Advertisement
ಮೀಸಲು ವಿಸ್ತರಣೆಗೆ ಕಾನೂನು ಅಂಗೀಕರಿಸಿ: ಜೈರಾಂ ರಮೇಶ್ಎಸ್ಸಿ, ಎಸ್ಟಿ ಹಾಗೂ ಒಬಿಸಿ ವರ್ಗಗಳ ಮೀಸಲನ್ನು ಶೇ.50ರ ಮಿತಿ ದಾಟಲು ಅನುಮತಿಸುವಂಥ ಕಾನೂನು ತಿದ್ದುಪಡಿಗೆ ಸಂಸತ್ತು ಅನುಮೋದನೆ ನೀಡಬೇಕು ಹಾಗೂ ರಾಜ್ಯ ಮತ್ತು ಕೇಂದ್ರಗಳ ಕಾನೂನುಗಳಿಗೆ ನ್ಯಾಯಾಲಯದ ಅನುಮೋ ದನೆಯಿಂದ ವಿನಾಯಿತಿ ನೀಡುವ ಸಂವಿಧಾನದ 9ನೇ ಶೆಡ್ಯೂಲ್ ವ್ಯಾಪ್ತಿಗೆ ಮೀಸಲು ಕೋಟಾ ವಿಸ್ತರಣೆ ಮಿತಿ ಕಾನೂನನ್ನೂ ಸೇರ್ಪಡೆಗೊಳಿಸ ಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆಗ್ರಹಿಸಿ ಟ್ವೀಟ್ ಮಾಡಿ ದ್ದಾರೆ. ಬಿಹಾರದಲ್ಲಿ ಮೀಸಲು ಕೋಟಾ ವಿಸ್ತರಣೆ ಕುರಿತು ರೂಪಿಸಿರುವ ಕಾನೂನನ್ನು 9ನೇ ಶೆಡ್ಯೂಲ್‌ಗೆ ಸೇರಿಸುವಂತೆ ಜೆಡಿಯು ಆಗ್ರಹದ ಬೆನ್ನಲ್ಲೇ ಜೈರಾಮ್ ಈ ಟ್ವೀಟ್ ಮಾಡಿದ್ದಾರೆ.