎಂಬ ಭಾವ ಮೂಡಿಬಿಟ್ಟಿದೆ. ಜನರನ್ನು ಬಿಟ್ಟರೆ ತಾವೇನು ಎಂಬುದನ್ನು ಅವರೊಮ್ಮೆ ಯೋಚಿಸಿಬೇಕಿದೆ ಎಂದರು.

ವಿಧಾನ ಪರಿಷತ್ತು ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಮುಖಂಡರಾದ ಮೋಹನ ಹಿರೇಮನಿ, ಮಹೇಶ ಬುರ್ಲಿ, ಸದಾನಂದ ಡಂಗನವರ, ಗಂಗಾಧರ ದೊಡವಾಡ, ಅರುಣ ಕಡಕೋಳ, ಬಿ.ಎಸ್‌. ಗ್ಯಾಬ್ರಿಯಲ್‌, ರಮೇಶ ಯಾದವಾಡ, ಮುತ್ತು ಪಾಟೀಲ, ಮೋಹನ ಹೊಸಮನಿ, ಸತೀಶ ಮಾಡಳ್ಳಿ, ಸಿ.ಎಸ್‌. ಪಾಟೀಲ, ನಾಗನಗೌಡ ಪಾಟೀಲ, ಉದಯ ಇಟಗಿ, ಶಿವಶಂಕರಪ್ಪ ಹೊಂಗಲ, ರಾಜು ವಿಕಂಶಿ, ಸುನಿಲ ಕುಮಾರ ಇನ್ನಿತರರಿದ್ದರು.

ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಾಗಿದ್ದು, ಇನ್ನೊಂದು ಬಾರಿಗೆ ನನಗೆ ಅವಕಾಶ ನೀಡುವ ಮೂಲಕ ಆಶೀರ್ವದಿಸಬೇಕು.  –ಜಗದೀಶ ಶೆಟ್ಟರ ಹು-ಧಾ ಕೇಂದ್ರ ಕಾಂಗ್ರೆಸ್‌ ಅಭ್ಯರ್ಥಿ

ಮನೆ ಮನೆ ಪ್ರಚಾರ ಆರಂಭ

Advertisement

ಹುಬ್ಬಳ್ಳಿ: ಮನೆ ಮನೆ ಪ್ರಚಾರವನ್ನು ಮಾಜಿ ಮುಖ್ಯಮಂತ್ರಿ, ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಗದೀಶ ಶೆಟ್ಟರ ಅವರು ರವಿವಾರ ಕೇಶ್ವಾಪುರದ ಹನುಮಾನ ದೇವಸ್ಥಾನದಿಂದ ಆರಂಭಿಸಿದರು.

ಮನೆ ಮನೆಗೆ ತೆರಳಿ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಿ ತಮ್ಮನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರಲ್ಲದೆ, ಪಕ್ಷದ ಎಲ್ಲ ಕಾರ್ಯಕರ್ತರು, ಮುಖಂಡರು ಹೆಚ್ಚು ಹೆಚ್ಚು ಶ್ರಮ ವಹಿಸಬೇಕು ಎಂದರು.

ಮುಖಂಡರಾದ ಪ್ರಫುಲ್ಲಚಂದ ರಾಯನಗೌಡ, ಅನೀಲಕುಮಾರ ಪಾಟೀಲ, ಪ್ರಕಾಶ ಕುರಟ್ಟಿ, ಶಿವಾಜಿ ಖಂಡೇಕಾರ, ನಾಗೇಶ ಕಲಬುರ್ಗಿ, ಹೂವಪ್ಪ ದಾಯಗೋಡಿ ಇನ್ನಿತರರು ಇದ್ದರು.

ಲಯನ್ಸ್‌ ಕ್ಲಬ್‌ಗ ಭೇಟಿ: ಶೆಟ್ಟರ ಅವರು ಲಯನ್ಸ್‌ ಕ್ಲಬ್‌ಗ ಭೇಟಿ ನೀಡಿ ಮತಯಾಚನೆ ಮಾಡಿದರು. ಲಯನ್ಸ್‌ ಕ್ಲಬ್‌ಗ 13 ಗುಂಟೆ ಜಮೀನನ್ನು ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಂಜೂರು ಮಾಡಿಸುವಲ್ಲಿ ಶ್ರಮಿಸಿದ್ದ ವಿಚಾರ ತಮ್ಮೆಲ್ಲರಿಗೂ ತಿಳಿದ ವಿಚಾರ. ಈ ಬಾರಿ ನನಗೆ ಮತ ನೀಡುವ ಮೂಲಕ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ಕಿಶೋರ ಮಗಜಿಕೊಂಡಿ, ನಾಗೇಶ ಕಲಬುರ್ಗಿ, ಎನ್‌.ಎಸ್‌.ಆರ್‌.ಪ್ರಸಾದ, ಶ್ರೀಧರ ಪೂಜಾರ, ನಾರಾಯಣ ನಿರಂಜನ, ಅರವಿಂದ ಚೌವಾಣ, ವಿ.ಜಿ. ಗೋಖಲೆ, ರಾಜೇಂದ್ರ ಹರದಿ, ಮಹೇಂದ್ರ ಸಿಂಗ್‌, ಶಂಕರ ಕೋಳಿವಾಡ, ಅಭಿಷೇಕ ಕುಲಕರ್ಣಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next