Advertisement
ವಿಧಾನಸಭೆ ಚುನಾವಣಾ ಸಿದಟಛಿತೆಗೆ ಡಿ. 31ರಂದು ಅಮಿತ್ ಶಾ ಬೆಂಗಳೂರಿಗೆ ಆಗಮಿಸಲಿದ್ದು, ಈ ವೇಳೆ ಪಕ್ಷದಕೋರ್ ಕಮಿಟಿ ಸದಸ್ಯರೊಂದಿಗೆ ಸಭೆ ನಡೆಸಲಿದ್ದಾರೆ. ಅಲ್ಲದೆ, ಪಕ್ಷದ ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರು ಹಾಗೂ ಪದಾಧಿಕಾರಿಗಳೊಂದಿಗೂ ಸಮಾಲೋಚನೆ ನಡೆಸಲಿದ್ದಾರೆ. ಈ ವೇಳೆ ಕಳೆದ ಆಗಸ್ಟ್‌ನಲ್ಲಿ ಬೆಂಗಳೂರಿಗೆ ಮೂರು ದಿನಗಳ ಭೇಟಿಗೆ ಬಂದಿದ್ದಾಗ ಮುಖಂಡರಿಗೆ ವಹಿಸಿದ್ದ ಕಾರ್ಯಭಾರಗಳ ಪ್ರಗತಿ ಬಗ್ಗೆ ಅಮಿತ್ ಶಾ ಪರಿಶೀಲನೆ ನಡೆಸಲಿದ್ದು, ಅದಕ್ಕಾಗಿ ತಮಗೆ ವಹಿಸಿದ್ದ ಜವಾಬ್ದಾರಿಗಳೇನು? ಅದರಲ್ಲಿ ಎಷ್ಟರ ಮಟ್ಟಿಗೆ
ಯಶಸ್ವಿಯಾಗಿದ್ದೇವೆಂಬ ಬಗ್ಗೆ ಮಾಹಿತಿ ನೀಡಲು ವರದಿ ಸಿದಟಛಿಪಡಿಸಲಾಗುತ್ತಿದೆ.
ಪಕ್ಷ ಸಂಘಟನೆ ಜವಾಬ್ದಾರಿ ವಹಿಸಿದ್ದರು.
Related Articles
Advertisement
ಆದರೆ, ಶಾ ಅವರ ಸೂಚನೆಗಳನ್ನು ಇನ್ನೂ ಪೂರ್ಣ ಪ್ರಮಾಣದಲ್ಲಿ ಪಾಲಿಸಲು ಸಾಧ್ಯವಾಗಿಲ್ಲ. ಅದರಲ್ಲೂ ಹಾಲಿ ಶಾಸಕರು ಮತ್ತು ಸಂಸದರಲ್ಲಿ ಬಹುತೇಕ ಮಂದಿ ಇತರೆ ಕಾರ್ಯದೊತ್ತಡಗಳ ಮಧ್ಯೆ ಇದನ್ನು ಸರಿಯಾಗಿ ನಿಭಾಯಿಸಿಲ್ಲ. ಅಲ್ಲದೆ,ರಾಜ್ಯಾದ್ಯಂತ ಇರುವ ಸುಮಾರು 57 ಸಾವಿರ ಬೂತ್‌ಗಳಲ್ಲಿ ಇನ್ನೂ ನಾಲ್ಕೈದು ಸಾವಿರ ಬೂತ್ ಕಮಿಟಿಗಳ ರಚನೆ ಬಾಕಿಯಿದೆ. ಹೀಗಾಗಿ ರಾಜ್ಯಕ್ಕೆ ಆಗಮಿಸುವ ಅಮಿತ್ ಶಾ ಅವರ ಕೆಂಗಣ್ಣಿಗೆ ಗುರಿಯಾಗುವ ಆತಂಕ ಮುಖಂಡರಲ್ಲಿ ಕಾಡುತ್ತಿದೆ.