Advertisement

Koppala; ಬಿಜೆಪಿಯವರು ಹಗಲು ಕನಸು ಕಾಣುತ್ತಿದ್ದಾರೆ: ಶಿವರಾಜ ತಂಗಡಗಿ

01:23 PM Aug 15, 2023 | Team Udayavani |

ಕೊಪ್ಪಳ: ಆರು ತಿಂಗಳಲ್ಲಿ ಸರಕಾರ ಬೀಳುತ್ತದೆ ಎಂಬ ಹೇಳಿಕೆ ನೀಡಿದ ಶಾಸಕ ಬಸನಗೌಡ ಯತ್ನಾಳರಿಗೆ ಯೋಗ್ಯತೆ ಇಲ್ಲ. ಅವರು ಹಗಲು ಗನಸು ಕಾಣುತ್ತಿದ್ದಾರೆ ಎಂದು ಹಿಂದುಳಿದ ವರ್ಗಗಳ ಇಲಾಖೆಯ ಸಚಿವ ಶಿವರಾಜ ತಂಗಡಗಿ ಹೇಳಿದರು.

Advertisement

ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಅವರು ಮೊದಲು ವಿರೋಧ ಪಕ್ಷದ ನಾಯಕರನ್ನು ಮಾಡಲಿ. ಅವರಿಗೆ ಅಡ್ಡ ದಾರಿ ಹಿಡಿದು ಹೋಗುವುದು ಗೊತ್ತಿದೆ. ಯತ್ನಾಳ, ಸಿ ಟಿ ರವಿ ಹಾಗು ಬೊಮ್ಮಾಯಿಯವರಾಗಲಿ ಮೊದಲು ತಮ್ಮ ಪಕ್ಷ ಸರಿ ಪಡಿಸಿಕೊಳ್ಳಲಿ ಎಂದರು.

ಬಿಜೆಪಿಯವರಿಗೆ ದೇಶವು ಶಾಂತಿಯುತವಾಗಿರುವುದು ಬೇಡವಾಗಿದೆ. ಸರಕಾರ ಬಂದು ಎರಡೂವರೆ ತಿಂಗಳಾಗಿದೆ. ಆದರೆ ಪ್ರತಿಪಕ್ಷಗಳಿಗೆ ಸಮಾಧಾನವಿಲ್ಲ, ನಮ್ಮ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದರಿಂದ ಅವರಿಗೆ ಹೊಟ್ಟೆಕಿಚ್ಚು ಉಂಟಾಗಿದೆ ಎಂದರು.

ಭ್ರಷ್ಟಾಚಾರ ಪ್ರಕರಣಗಳ ತನಿಖೆ ಮಾಡಲಿ ಎಂದಿರುವ ಯತ್ನಾಳರು ಮೊದಲು ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಿ. ನಾವು ತನಿಖೆ ಸಹಕರಿಸುತ್ತೇವೆ ಎಂದರು.

ಸಿಂಗಟಾಲೂರು ಏತ ನೀರಾವರಿ ಆರಂಭವಾಗಿ ದಶಕವಾಗಿದೆ. ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳನ್ನು ನೆನೆಗುದಿಗೆ ಬಿದ್ದಿರುವದನ್ನು ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು. ನವಲಿ ಜಲಾಶಯಗಳನ್ನು ಕುರಿತು ಸಭೆ ನಡೆಸಲಾಗುವುದು ಎಂದರು.

Advertisement

ತೋಟಗಾರಿಕೆ ಪಾರ್ಕ್ ಕುರಿತು ಹಿಂದಿನ ಸರಕಾರ ಕೇವಲ ಬಜೆಟ್ಟಿನಲ್ಲಿ ಘೋಷಣೆ ಮಾಡಿದೆ. ಈಗ ಭೂ ಸ್ವಾದೀನ ಮಾಡುವ ಕುರಿತು ಸಭೆ ನಡೆಸಿ ಅನುಷ್ಠಾನಗೊಳಿಸಲಾಗುವುದು ಎಂದರು.

ಕೊಪ್ಪಳ ಜಿಲ್ಲೆಯಲ್ಲಿ ಜಾನಪದ ಲೋಕಕ್ಕೆ 3.50 ಕೋಟಿ ರೂಪಾಯಿ ನೀಡಲಾಗುವುದು. ಈ ಕುರಿತು ಜಾಗೆ ಗುರುತಿಸಲಾಗುವುದು. ಇಷ್ಟರಲ್ಲಿಯೇ ಈ ಕುರಿತು ಸ್ಥಳ ನಿಗದಿ ಮಾಡಿ ಕಾರ್ಯ ಆರಂಭಿಸಲಾಗುವುದು ಎಂದರು.

ಅಂಜನಾದ್ರಿ ಅಭಿವೃದ್ದಿಗೆ 100 ಕೋಟಿ ರೂಪಾಯಿ ಪ್ರಚಾರಕ್ಕಾಗಿದೆ. ಇಲ್ಲಿ ಏನು ಅಭಿವೃದ್ದಿಗೆ ಆಗಿಲ್ಲ. ಇಲ್ಲಿಯ ವರೆಗೆ ಕೇವಲ 21 ಕೋಟಿ ರೂಪಾಯಿ ಯೋಜನೆ ಆರಂಭವಾಗಿದೆ. ಈ ಕುರಿತು ಶೀಘ್ರ ಮುಖ್ಯಮಂತ್ರಿಗಳ ಕರೆದುಕೊಂಡು ಬಂದು ಸಭೆ ನಡೆಸಲಾಗುವುದು. ಅಂಜನಾದ್ರಿ ಅಭಿವೃದ್ದಿಗೆ ಪ್ರವಾಸೋದ್ಯಮ ಸಚಿವರು ಸಭೆ ನಡೆಸಲಾಗುವುದು ಎಂದರು.

ಕಿಷ್ಕಂದಾ ಜಿಲ್ಲೆಯಾಗುವ ಕುರಿತು ರೂಪರೇಷ ಇನ್ನೂ ಆರಂಭವಾಗಿಲ್ಲ. ಈ ಕುರಿತು ಜನರ ಒತ್ತಾಯವಿದೆ. ಆದರೆ ನನಗೆ ಈ ಬಗ್ಗೆ ಮಾಹಿತಿ ಇಲ್ಲ ಎಂದರು.

ಜಿಲ್ಲೆಯಲ್ಲಿ ಮಾಫಿಯಾ ನಮಗೆ ಚಾಲೆಂಜಾಗಿಲ್ಲ. ಇಲ್ಲಿಯ ಅಕ್ರಮವನ್ನು ತಡೆಯುತ್ತೇವೆ. ಬೂದುಗುಂಪಾದಲ್ಲಿ ಅಕ್ರಮದಿಂದಲೇ ಗಲಾಟೆಯಾಗಿದೆ. ತನಿಖೆಯಾದ ನಂತರ ಕ್ರಮ ಕೈಗೊಳ್ಳುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next