Advertisement

ಬಿಜೆಪಿಗೆ ಬಹುಮತ ಖಚಿತ: ಈಶ್ವರಪ್ಪ

11:14 PM Dec 07, 2019 | Lakshmi GovindaRaj |

ಸಾಗರ: ಸರ್ಕಾರ ರಚನೆಯಾದಾಗಿನಿಂದ ಈ ತನಕ ಅದನ್ನು ಉಳಿಸಿಕೊಳ್ಳುವ ಬಗ್ಗೆಯೇ ಹೆಚ್ಚು ಗಮನ ನೀಡಿದ್ದೇವೆ. ಆದರೆ, ಡಿ. 5ರಂದು ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಗೆ ಬೇಕಾದ ಬಹುಮತ ಬರುವ ಎಲ್ಲ ಸಾಧ್ಯತೆ ಇದೆ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಹುಮತದೊಂದಿಗೆ ಇರಲಿದೆ. ಯಡಿಯೂರಪ್ಪನವರು ಮುಂದಿನ ಮೂರೂವರೆ ವರ್ಷ ಮುಖ್ಯಮಂತ್ರಿ ಗಳಾಗಿ ಮುಂದುವರಿಯುತ್ತಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಆ ಸಂದರ್ಭದಲ್ಲಿ ಕಂದಾಯ ಇಲಾಖೆ ಸೇರಿ ವಿವಿಧ ಇಲಾಖೆಗಳ ಅಭಿವೃದ್ಧಿಗೆ ಗಮನ ಹರಿಸಲಾಗುತ್ತದೆ ಎಂದರು.

ಎನ್‌ಕೌಂಟರ್‌ಗೆ ಸ್ವಾಗತ: ಹೈದರಾಬಾದ್‌ನ ಪಶುವೈದ್ಯೆ ಅತ್ಯಾಚಾರಿಗಳ ಎನ್‌ಕೌಂಟರ್‌ನ್ನು ವೈಯಕ್ತಿವಾಗಿ ಸ್ವಾಗತಿಸುತ್ತೇನೆ. ಕೆಲವರು ಇದನ್ನು ವಿರೋಧ ಮಾಡುತ್ತಿರುವುದು ನಿಜಕ್ಕೂ ದುರದೃಷ್ಟಕರ ಸಂಗತಿ. ಅತ್ಯಾಚಾರ ಮಾಡುವವರಿಗೆ ಇಲ್ಲದ ಕಾನೂನು ಎನ್‌ಕೌಂಟರ್‌ ಮಾಡುವವರಿಗೆ ಇರಬೇಕು ಎಂದು ಬಯಸುವುದೇ ತಪ್ಪು.

ಯಾರು ಇಂತಹ ಹೇಳಿಕೆ ನೀಡುತ್ತಾರಲ್ಲಾ ಅವರ ಮನೆಯಲ್ಲಿ ಇಂತಹ ಘಟನೆಯಾದರೆ ಏನು ಮಾಡುತ್ತಾರೆ ಎಂದು ನೋಡಬೇಕು. ಇಂತಹ ಘಟನೆ ನಡೆದಾಗ ದೇಶ ಒಟ್ಟಾಗಿ ನಿಂತು ಕೃತ್ಯವನ್ನು ವಿರೋಧಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next