ಲೋಕಸಭಾ ಚುನಾವಣೆಗೂ ಮುನ್ನ ಮಂಡಿಸಲ್ಪಟ್ಟ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಬಗ್ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಂಗಾಮಿ ವಿತ್ತ ಸಚಿವ ಪಿಯುಶ್ ಗೋಯೆಲ್ ಅವರು ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ರೈತರ ಸಾಲ ಮನ್ನಾ ನಿರೀಕ್ಷೆ ಹುಸಿಯಾಗಿದೆ. ಅಸಂಘಟಿತ ಕಾರ್ಮಿಕರಿಗೆ, ವೃದ್ಧರ ಪಿಂಚಣಿ ಹೆಚ್ಚಳಕ್ಕೆ ಸ್ವಾಗತ.
ಚಿಕ್ಕಬಳ್ಳಾಪುರ: ಲೋಕಸಭಾ ಚುನಾ ವಣೆ ಹೊಸ್ತಿಲ್ಲಲ್ಲಿರುವಾಗ ಕೇಂದ್ರ ಸರ್ಕಾರ ಶುಕ್ರವಾರ ಮಂಡಿಸಿದ ಮಧ್ಯಂತರ ಬಜೆಟ್ ಬಗ್ಗೆ ಜಿಲ್ಲೆಯ ಜನತೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರೈತರಿಗೆ ವಾರ್ಷಿಕ 6 ಸಾವಿರ ರೂ. ಪ್ರೋತ್ಸಾಹ ದನ ನೀಡುವ ಕೇಂದ್ರ ಸರ್ಕಾರದ ಕ್ರಮವನ್ನು ಹಲವರು ಸ್ವಾಗತಿಸಿದರೆ, ಜಿಲ್ಲೆಯ ಕೆಲ ರೈತ ಸಂಘ ಟನೆಗಳು ಇದು ರೈತರಿಗೆ ಮಾಡಿದ ಅಪಮಾನ ಎಂದು ಆಕ್ರೋಶ ವ್ಯಕ್ತ ಪಡಿಸಿವೆ. ಒಟ್ಟಾರೆ ಕೇಂದ್ರ ಬಜೆಟ್‌ಗೆ ಬಿಜೆಪಿ ಸಂತಸ ವ್ಯಕ್ತಪಡಿಸಿದರೆ ಕಾಂಗ್ರೆಸ್, ಸಿಪಿಎಂ, ಜೆಡಿಎಸ್ ಪಕ್ಷಗಳು ಕೆಂಡಕಾರಿವೆ.
ಕೇಂದ್ರ ಸರ್ಕಾರ ಈಗ ಮಂಡಿಸಿ ರುವ ಬಜೆಟ್ನ್ನು ಮೊದಲ ವರ್ಷದಲ್ಲಿ ಮಂಡಿಸಿದಿದ್ದರೆ ನಾನು ತುಂಬ ಹೃದಯದಿಂದ ಸ್ವಾಗತಿಸುತ್ತಿದ್ದೆ ಎಂದು ಹೇಳುವ ಮೂಲಕ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಡಾ.ಕೆ.ಸುಧಾಕರ್ ಮೋದಿರವರ ಕೊನೆ ಬಜೆಟ್ನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಆದರೂ ಈ ಬಜೆಟ್‌ಗೆ ಮಹತ್ವ ಕೊಡಬೇಕಿಲ್ಲ ಎಂದು ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ರೈತರನ್ನು ಸಂಪೂರ್ಣವಾಗಿ ಕಡೆ ಗಣಿಸಲಾಗಿದೆ. ಕೃಷಿ ವಲಯಕ್ಕೆ ಉತ್ತೇಜನ ಸಿಕ್ಕಿಲ್ಲ. ಸಾಲ ಮನ್ನಾ, ನದಿ ಜೋಡಣೆ, ನೀರಾವರಿ ಸಮಸ್ಯೆಗಳ ಬಗ್ಗೆ ಕಿಂಚಿತ್ತು ಗಮನ ಕೊಟ್ಟಿಲ್ಲ ಎಂಬ ಆಕ್ರೋಶ ಜಿಲ್ಲೆಯ ರೈತ ಸಂಘಟನೆ ಗಳಿಂದ ವ್ಯಕ್ತವಾಗಿದೆ.
ಜಿಲ್ಲೆಗೆ ಏನು ಇಲ್ಲ: ಕೇಂದ್ರ ಸರ್ಕಾರ ಮಂಡಿಸಿದ ಕೊನೆ ಬಜೆಟ್‌ನಲ್ಲೂ ಜಿಲ್ಲೆಗೆ ಯಾವುದೇ ವಿಶೇಷ ಕೊಡುಗೆ ಇಲ್ಲ. ಜಿಲ್ಲೆಯಲ್ಲಿ ರೈಲು ನಿಲ್ದಾಣಗಳಿಗೆ ಮೂಲ ಸೌಕರ್ಯ, ಹೆಚ್ಚುವರಿ ರೈಲು, ಜಿಲ್ಲೆಯ ಬಹುದಿನಗಳ ಕನಸಾಗಿರುವ ಶಾಶ್ವತ ನೀರಾವರಿ, ಗ್ರಾಮೀಣ ಪ್ರದೇಶ ದಲ್ಲಿ ಕೈಗಾರಿಕೆಗಳ ಸ್ಥಾಪನೆ ಅಗತ್ಯವಾಗಿತ್ತು.
ಆದರೆ ಕೇಂದ್ರ ಸರ್ಕಾರ ಮಂಡಿಸಿ ಬಜೆಟ್ ಉತ್ತರ ಭಾರತಕ್ಕೆ ಸಿಂಹಪಾಲು ಸಿಕ್ಕರೂ ದಕ್ಷಿಣ ಭಾರತ ವನ್ನು ನಿರ್ಲಕ್ಷಿಸಿದೆಯೆಂಬ ಮಾತು ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಉಳಿದಂತೆ ಕೆಲ ಸಾಮಾ ಜಿಕ ಕಾರ್ಯಕ್ರಮಗಳಿಗೆ ಅನುದಾನ, ಪಿಂಚಣಿ ಹೆಚ್ಚಳ, ರೈತರಿಗೆ 6 ಸಾವಿರ ರೂ. ಸಹಾಯ ದನ ಮತ್ತಿತರ ಕಾರ್ಯ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.
* ಕಾಗತಿ ನಾಗರಾಜಪ್ಪ