Advertisement

ಬಿಜೆಪಿ ಶಿಸ್ತಿನ ಪಕ್ಷ; ಕಾಂಗ್ರೆಸ್ ನ ಅಶಿಸ್ತು ನಮ್ಮ ಪಕ್ಕಕ್ಕೂ ಕಾಲಿಟ್ಟಿದೆ: ಈಶ್ವರಪ್ಪ

12:32 PM Jun 28, 2023 | Team Udayavani |

ಶಿವಮೊಗ್ಗ: ಕಾಂಗ್ರೆಸ್ ನ ಅಶಿಸ್ತು ನಮ್ಮ ಪಕ್ಕಕ್ಕೂ ಕಾಲಿಟ್ಟಿದೆ. ಬಿಜೆಪಿ ಶಿಸ್ತಿನ ಪಕ್ಷ. ಸಿ.ಟಿ. ರವಿ, ಪ್ರತಾಪ್ ಸಿಂಹ ಅಡ್ಜಸ್ಟ್ಮೆಂಟ್ ಬಗ್ಗೆ ಮಾತನಾಡಿದ್ದಾರೆ.  ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಕೆಲವು ಗೊಂದಲಕಾರಿ ಹೇಳಿಕೆಗಳು ಬರ್ತಿವೆ. ಇದು ಪಕ್ಷದ ಅಶಿಸ್ತು ಹೆಚ್ಚು ಮಾಡುತ್ತಿದೆ. ಪಕ್ಷದ ಕಾರ್ಯಕರ್ತರಲ್ಲೂ, ಮುಖಂಡರಲ್ಲೂ ಗೊಂದಲ ಮೂಡಿಸುತ್ತದೆ. ಬಿಜೆಪಿ ಶಿಸ್ತಿನ ಪಕ್ಷವಾಗಿದೆ. ಈ ರೀತಿಯಾಗದಂತೆ, ಪಕ್ಷದ ಮುಖಂಡರು ಗಮನ ಹರಿಸುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನ ಆಶಿಸ್ತು ನಮ್ಮ ಪಕ್ಷಕ್ಕೂ ಕಾಲಿಟ್ಟಿದೆ ಎಂದು ಹಲವಾರು ಬಾರಿ ಹೇಳಿದ್ದೇನೆ. ನಾನು ರೇಣುಕಾಚಾರ್ಯ, ಯತ್ನಾಳ್ ಸೇರಿದಂತೆ ಹಲವರ ಬಳಿ ಯಾವುದೇ ಗೊಂದಲಕಾರಿ ಹೇಳಿಕೆ ನೀಡದಂತೆ ಮನವಿ ಮಾಡುತ್ತೆನೆ ಎಂದರು.

ಹಾವೇರಿಯಲ್ಲಿ ಕೆ.ಈ. ಕಾಂತೇಶ್ ಗೆ ಟಿಕೆಟ್ ಕೊಡಬೇಕೆಂಬ ಒತ್ತಾಯವಿದೆ. ಈ ಬಗ್ಗೆ ಪಕ್ಷದ ನಾಯಕರು ನಿರ್ಧಾರ ಮಾಡುತ್ತಾರೆ ಎಂದರು.

ಹುಬ್ಬಳ್ಳಿ ಪತ್ರಿಕಾಗೋಷ್ಠಿ ವಿಚಾರವನ್ನು ಉಲ್ಲೇಖಿಸಿದ ಈಶ್ವರಪ್ಪ, ನಾನು ಆ ಪತ್ರಿಕಾಗೋಷ್ಠಿಯಲ್ಲಿ ಬಾಂಬೆ ಬಾಯ್ಸ್ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಆದರೆ, ನಾನು ಪತ್ರಿಕಾಗೋಷ್ಠಿ ಮುಗಿಸಿ ಐಬಿಗೆ ಹೋದಾಗ ಟಿವಿ ಗಮನಿಸಿದೆ. ಬೇರೆ ಯಾವ ಚಾನಲ್ ನಲ್ಲೂ ಪ್ರಸ್ತಾಪವಾಗಿಲ್ಲ. ನಾನು ಆ ಟಿವಿ ವರದಿಗಾರನಿಗೆ ಫೋನ್ ಮಾಡಿ ಮಾತನಾಡಿದೆ. ಅವರು ಬದಲಾವಣೆ ಮಾಡುವುದರೊಳಗೆ ಇಡೀ ಪ್ರಪಂಚಕ್ಕೆ ವಿಷಯ ಗೊತ್ತಾಗಿತ್ತು. ಅವರೆಲ್ಲರೂ ನೋವು ಮಾಡಿಕೊಂಡಿದ್ದಾರೆ. ನನಗೂ ಈ ಬೆಳವಣಿಗೆಯಿಂದ ನೋವಾಗಿದೆ. ಬಾಂಬೆ ಬಾಯ್ಸ್ ನಿಂದಾಗಿಯೇ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹೇಳದೇ ಇರುವ ಅಂಶದ ಬಗ್ಗೆ ಆ ಚಾನಲ್ ನವರು ಪ್ರಸ್ತಾಪಿಸಿದ್ದಾರೆ. ಹೇಳದೇ ಇರುವ ವಿಷಯ ಪ್ರಸ್ತಾಪಿಸಿದರೆ, ಪಕ್ಷದಲ್ಲಿ ಗೊಂದಲ ಉಂಟಾದರೆ, ಯಾರು ಹೊಣೆ ಎಂದು ಪ್ರಶ್ನಿಸಿದರು.

ಲೋಕಸಭೆ, ತಾ.ಪಂ., ಜಿ.ಪಂ ಚುನಾವಣೆ ಹಿನ್ನೆಲೆಯಲ್ಲಿ 28 ಕ್ಷೇತ್ರಗಳಲ್ಲಿ ಪ್ರವಾಸ ಹಮ್ಮಿಕೊಳ್ಳಲಾಗುತ್ತಿದೆ. 7 ತಂಡಗಳಲ್ಲಿ ನಾವು ಪ್ರವಾಸ ಹಮ್ಮಿಕೊಳ್ಳುತ್ತಿದ್ದೆವೆ. ಎರಡ್ಮೂರು ಜಿಲ್ಲೆಗಳಲ್ಲಿ ಸಭೆಯಲ್ಲಿ ಗೊಂದಲವಾಗಿದೆ. ಇದನ್ನು ನಾವು ಸರಿಪಡಿಸಿಕೊಳ್ಳುತ್ತೇವೆ ಎಂದು ಈಶ್ವರಪ್ಪ ಹೇಳಿದರು.

Advertisement

ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಸ್ತಾಪಿಸುತ್ತೇವೆ. ಇದನ್ನು ಜಾರಿಗೆ ತರುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಜನರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಅಕ್ಕಿ ಹಂಚಲು ಅಡ್ಡಿ ಬರುತ್ತಿದೆ ಎನ್ನುತ್ತಿರುವುದು ನಾಚಿಕೆಗೇಡಿನ ಸಂಗತಿ. ವಿದ್ಯುತ್ ದರ ಹೆಚ್ಚಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಜು. 3 ರಿಂದ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತದೆ. ಸದನದೊಳಗೂ, ಹೊರಗೂ ಪ್ರತಿಭಟನೆ ನಡೆಸಲಾಗುವುದು ಎಂದು ಈಶ್ವರಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next