ಅಥಣಿ: ಜನಾದೇಶಕ್ಕೆ ತೆಲೆ ಬಾಗುವೆ, ಅಧಿಕಾರದ ನಷೆ ನನಗಿಲ್ಲ, ಒಬ್ಬ ಶಾಸಕನಾಗಿ ಎನೇಲ್ಲ ಕೆಲಸ ಮಾಡಬೇಕು ಎಂಬುದನ್ನು ತೋರಿಸಿದ್ದು ನನಗೆ ತೃಪ್ತಿ ಇದೆ ಎಂದು ಮಾಜಿ ಶಾಸಕ ಮಹೇಶ ಕುಮಟಳ್ಳಿ ಮಾತನಾಡಿದರು.
ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿ, ರಾಜಕೀಯವಾಗಿ ನಾನು ಅಧಿಕಾರವನ್ನು ಎಂದು ಬಯಸಿಲ್ಲ, ಸುಮಾರು 2800 ಕೋಟಿ ರೂ. ಅನುದಾನ ಜನರಿಗೆ ತಲುಪಿಸಿದ್ದೇವೆ. ಮುಂದಿನ ದಿನಮಾನಗಳಲ್ಲಿ ಯಾರನ್ನೂ ದ್ವೇಸಿಸುವುದಿಲ್ಲ ಆದರೆ ದೌರ್ಜನ್ಯವನ್ನು ಸಹಿಸಲ್ಲ,ಹೋರಾಟದಿಂದ ಬಂದಂತವನು ನಾನು ಎಂದರು.
ತಹಶೀಲ್ದಾರ ಮತ್ತು ಪೊಲೀಸ್ ಠಾಣೆಗಳಲ್ಲಿ ರಾಜಕೀಯೆ ಮಾಡಿದರೆ ನಾವು ಸುಮ್ಮನಿರಲಾರೆವು, ವೈಯಕ್ತಿಕ ಯಾರದಲ್ಲ, ಬಾಬಾಸಾಹೇಬರು ಬರೆದ ಸಂವಿಧಾನದಿಂದ ಎಂದರು.
ಚುನಾವಣೆಯಲ್ಲಿ ಹಣದ ಹೊಳೆ ಹರೆದಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾವೆಲ್ಲ ಒಗ್ಗಟ್ಟಿನಿಂದ ದುಡಿದು ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡೋಣ ಎಂದರು.
ಕುಮಟಳ್ಳಿ ಅವರು ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಸವದಿ ಅವರ ಎದುರು ಬರೋಬ್ಬರಿ 76,112 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.