Advertisement

ಬಿಬಿಎಂಪಿ ಚುನಾವಣೆ ಗೆಲ್ಲಲು ಬಿಜೆಪಿ ಸರ್ವ ಸನ್ನದ್ಧ: ಸಚಿವ ಆರ್. ಅಶೋಕ್

06:52 PM Aug 01, 2022 | Team Udayavani |

ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಬಿಜೆಪಿ ಸರ್ವ ಸನ್ನದ್ಧವಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಸೋಮವಾರ ಹೇಳಿದ್ದಾರೆ.

Advertisement

ಬಿಬಿಎಂಪಿ ಚುನಾವಣೆಯ ಸಲುವಾಗಿ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಪಕ್ಷದ ರಾಜ್ಯಾಧ್ಯಕ್ಷರು, ನಗರದ ಶಾಸಕರು, ಸಂಸದರು, ಪದಾಧಿಕಾರಿಗಳ ಸಭೆಯ ಬಳಿಕ ಮಾತನಾಡಿದ ಸಚಿವ ಆರ್ ಅಶೋಕ್ ಅವರು , ನಮ್ಮೆಲ್ಲಾ ಶಾಸಕರು, ಪದಾಧಿಕಾರಿಗಳು ಎರಡು ಗಂಟೆಗೂ ಹೆಚ್ಚು ಕಾಲ ಚರ್ಚೆ ಮಾಡಿದ್ದೇವೆ. ಈಗಾಗಲೇ ಕೋರ್ಟ್ ಕೂಡ ಸೂಚನೆ ನೀಡಿದೆ. ಚುನಾವಣೆ ತಯಾರಿ ಪ್ರಾರಂಭವಾಗಿದೆ. ಮತದಾರರ ಪಟ್ಟಿ ಗೆ ಸೇರಿಸುವುದು, ಬೂತ್ ಮಟ್ಟದಿಂದ ಜಿಲ್ಲಾಮಟ್ಟದ ವರೆಗೆ ಕಾರ್ಯಕರ್ತರ ಸಭೆ ನಡೆಸುತ್ತಿದ್ದೇವೆ. ಬಿಜೆಪಿ ಪರವಾಗಿ ವಾತಾವರಣ ಇದೆ. ಬೆಂಗಳೂರಿನಲ್ಲಿ ಬಾಕಿ ಉಳಿದಿರುವ ಕಾಮಗಾರಿಗೆ ಕೂಡಲೇ ಹಣ ಬಿಡುಗಡೆ ಮಾಡಲಾಗುವುದು. ಯಾವ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿಲ್ಲ, ಅಲ್ಲಿ ವಿಧಾನಪರಿಷತ್ ಸದಸ್ಯರು ಹಾಗೂ ಸಂಸದರಿಗೆ ಉಸ್ತುವಾರಿ ನೀಡಲಾಗುವುದು ಎಂದರು.

ಎಫ್ ಡಿ ಐ ,ಕೆ ಎಫ್ ಡಿ , ಕೆ ಆರ್ ಎಸ್ , ಆಮ್ ಆದ್ಮಿ ಈ ರೀತಿಯ ಪಕ್ಷಗಳ ಬಗ್ಗೆ ಕೂಡ ಚರ್ಚೆ ಆಗಿದೆ. ಬಿಜೆಪಿ ಗೆಲ್ಲುವುದರಲ್ಲಿ ಯಾವ ಅನುಮಾನವೂ ಇಲ್ಲ. ಮೀಸಲಾತಿ ನಿಗದಿ ಪಡಿಸುವದನ್ನು ಸಿಎಂ ಹಾಗೂ ಅಧಿಕಾರಿಗಳು ಮಾಡುತ್ತಾರೆ. ಅದು ಸರ್ಕಾರದ ಕೆಲಸ, ಪಕ್ಷದ್ದಲ್ಲ ಎಂದರು.

ಯಾವುದೇ ಚುನಾವಣೆ ಬಂದರೂ ಅದು ಯುದ್ದವೇ. ಚುನಾವಣೆ ಘೋಷಣೆ ಆದ ಬಳಿಕ ಯುದ್ದ ಆರಂಭ. ನಮ್ಮದೇ ಸರ್ಕಾರವಿದೆ, ನಮ್ಮ ಕಾರ್ಯ ಯೋಜನೆ ರೂಪಿಸುತ್ತೇವೆ. ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಆಮ್ ಆದ್ಮಿ ಉತ್ತರ ಭಾರತದಲ್ಲಿ ಪ್ರಭಾವ ಬೀರಬಹುದು. ಇಲ್ಲಿ ಅದಕ್ಕೆ ಅಸ್ತಿತ್ವ ಇಲ್ಲ. ಒಂದು ವಾರದಲ್ಲಿ ಮೀಸಲಾತಿ ನಿಗದಿಪಡಿಸುವಂತೆ ಕೋರ್ಟ್ ಸೂಚಿಸಿದೆ ಎಂದರು.

ಎಸ್ ಡಿಪಿಐ , ಪಿಎಫ್ ಐ ಸಂಘಟನೆಗಳನ್ನು ಬ್ಯಾನ್ ಮಾಡಬೇಕು ಎನ್ನುವುದು ನನ್ನ ಅಭಿಪ್ರಾಯ. ಈ ಕುರಿತು ಸಿಎಂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಿ. ಸಿಎಂ ಜತೆ ಯೂ ಚರ್ಚಿಸುತ್ತೇನೆ, ಬ್ಯಾನ್ ಮಾಡುವುದು ಕೇಂದ್ರ ಸರ್ಕಾರಕ್ಕೆ ಬಿಟ್ಟದ್ದು ಎಂದರು.

Advertisement

ಕಾಂಗ್ರೆಸ್‌ನಲ್ಲಿ ಇರುವ ತರ ಸಿಎಂ ಗಾದಿಗೆ, ಅಥವಾ ಇತರ ಹುದ್ದೆಗೆ ನಮ್ಮಲ್ಲಿ ಜಗಳ ಇಲ್ಲ. ನಾವು ಪಕ್ಷದ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ವ್ಯಕ್ತಿ ‌ಕೇಂದ್ರಿತವಾಗಿ ಅಲ್ಲ. ಎಲ್ಲ ಮುಖಂಡರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ನಮ್ಮದು ವ್ಯಕ್ತಿ ಆಧಾರಿತ ಪಕ್ಷವಲ್ಲ. ಸುಪ್ರೀಂ ಕೋರ್ಟ್ ಏಳು ದಿನ ಗಡುವು ನೀಡಿದೆ. ಯಾವಾಗ ಚುನಾವಣೆ ಆಗಬೇಕು ಅಂತ ಕೋರ್ಟ್ ಸೂಚಿಸಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next