ಉತ್ತರ ಪ್ರದೇಶ: ಜೌನ್‌ಪುರದ ಬೋಧಾಪುರ ಗ್ರಾಮದಲ್ಲಿ ಗುರುವಾರ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಭಾರತೀಯ ಜನತಾ ಪಕ್ಷದ ನಾಯಕ ಪ್ರಮೋದ್ ಯಾದವ್ ಅವರನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೌನ್‌ಪುರ ಜಿಲ್ಲೆಯ ಸಿಕರರಾ ಪೊಲೀಸ್ ಠಾಣೆ ವ್ಯಾಪ್ತಿಯ ಬೋಧ್‌ಪುರ ಗ್ರಾಮದ ತಿರುವಿನ ಬಳಿ ಈ ಘಟನೆ ನಡೆದಿದೆ.
ಪೊಲೀಸರ ಮಾಹಿತಿ ಪ್ರಕಾರ ಆಮಂತ್ರಣ ಕೊಡುವ ನೆಪದಲ್ಲಿ ಪ್ರಮೋದ್ ಯಾದವ್ ಅವರನ್ನು ತಡೆದ ದುಷ್ಕರ್ಮಿಗಳ ತಂಡ ಮೂರು ಬಾರಿ ಗುಂಡು ಹಾರಿಸಿದ್ದಾರೆ. ಬಳಿಕ ಬೈಕ್ ನಲ್ಲಿ ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡಿದ್ದ ಯಾದವ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿತಾದರೂ ಪರಿಶೀಲಿಸಿದ ವೈದ್ಯರು ಮೃತಪಟ್ಟಿರುವುದಾಗಿ ಹೇಳಿದ್ದಾರೆ.
ಪ್ರಮೋದ್ ಯಾದವ್ ಅವರು ಬಿಜೆಪಿ ಕಿಸಾನ್ ಮೋರ್ಚಾದ ಜೌನ್‌ಪುರ್ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದರು.
ಪ್ರಕರಣ ದಾಖಲಿಸಿಕೊಂಡ ಜೌನ್‌ಪುರ ಪೊಲೀಸರು ಆರೋಪಿಗಳ ಪತ್ತೆಗೆ ಹಲವು ತಂಡಗಳನ್ನು ರಚಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ ಅಲ್ಲದೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಜೌನ್‌ಪುರ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಜೈಪಾಲ್ ಶರ್ಮಾ ಹೇಳಿದ್ದಾರೆ.
ಪ್ರಮೋದ್ ಯಾದವ್ ಅವರು 2012 ರಲ್ಲಿ ರಾಜ್ಯದ ಮಲ್ಹಾನಿ ವಿಧಾನಸಭೆಯಿಂದ ಅಭ್ಯರ್ಥಿಯಾಗಿದ್ದರು.
ಇದನ್ನೂ ಓದಿ: ಸದ್ದಿಲ್ಲದೆ ʼಬಿಗ್‌ಬಾಸ್ʼ ಖ್ಯಾತಿಯ ಸೋಮಿ ಖಾನ್ ರನ್ನು ಮದುವೆಯಾದ ರಾಖಿ ಸಾವಂತ್ ಮಾಜಿ ಪತಿ