Advertisement

ನಗರಸಭೆ ಅಧಿಕಾರ ಬಿಜೆಪಿಗೆ:

03:57 PM Oct 06, 2021 | Team Udayavani |

ದೊಡ್ಡಬಳ್ಳಾಪುರ: ನಗರಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಯಾವುದೇ ಪಕ್ಷಕ್ಕೆ ಬಂದಿಲ್ಲವಾದರೂ ಇತರೆ ಪಕ್ಷಗಳಿಗಿಂತ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗಳಿಸಿರುವುದು ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದೆ. ನಗರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ ಎಂದು ಕೇಂದ್ರ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಂ. ಹನುಮಂತರಾಯಪ್ಪ ಹೇಳಿದರು.

Advertisement

ನಗರದ ಕೆಎಂಎಚ್‌ ಸಭಾಂಗಣದಲ್ಲಿ ತಾಲೂಕು, ಬಿಜೆಪಿ ಜಿಪಂ ನಗರ ಪ್ರಕೋಷ್ಠದ ವತಿಯಿಂದ ನಡೆದ ಸೇವೆ ಮತ್ತು ಸಮರ್ಪಣ ದಿನದ ಪ್ರಯುಕ್ತ ಹಿರಿಯ ನಾಗರಿಕರಿಗೆ ಹೊದಿಕೆ ವಿತರಿಸಿ ನಂತರ ಮಾತನಾಡಿದ ಅವರು, ನಗರಸಭೆಯಲ್ಲಿ ಬಿಜೆಪಿ ಆಡಳಿತಕ್ಕೆ ಬರಲು ಎರಡು ಸ್ಥಾನಗಳ ಕೊರತೆ ತುಂಬಿಕೊಳ್ಳಲು ಮಾತುಕತೆಗಳನ್ನು ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರಿದ ಅಧ್ಯಕ್ಷ ದಿಬ್ಬೂರು ಜಯಣ್ಣ ಆರಂಭಿಸಿದ್ದಾರೆ.

ಇದನ್ನೂ ಓದಿ:- ಪ್ರಧಾನಿ ಮೋದಿಗೆ ರೈತರ ಮೇಲೆ ಅಷ್ಟೋಂದು ದ್ವೇಷವೇಕೆ : ಕೇಜ್ರಿವಾಲ್

ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಬಿಜೆಪಿ ಬೆಂಬಲಿಸಿರುವುದರಿಂದ ಅಧಿಕಾರ ಪಡೆಯುವ ವಿಶ್ವಾಸವಿದೆ. ವಿವಿಧ ವಾರ್ಡ್ಗಳಲ್ಲಿ ಸೋಲು ಕಂಡಿರುವ ಅಭ್ಯರ್ಥಿಗಳು ಎದೆಗುಂದದೆ ಕೆಲಸ ಮಾಡುವ ಮೂಲಕ ಪಕ್ಷ ಸಂಘಟನೆ ಹಾಗೂ ಮುಂದಿನ ಬಾರಿ ಮತ್ತೆ ಗೆಲ್ಲಲು ಜನರ ವಿಶ್ವಾಸ ಗಳಿಸಬೇಕು ಎಂದರು. ಮತದಾರರಿಗೆ ಕಾಂಗ್ರೆಸ್‌ ಮೇಲೆ ವಿಶ್ವಾಸವಿಲ್ಲ: ಒಂದು ಕಾಲದಲ್ಲಿ ಈ ದೇಶದಲ್ಲಿ ಬಿಜೆಪಿ ಎಂದೂ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎನ್ನುತ್ತಿದ್ದವರು. ಇಂದು ಬಿಜೆಪಿಗೆ ಮತ ನೀಡುವ ಮೂಲಕ ಅಧಿಕಾರಕ್ಕೆ ತರುತ್ತಿದ್ದಾರೆ. ಪ್ರಧಾನ ಮಂತ್ರಿ ಮೋದಿ ಅವರ ಉತ್ತಮ ಆಡಳಿತ, ದೇಶದ ಭದ್ರತೆ ಹಾಗೂ ಭಾರತದ ಬಗ್ಗೆ ವಿದೇಶಿಯರಲ್ಲಿ ಮೂಡಿರುವ ಗೌರವಯುತ ಭಾವನೆಯೇ ಕಾರಣವಾಗಿದೆ.

ದೇಶದ ಜನರಿಗೆ ಕಾಂಗ್ರೆಸ್‌ನವರು ಜಾತಿ ನೆಪದಲ್ಲಿ ಜನರನ್ನು ವಿಭಜನೆ ಮಾಡಿ ಆಡಳಿತ ನಡೆಸುತ್ತಿದ್ದ ದಿನಗಳು ಈಗ ದೂರವಾಗಿವೆ. ಮತದಾರರಿಗೆ ಕಾಂಗ್ರೆಸ್‌ ಮೇಲಿನ ವಿಶ್ವಾಸ ದೂರವಾಗಿದೆ ಎಂದರು. ಬಿಜೆಪಿ ಸಾಧನೆ ತಿಳಿಸಿ: ಜಿÇÉಾ ಫಲಾನುಭವಿಗಳ ಪ್ರಕೋಷ್ಠದ ಧೀರಜ್‌ ಮುನಿರಾಜು ಮಾತನಾಡಿ, ಬಿಜೆಪಿ ತಾಲೂಕಿನಲ್ಲಿ ಸದೃಢವಾಗಿದ್ದು, ಪಕ್ಷದ ಕಾರ್ಯಕರ್ತರು ದೃತಿಗೆಡಬಾರದು. ಸಾಮಾಜಿಕ ಕಾರ್ಯಗಳ ಮೂಲಕ ಜನರ ಹತ್ತಿರಕ್ಕೆ ಹೋಗಿ ಬಿಜೆಪಿ ಸಾಧನೆಗಳನ್ನು ತಿಳಿಸಬೇಕು ಎಂದರು.

Advertisement

ಬಿಜೆಪಿ ಜಿಲ್ಲಾ ಅಧ್ಯಕ್ಷ ನಾರಾಯಣಸ್ವಾಮಿ, ಜಿಪಂ ನಗರ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಕೆ.ಎಚ್‌. ವೆಂಕಟರಾಜು, ಕಸಬಾ ವಿಎಸ್‌ಎಸ್‌ಎನ್‌ ಅಧ್ಯಕ್ಷ ಕೆ.ಎಚ್‌. ರಂಗರಾಜು, ಮುಖಂಡ ಡಿ.ವಿ.ನಾರಾಯಣ ಶರ್ಮ, ಜೋ.ನ. ಮಲ್ಲಿಕಾರ್ಜುನ್‌, ಪುಟ್ಟಬಸವ ರಾಜು, ನಾಗರಾಜ್, ಆವಲಕೊಂಡಪ್ಪ, ವತ್ಸಲಾ, ಉಮಾಮಹೇಶ್ವರಿ, ಲೀಲಾ, ವಿನಾಯಕನಗರ ಕೃಷ್ಣ, ನಗರಸಭೆ ಸದಸ್ಯ ಬಂತಿ ವೆಂಕಟೇಶ್‌, ಪದ್ಮನಾಭ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next