Advertisement

ರಾಹುಲ್‌ ಗಾಂಧಿ ಖಿಲ್ಜಿ ಸಂತಾನ ಎಂದ ಬಿಜೆಪಿ ನಾಯಕ: ಎಫ್ಐಆರ್‌

03:38 PM Dec 09, 2017 | udayavani editorial |

ಮುಂಬಯಿ : ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು 13ನೇ ಶತಮಾನದ ಲೂಟಿಕೋರ ಅಲಾ ಉದ್‌ ದೀನ್‌ ಖಿಲ್ಜಿಗೆ ಹೋಲಿಸಿದ ಬಿಜೆಪಿ ನಾಯಕ ಜಿವಿಎಲ್‌ ನರಸಿಂಹ ರಾವ್‌ ಅವರಿಗೀಗ ಕಾನೂನು ಸಂಕಷ್ಟ ಎದುರಾಗಿದೆ. 

Advertisement

ರಾಹುಲ್‌ ಅವರನ್ನು ಖಿಲ್ಜಿ ಯೊಂದಿಗೆ ಹೋಲಿಸಿದ ನರಸಿಂಹ ರಾವ್‌  ವಿರುದ್ಧ  ಮುಂಬಯಿ ಕಾಂಗ್ರೆಸ್‌ ಅಧ್ಯಕ್ಷ ಸಂಜಯ್‌ ನಿರುಪಮ್‌ ನಿನ್ನೆ ಶುಕ್ರವಾರ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. 

ಬಿಜೆಪಿ ನಾಯಕ ನರಸಿಂಹ ರಾವ್‌ ಅವರು ರಾಹುಲ್‌ ಗಾಂಧಿ ಅವರನ್ನು ತಮ್ಮ ಟ್ವಿಟರ್‌ನಲ್ಲಿ “ಖಿಲ್ಜಿ ಯ ಸಂತಾನ’ದವರೆಂದು ಜರೆದಿದ್ದಾರೆ ಎಂಬುದಾಗಿ ನಿರುಪಮ್‌ ತಮ್ಮ ಪೊಲೀಸ್‌ ದೂರಿನಲ್ಲಿ ಹೇಳಿದ್ದಾರೆ. ರಾವ್‌ ಅವರ ಟ್ವಿಟರ್‌ ಖಾತೆಯನ್ನು ಪರಾಮರ್ಶಿಸಲಾಗಿದೆ.

ಬಿಜೆಪಿ ನಾಯಕನ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ; ಮೇಲಾಗಿ ಅವರು ತಮ್ಮ ಹೇಳಿಕೆ ಸಾರ್ವಜನಿಕರಿಗೆಲ್ಲ ಸಿಗುವಂತೆ ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ್ದಾರೆ. ಇದು ಮಾನಹಾನಿಕರ ಮಾತ್ರವಲ್ಲದೆ ಕ್ರಿಮಿನಲ್‌ ಸ್ವರೂಪದ್ದೂ ಆಗಿದೆ ಎಂದು ನಿರುಪಮ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next