Advertisement

ಬೆಳಗ್ಗೆ ಎದ್ದು ಹಿಂದೂ ಹಿಂದೂ ಎನ್ನುವ ಬಿಜೆಪಿಯವರು ದೇವಸ್ಥಾನ ಒಡೆಯುತ್ತಿದ್ದಾರೆ: ರೇವಣ್ಣ

12:26 PM Sep 14, 2021 | Team Udayavani |

ಬೆಂಗಳೂರು: ಬೆಳಗ್ಗೆ ಎದ್ದರೆ ನಾವು ಹಿಂದೂ ಹಿಂದೂ ಎನ್ನುವ ಬಿಜೆಪಿಯವರು ಇದೀಗ ಹಿಂದೂ ದೇವಸ್ಥಾನ ಒಡೆಯುತ್ತಿದ್ದಾರೆ ಎಂದು ಜೆಡಿಎಸ್ ನಾಯಕ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು.

Advertisement

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಂಜನಗೂಡಿನ ದೇವಸ್ಥಾನಕ್ಕೆ‌ ತನ್ನದೇ ‌ಇತಿಹಾಸ‌ವಿದೆ. ಪುರಾತನ ಕಾಲದಲ್ಲಿ‌ ದೇವಸ್ಥಾನ ನಿರ್ಮಿಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶ ಪಾಲನೆ ಬೇಡವೆಂದು ಹೇಳುತ್ತಿಲ್ಲ. ಆದರೆ ದೇವಸ್ಥಾನ ಸಮಿತಿ ಜೊತೆ ಚರ್ಚಿಸಬೇಕು. ಪರ್ಯಾಯ ದೇವಸ್ಥಾನ ನಿರ್ಮಿಸಿ ನಂತರ ತೆರವು ಮಾಡಲಿ ಎಂದರು.

ಇದನ್ನೂ ಓದಿ:ಸುಗಮ ಕಲಾಪ‌ ನಡೆಸುವ ಸ್ಪೀಕರ್ ಅಭಿಪ್ರಾಯಕ್ಕೆ ಪ್ರತಿಪಕ್ಷದಿಂದ ಸಿಗದ ಸಹಮತ

ಜೆಡಿಎಸ್ ಇಲ್ಲದೆ ಅಧಿಕಾರವಿಲ್ಲ: ಜೆಡಿಎಸ್ ಮುಳಗುವ ದೋಣಿ ಎನ್ನುತ್ತಿದ್ದರು. ಮುಳಗುವಾಗ ಹೇಗೆ ಮೇಲೆತ್ತುವುದು‌ ಗೊತ್ತಿದೆ. ಸಮುದ್ರದ ಸಬ್‌ಮೆರಿನ್ ಮಷಿನ್ ನಮ್ಮ‌ ಬಳಿ ಇದೆ. ಯಾವಾಗ ಮೇಲೆತ್ತಬೇಕು, ಯಾವಾಗ ಮುಳುಗಿಸಬೇಕು ಗೊತ್ತಿದೆ. ಸಬ್‌ಮೆರಿನ್ ಯಂತ್ರ ರಿಪೇರಿ ಮಾಡಿದ್ದೇವೆ. ದೇವೇಗೌಡರು, ಕುಮಾರಸ್ವಾಮಿ ಅದನ್ನು ನೋಡಿಕೊಳ್ಳುತ್ತಾರೆ. 2023ಕ್ಕೆ‌ ಜೆಡಿಎಸ್ ಇಲ್ಲದೆ ಅಧಿಕಾರ ಮಾಡಲು ಸಾಧ್ಯವಿಲ್ಲ ಎಂದು ರೇವಣ್ಣ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next