Advertisement

ಮಧ್ಯಪ್ರದೇಶ ರಾಜ್ಯಪಾಲ ಲಾಲ್‌ಜಿ ಟಂಡನ್‌ ನಿಧನ

02:22 AM Jul 22, 2020 | Hari Prasad |

ಲಕ್ನೋ: ಮಧ್ಯ ಪ್ರದೇಶ ರಾಜ್ಯಪಾಲ, ಬಿಜೆಪಿ ಹಿರಿಯ ನಾಯಕ ಲಾಲ್‌ಜಿ ಟಂಡನ್‌ (85) ನಿಧನ ಹೊಂದಿದರು.

Advertisement

ಉಸಿರಾಟ ಸಮಸ್ಯೆ ಸೇರಿದಂತೆ ವಿವಿಧ ಕಾಯಿಲೆ ಗಳಿಂದ ಬಳಲುತ್ತಿದ್ದ ಅವರು ಜೂನ್‌ 11ರಂದು ಲಕ್ನೋದ ಮೇದಾಂತ ಆಸ್ಪತ್ರೆಗೆ ದಾಖಲಾಗಿದ್ದರು.

ಚಿಕಿತ್ಸೆ ಫ‌ಲಕಾರಿಯಾಗದೆ ಮಂಗಳವಾರ ಬೆಳಗ್ಗೆ 5.35ಕ್ಕೆ ನಿಧನ ಹೊಂದಿದರು.

ಬಿಹಾರದಲ್ಲಿ 2018ರ ಆಗಸ್ಟ್‌ನಿಂದ 2019ರ ಜುಲೈವರೆಗೆ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿ ದ್ದರು. ಬಳಿಕ 2019ರಲ್ಲಿ ಮಧ್ಯಪ್ರದೇಶ ರಾಜ್ಯಪಾಲರಾದರು.

ಉತ್ತರ ಪ್ರದೇಶದಲ್ಲಿ 1999-2003ರ ಅವಧಿಯಲ್ಲಿ ವಿವಿಧ ಖಾತೆಗಳನ್ನು ನಿರ್ವಹಿಸಿದ್ದರು ಅವರ ಪುತ್ರ ಅಶುತೋಷ್‌ ಟಂಡನ್‌ ಪ್ರಸ್ತುತ ಉತ್ತರ ಪ್ರದೇಶದಲ್ಲಿ ಸಚಿವರಾಗಿದ್ದಾರೆ. ಲಾಲ್‌ಜಿ ಟಂಡನ್‌ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಕಾರಣ ಉತ್ತರಪ್ರದೇಶ ರಾಜ್ಯ ಪಾಲರಾಗಿರುವ ಆನಂದಿ ಬೆನ್‌ ಪಟೇಲ್‌ ಮಧ್ಯಪ್ರದೇಶ ಗವರ್ನರ್‌ ಆಗಿ ಹೆಚ್ಚುವರಿ ಹೊಣೆ ಹೊತ್ತಿದ್ದರು.


ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಮಾರ್ಗದರ್ಶನದಲ್ಲಿ ರಾಜಕೀಯ ಏಳಿಗೆ ಕಂಡಿದ್ದ ಟಂಡನ್‌ 2009ರಲ್ಲಿ ಲಕ್ನೋ ಲೋಕಸಭಾ ಕ್ಷೇತ್ರದಲ್ಲಿ ಸಂಸದರಾಗಿದ್ದರು. ಆರ್‌ಎಸ್‌ಎಸ್‌ ಜೊತೆ ನಿಕಟ ಸಂಪರ್ಕ ಹೊಂದಿದ್ದ ಅವರು ಮೃದು ಹಿಂದುತ್ವ ಧೋರಣೆ ಹೊಂದಿದ್ದರು. ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದರು. ಎಲ್ಲ ಪಕ್ಷಗಳ ನಾಯಕರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು.

Advertisement

ಬಿಎಸ್ಪಿ ನೇತಾರೆ ಮಾಯಾವತಿ ಅವರು ಪ್ರತೀವರ್ಷ ಟಂಡನ್‌ಗೆ ರಾಖೀ ಕಟ್ಟುತ್ತಿದ್ದರು. 1970ರಲ್ಲಿ ಕಾರ್ಪೊರೇಟರ್‌ ಆಗಿ ರಾಜಕೀಯ ಜೀವನ ಆರಂಭಿಸಿದ್ದರು. ಲಕ್ನೋದಲ್ಲಿ ಟಂಡನ್‌ ಅಂತ್ಯ ಕ್ರಿಯೆ ನೆರವೇರಿತು.

ಮೋದಿ ಸಂತಾಪ: ಟಂಡನ್‌ ನಿಧನಕ್ಕೆ ಟ್ವೀಟ್‌ ಮೂಲಕ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಸಮಾಜಮುಖಿ ಕಾರ್ಯಗಳ ಮೂಲಕ ಶ್ರೀ ಲಾಲ್‌ಜಿ ಟಂಡನ್‌ ನೆನಪಿನಲ್ಲಿ ಉಳಿಯುತ್ತಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಸಂಘಟಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ಅತ್ಯುತ್ತಮ ಆಡಳಿತಗಾರರಾಗಿದ್ದರು. ಅವರ ನಿಧನದಿಂದ ದುಃಖಿತನಾಗಿದ್ದೇನೆ ಎಂದು ತಿಳಿಸಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌, ಮಾಜಿ ಸಿಎಂ ಮಾಯಾವತಿ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮತ್ತಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next